ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ

ಅಂತಿಮ ಕ್ಷಣದವರೆಗೂ ಕುತೂಹಲ
Last Updated 12 ಸೆಪ್ಟೆಂಬರ್ 2013, 5:04 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿವಮೊಗ್ಗ ನಗರಸಭಾ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ಸೆ.12ರಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ನಡೆಯಲಿದೆ. ಅಧ್ಯಕ್ಷ ಸ್ಥಾನನ ಬಿಸಿಎಂ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನ ತಮ್ಮದಾಗಿಸಿಕೊಳ್ಳಲು ಕಾಂಗ್ರೆಸ್‌–ಬಿಜೆಪಿ ಶತಪ್ರಯತ್ನ ನಡೆಸಿದ್ದು, ಚುನಾವಣೆಯ ಫಲಿತಾಂಶ ಹೊರಬೀಳುವವರೆಗೂ ಕುತೂಹಲ ಕಾದಿದೆ. ಒಟ್ಟು 35 ಸ್ಥಾನನಗಳಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು 12 ಸ್ಥಾನ ಹೊಂದಿದ್ದು, ಬಿಜೆಪಿ 8, ಕೆಜೆಪಿ 7 ಸ್ಥಾನ ಗಳಿಸಿದ್ದು, ಜೆಡಿಎಸ್‌ 5, ಎಸ್‌ಡಿಪಿಐ 1, ಪಕ್ಷೇತರರು 2 ಸದಸ್ಯರಿದ್ದಾರೆ.

ಇದರಲ್ಲಿ ನಗರಸಭಾ ಸದಸ್ಯರೂ ಆದ ಶಿವಮೊಗ್ಗ ನಗರ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಅವರು ಸೇರಿದಂತೆ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ, ಇಬ್ಬರು  ಸಂಸದರು, ನಾಲ್ವರು ವಿಧಾನಪರಿಷತ್‌ ಸದಸ್ಯರು ಇದ್ದಾರೆ.

ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್‌, ಜೆಡಿಎಸ್‌ ಜತೆ ಸೇರಿ ನಗರಸಭೆಯನ್ನು ಕೈ ವಶಪಡಿಸಿಕೊಳ್ಳಲು ಹೊಂಚು ಹಾಕಿದ್ದು, ಈ ಸಂಬಂಧ ಕೆಜೆಪಿ, ಎಸ್‌ಡಿಪಿಐ ಹಾಗೂ ಪಕ್ಷೇತರರನ್ನು ತಮ್ಮಡೆಗೆ ಸೆಳೆಯುವ ಪ್ರಯತ್ನದಲ್ಲಿ ಇದೆ. ಆದರೆ, ಬಿಜೆಪಿ–ಕೆಜೆಪಿ ಒಟ್ಟಾಗಿ ಈ ಚುನಾವಣೆ ಎದುರಿಸಲು ಸಜ್ಜಾಗಿವೆ. ಈಚೆಗೆ ಯಡಿಯೂರಪ್ಪ–ಈಶ್ವರಪ್ಪ ಈ ಸಂಬಂಧವೇ ಒಂದಾಗಿ ಚರ್ಚೆ ನಡೆಸಿದ್ದು, ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಈ ಎರಡೂ ಪಕ್ಷಗಳು ಒಂದಾದರೂ ಇನ್ನೊಂದು ಸದಸ್ಯರ ಬೆಂಬಲ ಬಿಜೆಪಿ–ಕೆಜೆಪಿಗೆ ಬೇಕಾಗಿದ್ದು, ಅದಕ್ಕಾಗಿ ಪಕ್ಷೇತರರ ಮೊರೆ ಹೋಗಿದ್ದಾರೆ. 


ಬಿಜೆಪಿ–ಕೆಜೆಪಿ ಹೊಂದಾಣಿಕೆಯಲ್ಲಿ ಅಧಿಕಾರ ಹಿಡಿಯಲು ಸಂಸತ್‌ ಸದಸ್ಯ ಬಿ.ವೈ.ರಾಘವೇಂದ್ರ ಓಡಾಟ ನಡೆಸಿದ್ದು, ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಗೆ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ತಂತ್ರ ರೂಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT