ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇನು ಶೌಚಾಲಯವೋ, ಗದ್ದೆಯೋ!

Last Updated 15 ಫೆಬ್ರುವರಿ 2012, 6:20 IST
ಅಕ್ಷರ ಗಾತ್ರ

ಹುಣಸೂರು: ಪಟ್ಟಣದ ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆ, ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿ ನಿಲಯಗಳಿಗೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ.ಎಸ್.ಆರ್.ನಾಯಕ್ ಮಂಗಳವಾರ ಹಠಾತ್ತನೆ ಭೇಟಿ ಅವ್ಯವಸ್ಥೆ ವಿರುದ್ಧ ಕಿಡಿಕಾರಿದರು.

 ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅಧ್ಯಕ್ಷರು, ಅಲ್ಲಿನ ಶೌಚಾಲಯವನ್ನು

ಪರಿಶಿಷ್ಟ ಜಾತಿ
ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಅವ್ಯವಸ್ಥೆ ಮತ್ತು ಶಿಥಿಲಗೊಂಡಿರುವ ಕಟ್ಟಡವನ್ನು ವೀಕ್ಷಿಸಿ ಇದೇನಿದು ದೇವರಾಜ ಅರಸು ಕ್ಷೇತ್ರವೇ ಎಂದು ಉದ್ಗರಿಸಿದರು.

ವಿದ್ಯಾರ್ಥಿಗಳಿಗೆ ಸೂಕ್ತ ಕೊಠಡಿಯಿಲ್ಲದೆ ನೆಲದ ಮೇಲೆ ಮತ್ತು ಕೊಠಡಿಯಿಂದ ಹೊರ ಭಾಗದಲ್ಲಿ ನಿಂತು ಪಾಠ ಕೇಳುವುದನ್ನು ವೀಕ್ಷಿಸಿದ ಅವರು ನಿಮ್ಮ ಕ್ಷೇತ್ರದ ಶಾಸಕರು ಮತ್ತು ಸಾರ್ವಜನಿಕರು ಸ್ಪಂದಿಸುತ್ತಿಲ್ಲವೆ ಎಂದು ಪ್ರಾಂಶುಪಾಲರನ್ನು ಪ್ರಶ್ನಿಸಿದರು
ಭೇಟಿ ಸಮಯದಲ್ಲಿ ತಹಶೀಲ್ದಾರ್ ಲೋಕನಾಥ್, ಡಿ.ವೈ.ಎಸ್.ಪಿ. ಮುದ್ದುಮಹದೇವಪ್ಪ ಹಾಜರಿದ್ದರು.

ವೀಕ್ಷಿಸಿ ಆಡಳಿತಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಶೌಚಾಲಯಗಳಲ್ಲಿ ಆಗಷ್ಟೆ ಫಿನಾಯಲ್ ಮಿಶ್ರಿತ ನೀರು ಹಾಕಿರುವುದನ್ನು ಕಂಡ ನ್ಯಾಯಮೂರ್ತಿಗಳು ಸಿಟ್ಟುಗೊಂಡು ಇದೇನು ಶೌಚಾಲಯವೋ..! ಅಥವಾ ಗದ್ದೆ ಬಯಲೋ..! ಎಂದು ಕಿಡಿ ಕಾರಿದರು.

ಆಸ್ಪತ್ರೆ ಶುಚಿತ್ವ ಕಾಪಾಡಲು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಆ ವ್ಯಕ್ತಿ ದಿನವೂ ಶುಚಿಗೊಳಿಸಲು ಸಿಬ್ಬಂದಿ ನೇಮಕ ಮಾಡಿದ್ದಾರೆ ಎಂದು ಆಡಳಿತಾಧಿಕಾರಿ (ಪ್ರಭಾರ) ತಿಳಿಸುತ್ತಿದ್ದಂತೆ, ಗುತ್ತಿಗೆದಾರರು ಜೇಬಿಗೆ ಹಣ ಇಳಿಸಿಕೊಂಡು ಹೋಗುತ್ತಾರೆ. ಆಸ್ಪತ್ರೆಯ ಒಳರೋಗಿಗಳು ಗಬ್ಬು ನಾರುತ್ತಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯಬೇಕಾದ ಕರ್ಮ ಇವರದ್ದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಆಸ್ಪತ್ರೆ ಭೇಟಿ ಸಮಯದಲ್ಲಿ ಸಿಂಡೇನಹಳ್ಳಿ ಗ್ರಾಮದ ಮಹೇಶ್ ಮತ್ತು ಮಂಟಿಕೊಪ್ಪಲು ಗ್ರಾಮದ ಎಂ.ಹುಚ್ಚೆಗೌಡರು ಆಸ್ಪತ್ರೆ ಅವ್ಯವಸ್ಥೆ ಮತ್ತು ವೈದ್ಯರ ನಡವಳಿಕೆ ಕುರಿತು ದೂರು ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪಡಿತರವನ್ನು ವೀಕ್ಷಿಸಿ, ವಿದ್ಯಾರ್ಥಿಗಳ ಕೊಠಡಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನೀಡಿರುವ ಸವಲತ್ತುಗಳನ್ನು ವೀಕ್ಷಿಸಿದರು. ನಿಲಯ ಪಾಲಕರಿಗೆ ತೋಟಗಾರಿಕೆ ಮತ್ತು ಕೃಷಿ ಇಲಾಖೆಯನ್ನು ಬಳಸಿಕೊಂಡು ವಿದ್ಯಾರ್ಥಿಗಳ ಶ್ರಮದಾನದಿಂದ ತೋಟಗಾರಿಕೆ ಮಾಡಿಸುವಂತೆ ಕಿವಿಮಾತು ಹೇಳಿದರು.

`ಲಕ್ಷ್ಮಣತೀರ್ಥ ನದಿಗೆ ತ್ಯಾಜ್ಯದ ನೀರು: ದೂರು ದಾಖಲು~
 ತಾಲ್ಲೂಕಿನ ಜೀವ ನದಿ ಲಕ್ಷ್ಮಣತೀರ್ಥಕ್ಕೆ ತಾಜ್ಯ ನೀರು ಸೇರುವುದನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು ಇಲ್ಲವಾದಲ್ಲಿ ವೈಯಕ್ತಿಕವಾಗಿ ನ್ಯಾಯಾಲಯದಲ್ಲಿ ಹುಣಸೂರು ಪುರಸಭೆ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್. ನಾಯಕ್ ಗಡುಗಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿ, ಲಕ್ಷ್ಮಣತೀರ್ಥ ನದಿ ಕಲುಷಿತಗೊಳಿಸುವ ಅಧಿಕಾರ ಪುರಸಭೆಗೆ ನೀಡಿದವರ‌್ಯಾರು ತಾಜ್ಯ ನೀರನ್ನು ಸಂಸ್ಕರಿಸಿ ನದಿಗೆ ಬಿಡಬೇಕು ಎಂಬ ಕಾನೂನು ಇದ್ದರೂ ಹುಣಸೂರು ಪುರಸಭೆ ನೀರನ್ನು ನೇರವಾಗಿ ನದಿಗೆ ಬಿಡುವುದು ತರವಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT