ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್ ಮೇಲೆ ನಿರ್ಬಂಧಕ್ಕೆ ಚೀನಾ, ರಷ್ಯ ಆತಂಕ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಬೀಜಿಂಗ್ ವರದಿ (ಐಎಎನ್‌ಎಸ್): ಇರಾನ್‌ನೊಂದಿಗೆ ಸಮರ ಸಾರುವ ಅಮೆರಿಕ ಯತ್ನದ ಬಗ್ಗೆ ಚೀನಾ ಮತ್ತು ರಷ್ಯ ತೀವ್ರ ಆತಂಕ ವ್ಯಕ್ತಪಡಿಸಿವೆ ಎಂದು ಚೀನಾದ ಪ್ರಮುಖ ಪತ್ರಿಕೆಯೊಂದು ಸೋಮವಾರ ಹೇಳಿದೆ.

ಇರಾಕ್ ಮತ್ತು ಆಫ್ಘಾನಿಸ್ತಾನದ ಬಳಿಕ ಅಮೆರಿಕವು `ಇರಾನ್‌ನೊಂದಿಗೆ ಸಂಘರ್ಷಕ್ಕೆ ಸಿದ್ಧತೆ ನಡೆಸಿದೆ ಅಲ್ಲದೆ ಮತ್ತೊಂದು ವಾಯು ದಾಳಿಯು ಸಫಲವಾಗುವ ವಿಶ್ವಾಸ ಹೊಂದಿರುವಂತೆ ತೋರುತ್ತದೆ~ ಎಂದು `ಗ್ಲೋಬಲ್ ಟೈಮ್ಸ~ ಪತ್ರಿಕೆ ಹೇಳಿದೆ.

ಚೀನಾ ನಾಯಕತ್ವದ ಆಲೋಚನೆ ಬಿಂಬಿಸಿರುವ ಈ ಪತ್ರಿಕೆಯು, ಅಮೆರಿಕ ಈ ಮೂಲಕ ವಾಸ್ತವವಾಗಿ ತನ್ನ ಹಿತಾಸಕ್ತಿಯನ್ನೇ ಕಡೆಗಣಿಸಿದೆ ಎಂದಿದೆ.

 `ಇರಾನ್ ಜತೆ ಅಮೆರಿಕ ಸಮರಕ್ಕಿಳಿದರೆ, ಅದರಿಂದಾಗುವ ಹಾನಿಯು ಇರಾನ್‌ನ ಪರಮಾಣು ಶಕ್ತಿಯ ಪ್ರಬಲ ಬೆದರಿಕೆಗಿಂತಲೂ ಕಡಿಮೆ ಏನೂ ಆಗಿರುವುದಿಲ್ಲ~ ಎಂದೂ ತಿಳಿಸಿದೆ. `ಇಂತಹ ಮನೋಭಾವವು ಅತಿ ಶೀಘ್ರದಲ್ಲಿ ಅಥವಾ ನಂತರದಲ್ಲಿ ಅಮೆರಿಕವು ರಷ್ಯ ಮತ್ತು ಚೀನಾದೊಂದಿಗೆ ಘರ್ಷಣೆಗೆ ಇಳಿಯುವುದಕ್ಕೆ ದಾರಿಯಾಗುತ್ತದೆ ಎಂದು ಅನೇಕರು ಚಿಂತಿತರಾಗಿದ್ದಾರೆ~ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT