ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಕಾನೂನು ಸಾಕ್ಷರತಾ ರಥ

Last Updated 20 ಡಿಸೆಂಬರ್ 2012, 10:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪ್ರಾಧಿಕಾರದ ಉದ್ದೇಶಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಡಿ. 20ರಿಂದ ಜ. 6ರವರೆಗೆ ಜಿಲ್ಲೆಯಾದ್ಯಂತ ಕಾನೂನು ಸಾಕ್ಷರತಾ ರಥ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಕಾನೂನು ಅರಿವು, ನೆರವು ಹಾಗೂ ಜನತಾ ನ್ಯಾಯಾಲಯಗಳ ಮೂಲಕ ಪ್ರಕರಣಗಳನ್ನು ರಾಜಿ, ಸಂಧಾನದ ಮೂಲಕ ಇತ್ಯರ್ಥ ಮಾಡಲು ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ. 20ರಂದು ಬೆಳಿಗ್ಗೆ 9.45ಕ್ಕೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ  ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶ್ರೀನಿವಾಸ ಹರೀಶ್‌ಕುಮಾರ್ ಉದ್ಘಾಟಿಸುವರು.

ಡಿ. 20ರಿಂದ 22ರವರೆಗೆ ಕಾನೂನು ಸಾಕ್ಷರತಾ ರಥವು ಚಿತ್ರದುರ್ಗ ನಗರದ ಸಂತ ಜೋಸೆಫ್ ಕಾನ್ವೆಂಟ್, ಎಸ್‌ಆರ್‌ಎಸ್ ಕಾಲೇಜು, ಬಚ್ಚ ಬೋರನಹಟ್ಟಿ ಸರ್ಕಾರಿ ಮಾಧ್ಯಮಿಕ ಶಾಲೆ, ಪಂಡರಹಳ್ಳಿ ಸರ್ಕಾರಿ ಪಾಠಶಾಲೆ, ಗೊಡಬನಾಳ್ ಪ್ರೌಢಶಾಳೆ, ಮಠದ ಕುರುಬರಹಟ್ಟಿ, ದೊಡ್ಡ ಸಿದ್ದವ್ವನಹಳ್ಳಿ, ದಂಡಿನ ಕುರುಬರಹಟ್ಟಿ, ಹೊಸಕಲ್ಲಹಳ್ಳಿ ಗ್ರಾಮಗಳಲ್ಲಿ ಸಂಚರಿಸಲಿದೆ.

23ರಿಂದ 25ರವರೆಗೆ ಹೊಳಲ್ಕೆರೆ ತಾಲ್ಲೂಕಿನ ಪಾಡಿಗಟ್ಟೆ, ಬಾಣಗೆರೆ, ಚನ್ನಪಟ್ಟಣ, ಹೊಳಲ್ಕೆರೆ, ಮದ್ದೇರು, ತಾಳ್ಯ, ದೊಗ್ಗನಾಳ್, ದುಮ್ಮಿ, ಕಾಲ್ಕೆರೆ ಗ್ರಾಮ. ಹೊಸದುರ್ಗ ತಾಲ್ಲೂಕಿನಲ್ಲಿ 26ರಿಂದ 28  ಬಾಗೂರು, ಮಲ್ಲಪ್ಪನ ಹಳ್ಳಿ, ಕೊಂಡಾಪುರ, ಕಾರೇಹಳ್ಳಿ, ಗುಡ್ಡದನೇರಲಕೆರೆ, ಡಿ.ಟಿ. ಹಟ್ಟಿ, ಸೋಮೇನಹಳ್ಳಿ, ಕುರುಬರಹಳ್ಳಿ, ತಂಡಗ ಗ್ರಾಮಗಳಲ್ಲಿ ಸಂಚರಿಸಲಿದೆ.

ಡಿ.29ರಿಂದ 31ರವರೆಗೆ ಹಿರಿಯೂರು ತಾಲ್ಲೂಕಿನ ಶಿಡ್ಲಯ್ಯನ ಕೋಟೆ, ಖಂಡೇನಹಳ್ಳಿ, ಅಬ್ಬಿನಹೊಳೆ, ಕುರುಬರಹಳ್ಳಿ, ಪರಮೇನಹಳ್ಳಿ, ಎ.ವಿ. ಕೊಟ್ಟಿಗೆ, ತಾಳವಟ್ಟಿ, ಮಲ್ಲಪ್ಪನಹಳ್ಳಿ, ಗೊಲ್ಲಹಳ್ಳಿ, ಜನವರಿ 1ರಿಂದ 3ರವರೆಗೆ ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆ, ಹೊಟ್ಟೆಪ್ಪನಹಳ್ಳಿ, ಗೊರ‌್ಲಕಟ್ಟೆ, ಮತ್ಸಮುದ್ರ, ಚನ್ನಮ್ಮನಾಗತೀಹಳ್ಳಿ, ಪುರ‌್ಲಹಳ್ಳಿ, ಚಿಕ್ಕಮ್ಮನಹಳ್ಳಿ, ಗಿರಿಯಮ್ಮನಹಳ್ಳಿ, ತಿಮ್ಮಪ್ಪಯ್ಯನಹಳ್ಳಿ, ಜ. 4ರಿಂದ 6  ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮುರು, ಬೊಮ್ಮಲಿಂಗನಹಳ್ಳಿ, ಕಾರನಾಯಕನ ಹಳ್ಳಿ, ಭಟ್ಟಿಹಳ್ಳಿ, ಅಮಕುಂದಿ, ಅಶೋಕ ಸಿದ್ದಾಪುರ, ಮಲ್ಲಸಮುದ್ರ, ದೇವರಹಳ್ಳಿ, ಬೋಗನಹಳ್ಳಿ ಗ್ರಾಮಗಳಲ್ಲಿ ಕಾನೂನು ಸಾಕ್ಷರತಾರಥ ಸಂಚರಿಸಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT