ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನಿಂಗ್ಸ್ ಮುನ್ನಡೆ ಹಿಗ್ಗಿಸಿದ ಭಾರತ

Last Updated 22 ಜೂನ್ 2011, 19:30 IST
ಅಕ್ಷರ ಗಾತ್ರ

ಕಿಂಗ್‌ಸ್ಟನ್, ಜಮೈಕಾ: ಬೌಲರ್‌ಗಳ ಮೇಲಾಟ ಕಂಡುಬಂದ ಪಂದ್ಯದಲ್ಲಿ ಭಾರತ ತಂಡ ನಿಧಾನವಾಗಿ ತನ್ನ ಹಿಡಿತ ಬಿಗಿಗೊಳಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನ ಮೂರನೇ ದಿನದಾಟದ ಬೆಳಗ್ಗಿನ ಅವಧಿಯಲ್ಲಿ ಭಾರತ ತನ್ನ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 150 ರನ್ ಗಳಿಸಿದ್ದು, ಉತ್ತಮ ಮೊತ್ತದ ಸೂಚನೆ ನೀಡಿದೆ.

ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಹುಲ್ ದ್ರಾವಿಡ್ (ಅಜೇಯ 68) ಅವರು ಪ್ರವಾಸಿ ತಂಡದ ಇನಿಂಗ್ಸ್‌ನ್ನು ಬೆಳೆಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 73 ರನ್‌ಗಳ ಮುನ್ನಡೆ ಗಳಿಸಿದ್ದ ಮಹೇಂದ್ರ ಸಿಂಗ್ ದೋನಿ ಬಳಗ ಇದೀಗ ಒಟ್ಟಾರೆ ಮುನ್ನಡೆಯನ್ನು 223 ರನ್‌ಗಳಿಗೆ ಹೆಚ್ಚಿಸಿಕೊಂಡಿದೆ. ಇದನ್ನು ಇನ್ನಷ್ಟು ಹಿಗ್ಗಿಸಿ ವೆಸ್ಟ್ ಇಂಡೀಸ್ ಮೇಲೆ ಒತ್ತಡ ಹೇರುವುದು ಭಾರತ ತಂಡದ ಗುರಿ.

ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ಮೂರು ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿತ್ತು. ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ 45 ಹಾಗೂ 14 ರನ್‌ಗಳೊಂದಿಗೆ ಬುಧವಾರ ಆಟ ಆರಂಭಿಸಿದರು. ಕೊಹ್ಲಿ ಆ ಮೊತ್ತಕ್ಕೆ ಕೇವಲ ಒಂದು ರನ್ ಸೇರಿಸಿ ಎಡ್ವರ್ಡ್ಸ್‌ಗೆ ವಿಕೆಟ್ ಒಪ್ಪಿಸಿದರು.

`ಮಹಿ~ ಬಳಗ ಮತ್ತೆ ಕುಸಿತದ ಹಾದಿ ಹಿಡಿಯುವುದೇ ಎಂಬ ಆತಂಕ ಈ ಕ್ಷಣದಲ್ಲಿ ಮೂಡಿದ್ದು ನಿಜ. ಆದರೆ ಅಂತಹ ಆತಂಕವನ್ನು ಅನುಭವಿ ದ್ರಾವಿಡ್ ಮತ್ತು ಸುರೇಶ್ ರೈನಾ (27) ದೂರ ಮಾಡಿದರು. ಇವರು ಐದನೇ ವಿಕೆಟ್‌ಗೆ 48 ರನ್‌ಗಳನ್ನು ಸೇರಿಸಿದರು.

ಬೆಳಗ್ಗಿನ ಅವಧಿಯಲ್ಲಿ ಸಾಧ್ಯವಾದಷ್ಟು ವಿಕೆಟ್ ಪಡೆದು ಭಾರತವನ್ನು ಒತ್ತಡದಲ್ಲಿ ಸಿಲುಕಿಸುವ ಲೆಕ್ಕಾಚಾರ ವಿಂಡೀಸ್ ತಂಡದ್ದಾಗಿತ್ತು. ಆದರೆ `ಗೋಡೆ~ ಖ್ಯಾತಿಯ ದ್ರಾವಿಡ್ ಅದಕ್ಕೆ ಅವಕಾಶ ನೀಡಲಿಲ್ಲ. ಎದುರಾಳಿ ತಂಡದ ಬೌಲರ್‌ಗಳು ಒಡ್ಡಿದ ಎಲ್ಲ ಸವಾಲುಗಳನ್ನು ಅವರು ಮೆಟ್ಟಿನಿಂತರು.

ಭಾರತ ತಂಡದ ಎರಡನೇ ಇನಿಂಗ್ಸ್‌ನ ಆರಂಭ ಚೆನ್ನಾಗಿರಲಿಲ್ಲ. 57 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳು ಉರುಳಿದ್ದವು. ಮುರಳಿ ವಿಜಯ್ (0) ಅವರು ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ರವಿ ರಾಂಪಾಲ್‌ಗೆ ವಿಕೆಟ್ ಒಪ್ಪಿಸಿದರು.  ದ್ರಾವಿಡ್ ಮತ್ತು ಅಭಿನವ್ ಮುಕುಂದ್ (25) ಎರಡನೇ ವಿಕೆಟ್‌ಗೆ 56 ರನ್‌ಗಳ ಜೊತೆಯಾಟ ನೀಡಿದ ಕಾರಣ ತಂಡ ಚೇತರಿಸಿಕೊಂಡಿತು. ಆದರೆ ಮುಕುಂದ್ ಹಾಗೂ ಬಳಿಕ ಬಂದ ಲಕ್ಷ್ಮಣ್ ಬೆನ್ನುಬೆನ್ನಿಗೆ ಮರಳಿದ್ದು ತಂಡಕ್ಕೆ ಆಘಾತ ಉಂಟುಮಾಡಿತು. 

ಸ್ಕೋರ್ ವಿವರ
ಭಾರತ: ಮೊದಲ ಇನಿಂಗ್ಸ್ 61.2 ಓವರ್‌ಗಳಲ್ಲಿ 246
ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್ 67.5 ಓವರ್‌ಗಳಲ್ಲಿ 173

ಅಡ್ರಿಯಾನ್ ಭರತ್ ಸಿ ದೋನಿ ಬಿ ಪ್ರವೀಣ್ ಕುಮಾರ್  64
ಲೆಂಡ್ಲ್ ಸಿಮಾನ್ಸ್ ಸಿ ವಿಜಯ್ ಬಿ ಇಶಾಂತ್ ಶರ್ಮ  03
ರಾಮನರೇಶ್ ಸರವಣ ಎಲ್‌ಬಿಡಬ್ಲ್ಯು ಬಿ ಇಶಾಂತ್ ಶರ್ಮ  03
ಡರೆನ್ ಬ್ರಾವೊ ಸಿ ದೋನಿ ಬಿ ಪ್ರವೀಣ್ ಕುಮಾರ್  18
ಶಿವನಾರಾಯಣ ಚಂದ್ರಪಾಲ್ ಸಿ ಮುಕುಂದ್ ಬಿ ಹರಭಜನ್ ಸಿಂಗ್   23
ಬ್ರೆಂಡನ್ ನ್ಯಾಶ್ ಸಿ ರೈನಾ ಬಿ ಪ್ರವೀಣ್ ಕುಮಾರ್  01
ಕಾರ್ಲ್‌ಟನ್ ಬಗ್ ಸಿ ವಿಜಯ್ ಬಿ ಹರಭಜನ್ ಸಿಂಗ್  27
ಡರೆನ್ ಸಮಿ ಬಿ ಇಶಾಂತ್ ಶರ್ಮ  01
ರವಿ ರಾಂಪಾಲ್ ಔಟಾಗದೆ  14
ಫಿಡೆಲ್ ಎಡ್ವರ್ಡ್ಸ್ ಸಿ ದೋನಿ ಬಿ ಅಮಿತ್ ಮಿಶ್ರಾ  07
ದೇವೇಂದ್ರ ಬಿಶೂ ಸಿ ರೈನಾ ಬಿ ಅಮಿತ್ ಮಿಶ್ರಾ  04
ಇತರೆ: (ಬೈ-1, ಲೆಗ್‌ಬೈ-3, ನೋಬಾಲ್-4)  08
ವಿಕೆಟ್ ಪತನ: 1-18 (ಸಿಮಾನ್ಸ್; 9.4), 2-35 (ಸರವಣ; 21.1), 3-91 (ಭರತ್; 36.6), 4-95 (ಬ್ರಾವೊ; 38.3), 5-102 (ನ್ಯಾಶ್; 42.1), 6-147 (ಬಗ್; 56.2), 7-148 (ಸಮಿ; 59.3), 8-152 (ಚಂದ್ರಪಾಲ್; 60.1), 9-169 (ಎಡ್ವರ್ಡ್ಸ್; 67.3), 10-173 (ಬಿಶೂ; 67.5)
ಬೌಲಿಂಗ್: ಪ್ರವೀಣ್ ಕುಮಾರ್ 18-5-38-3, ಇಶಾಂತ್ ಶರ್ಮ 17-6-29-3, ಅಮಿತ್ ಮಿಶ್ರಾ 13.5-1-51-2, ಹರಭಜನ್ ಸಿಂಗ್ 19-5-51-2

ಭಾರತ: ಎರಡನೇ ಇನಿಂಗ್ಸ್ 64 ಓವರ್‌ಗಳಲ್ಲಿ 5 ವಿಕೆಟ್‌ಗೆ 150
ಅಭಿನವ್ ಮುಕುಂದ್ ಸಿ ಬಗ್ ಬಿ ದೇವೇಂದ್ರ ಬಿಶೂ  25
ಮುರಳಿ ವಿಜಯ್ ಎಲ್‌ಬಿಡಬ್ಲ್ಯು ಬಿ ರವಿ ರಾಂಪಾಲ್ 00
ರಾಹುಲ್ ದ್ರಾವಿಡ್ ಬ್ಯಾಟಿಂಗ್  68
ವಿವಿಎಸ್ ಲಕ್ಷ್ಮಣ್ ಸಿ ಮತ್ತು ಬಿ ಡರೆನ್ ಸಮಿ  00
ವಿರಾಟ್ ಕೊಹ್ಲಿ ಸಿ ಬಗ್ ಬಿ ಫಿಡೆಲ್ ಎಡ್ವರ್ಡ್ಸ್  15
ಸುರೇಶ್ ರೈನಾ ಸಿ ಸಮಿ ಬಿ ದೇವೇಂದ್ರ ಬಿಶೂ  27
ಮಹೇಂದ್ರ ಸಿಂಗ್ ದೋನಿ ಬ್ಯಾಟಿಂಗ್  01
ಇತರೆ: (ಬೈ-8, ನೋಬಾಲ್-6)  14
ವಿಕೆಟ್ ಪತನ: 1-0 (ವಿಜಯ್; 1.2), 2-56 (ಮುಕುಂದ್; 24.3), 3-57 (ಲಕ್ಷ್ಮಣ್; 25.5), 4-100 (ಕೊಹ್ಲಿ; 44.3), 5-148 (ರೈನಾ; 62.2)
ಬೌಲಿಂಗ್: ಫಿಡೆಲ್ ಎಡ್ವರ್ಡ್ಸ್ 13-1-40-1, ರವಿ ರಾಂಪಾಲ್ 17-3-35-1, ಡರೆನ್ ಸಮಿ 19-7-31-1, ದೇವೇಂದ್ರ ಬಿಶೂ 14-2-30-2, ಬ್ರೆಂಡನ್ ನ್ಯಾಶ್ 1-0-6-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT