ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಉಳಿದ ಅನಿಷ್ಟ ಪದ್ಧತಿ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದೇವದಾಸಿ ಆಗಲಿದ್ದ ಬಾಲಕಿಗೆ ಹೊಸ ಬಾಳು ಎಂಬ ವರದಿ ಪ್ರಕಟವಾಗಿದೆ. ಆದರೆ `ದೇವದಾಸಿ ಪದ್ಧತಿ~ ಇನ್ನೂ ಜಾರಿಯಲ್ಲಿರುವುದು ಯಾಕೆ ಮುಖ್ಯ ಸುದ್ದಿ ಆಗಲಿಲ್ಲ. ಉತ್ತರ ಕರ್ನಾಟಕದಲ್ಲಿ ಈ ತಿಂಗಳಲ್ಲಿ ನಡೆಯುವ ಹುಲಿಗೆಮ್ಮ ಮತ್ತು ಸವದತ್ತಿ ಯಲ್ಲಮ್ಮ ಗುಡ್ಡಗಳಲ್ಲಿ ಅಪ್ರಾಪ್ತ ಬಾಲಕಿಯರಿಗೆ `ಮುತ್ತು ಕಟ್ಟುವ~ ವಿಧಿಗಳು ನಡೆಯುತ್ತಿರುತ್ತವೆ. ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಇವು ನಡೆಯುತ್ತಿರುವುದು ದುರಂತ.

ದುರಂತ ಎಂದರೆ ಈ ಸಮಸ್ಯೆಗಳು ಇವನ್ನು ಆಚರಿಸುತ್ತಿರುವ ಸಮುದಾಯದವರಿಗೂ ಸಮಸ್ಯೆಯಾಗಿ ಕಾಣುತ್ತಿಲ್ಲ. ಸರ್ಕಾರಕ್ಕೂ ಇವು ಅನಿಷ್ಟ ಪದ್ಧತಿಯೇ ಅಲ್ಲ. ನಾಡಿನಲ್ಲಿ ಸಾಹಿತಿಗಳು, ವಿಚಾರವಂತರು, ಹೋರಾಟಗಾರರು ಯಾರಿಗೂ ಇವು ಸಮಸ್ಯೆಯಂತೆ ಕಾಣದಿರುವುದು ಹಾಗೂ ಸರ್ಕಾರ ಈ ಅನಿಷ್ಟಗಳನ್ನು ಸಮರ್ಥಿಸಿಕೊಳ್ಳುವುದು, ಶೋಷಣೆಗೆ ಒಳಗಾಗಿರುವ ಸಮುದಾಯಗಳು ಮೌನ ವಹಿಸುತ್ತಿರುವುದು- ಇವೆಲ್ಲ ಸಮಾಜದ ನಾಶದ ಸೂಚನೆಗಳೋ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT