ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಹೆದ್ದಾರಿ ಒತ್ತುವರಿ ತೆರವು ಕಾರ್ಯಾಚರಣೆ ಶುರು

Last Updated 17 ಫೆಬ್ರುವರಿ 2011, 9:05 IST
ಅಕ್ಷರ ಗಾತ್ರ

ಶಹಾಪುರ: ಬಹುದಿನಗಳ ನಿರೀಕ್ಷೆಯಂತೆ ಗುರುವಾರ (ಫೆ.17)ರಿಂದ ಶಹಾಪುರ ಪಟ್ಟಣದ ರಾಜ್ಯ ಹೆದ್ದಾರಿ ಒತ್ತುವರಿ ಕಾರ್ಯಚರಣೆ ಬೆಳಿಗ್ಗೆ ಆರು ಗಂಟೆಗೆ ಆರಂಭವಾಗಲಿದೆ. ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕು ಆಡಳಿತವು ಪಟ್ಟಣದಲ್ಲಿ 144 ಕಲಂ ನಿಷೇಧಾಜ್ಞೆ ಜಾರಿ ಮಾಡಿದೆ. ಕೇಂದ್ರ ಸ್ಥಾನದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗ ದೀಶ ಹಾಗೂ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

ಹಲವು ವರ್ಷಗಳಿಂದ ರಾಜ್ಯ ಹೆದ್ದಾ ರಿಯ ಅಕ್ಕಪಕ್ಕದಲ್ಲಿ ಜಾಗವನ್ನು ಒತ್ತು ವರಿ ಮಾಡಿಕೊಂಡು ಕಟ್ಡಡ, ಮಳಿಗೆ, ವ್ಯಾಪಾರ ಮಳಿಗೆ ಕೆಂದ್ರಗಳನ್ನು ಸ್ಥಾಪಿಸಲಾಗಿದ್ದ ಕೇಂದ್ರಗಳಿಗೆ ಮುಕ್ತಿ ದೊರೆಯುವ ಕಾಲ ಸನ್ನಿಹಿತವಾಗಿದೆ. ರಾಜ್ಯ ಹೆದ್ದಾರಿಯ ಪ್ರಾಧಿಕಾರದ ನಿಯಮದ ಪ್ರಕಾರ ಹೆದ್ದಾರಿಯ ರಸ್ತೆಯ ಕೇಂದ್ರದಿಂದ 50 ಅಡಿವರೆಗೆ ರಸ್ತೆ ವಿಸ್ತರಣೆ ನಡೆಯಲಿದೆ. ಕೆಲ ದಿನಗಳಿಂದ ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯಿತಿಯವರು ಸಮೀಕ್ಷೆ ನಡೆಸಿ ಕೆಂಪು ಬಣ್ಣದಿಂದ ಗಡಿ ಗುರುತು ಹಾಕಲಾಗಿದೆ.

ಸುಸಜ್ಜಿತ ರಾಜ್ಯ ಹೆದ್ದಾರಿ ನಿರ್ಮಾಣವಾದ ಬಳಿಕ ವಾಹನಗಳ ದಟ್ಟಣೆ ಅಧಿಕವಾಗಿತ್ತು. ಸುಗಮ ಸಂಚಾರ, ಪಾದಚಾರಿಗಳ ಓಡಾಟ ಅಲ್ಲದೆ ಹೆಚ್ಚಾಗಿ ರಸ್ತೆ ಅಪಘಾತಗಳು ನಡೆದ ಹಲವು ಕಹಿ ಘಟನೆಗಳು ಜರುಗಿದ್ದವು. ಪುರಸಭೆಯು ಮುಂಜಾಗ್ರತಾ ಕ್ರಮವಾಗಿ ಕೆಲ ದಿನಗಳಿಂದ ಧ್ವನಿ ವರ್ಧಕ ಯಂತ್ರದ ಮೂಲಕ ಸಾರ್ವಜ ನಿಕರಿಗೆ ತಿಳಿವಳಿಕೆ ನೀಡುತ್ತಾ ನಿಗದಿಪಡಿ ಸಿದ ದಿನದ ಒಳಗೆ ರಸ್ತೆ ಒತ್ತುವರಿ ದಾರರು ತಮ್ಮ ಮಳಿಗೆ, ಕಟ್ಟಡಗಳನ್ನು ತೆರವುಗೊಳಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿತ್ತು. ಕೆಲ ಜನತೆಯ ಸ್ವಂಪ್ರೇರಣೆಯಿಂದ ಮಳಿಗೆ ಖಾಲಿ ಮಾಡಿಕೊಂಡಿದ್ದು. ಹೆದ್ದಾರಿಯು ಹಾಳು ಕೊಂಪೆಯಂತೆ ಕಾಣುತ್ತಲಿದೆ ಎನ್ನುತ್ತಾರೆ ವಸಂತಕುಮಾರ.

ಪೊಲೀಸ್ ಪಡೆ: ರಸ್ತೆಯ ವಿಸ್ತರಣೆ ಸಮಯದಲ್ಲಿ ಯಾವುದೇ ಕಹಿ ಘಟನೆ ನಡೆಯದಂತೆ ಎಚ್ಚರ ವಹಿಸಲು ಹೆಚ್ಚಿನ ಪೊಲೀಸ್ ಪಡೆ ಬಂದಿಳಿದಿದೆ. ಡಿವೈಎಸ್ಪಿ ನೇತೃತ್ವದಲ್ಲಿ ಎರಡು ಕೆಎಸ್‌ಆರ್‌ಪಿ ತುಕಡಿ,  ಎರಡು ಡಿಆರ್, ನಾಲ್ಕು ಜನ ಸಿಪಿಐ, 10 ಪಿಎಸ್‌ಐ, ನೂರಕ್ಕೂ ಹೆಚ್ಚು ಪೊಲೀಸ್ ಬಲವನ್ನು ಕಾಯ್ದಿರಿಸಲಾ ಗಿದೆ. ಸಾರ್ವಜನಿಕರು ರಸ್ತೆ ವಿಸ್ತರಣೆ ಕಾರ್ಯಕ್ಕೆ ಸಹಕಾರ ಹಾಗೂ ಶಾಂತಿ ಕಾಪಾಡಬೇಕೆಂದು ಶಹಾಪುರ ಠಾಣೆಯ ಪಿ.ಐ.ಚಂದ್ರ ಕಾಂತ ಪೂಜಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ತಡೆಯಾಜ್ಞೆ: ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕೆಲವು ಕಟ್ಟಡ ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸಬೇಕೆನ್ನುವ ಸಮಯದಲ್ಲಿ ವೃತ್ತದ ಅಕ್ಕಪಕ್ಕ ಹೊಟೇಲ್, ಕಿರಾಣಿ ಮಳಿಗೆಯವರು ಒಟ್ಟು ನಾಲ್ವರು ಗುಲ್ವರ್ಗ ಸಂಚಾರಿ ಹೈಕೋರ್ಟ್‌ನಿಂದ ತಾತ್ಕಾಲಿಕವಾಗಿ ಕಟ್ಟಡ ಕೆಡವದಂತೆ ತಡೆಯಾಜ್ಞೆ ಪಡೆದುಕೊಂಡು ಬಂದಿದ್ದಾರೆ ಎನ್ನಲಾಗುತ್ತಿದೆ.
ಕಟ್ಟಡಗಳ ತಡೆಯಾಜ್ಞೆ ಹೊರತು ಪಡಿಸಿ ಉಳಿದ ಮಳಿಗೆಗಳನ್ನು ಒಡೆದು ಹಾಕಲಾಗುವುದೆಂದು ಪುರಸಭೆ ಸ್ಪಷ್ಟಪಡಿಸಿದೆ.

ಹೆದ್ದಾರಿ ಒತ್ತುವರಿ ಕಾರ್ಯಾಚರಣೆಗೆ ಶ್ರೀರಾಮ ಸೇನೆ ಸ್ವಾಗತ
ಶಹಾಪುರ: ರಾಜ್ಯ ಹೆದ್ದಾರಿಯ ಅಕ್ಕ ಪಕ್ಕದ ರಸ್ತೆಯನ್ನು ಒತ್ತುವರಿ ಮಾಡಿ ಕೊಂಡು ಪಾದಾಚಾರಿಗಳಿಗೆ ಕಂಟಕ ಹಾಗೂ ರಸ್ತೆ ಅಪಘಾತ ನಡೆಯು ತ್ತಲೇ ಇದ್ದವು. ಸಾರ್ವಜನಿಕರ ಹಿತ ದೃಷ್ಟಿಯಿಂದ ರಸ್ತೆ ಒತ್ತುವರಿ ಕಾರ್ಯಾಚರಣೆ ನಡೆಸಬೇಕೆಂದು ಹಲವು ಬಾರಿ ಮನವಿ ಮಾಡಲಾಗಿತ್ತು ಕೊನೆಗೆ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ ದಿಟ್ಟ ನಿಲುವು ತೆಗೆದು ಕೊಂಡು ಸಾರ್ವಜನಿಕ ಬವಣೆಗೆ ಮುಕ್ತಿ ನೀಡಲು ಮುಂದಾಗಿರುವುದಕ್ಕೆ ತಾಲ್ಲೂಕು ರಾಷ್ಟ್ರೀಯ ಹಿಂದೂ ಶ್ರೀರಾಮ ಸೇನೆಯ ಅಧ್ಯಕ್ಷ ಸುನೀಲ ಮಾನು ಹಾಗೂ ಕಾರ್ಯದರ್ಶಿ ಮೇಘರಾಜ ರಾಠೋಡ ಹಾಗೂ ಸಾರ್ವಜನಿಕರು ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT