ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲೂ ಬಂತು ಫಾರ್‌ಎವರ್ ವಜ್ರ

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ಶತಮಾತ ಪೂರೈಸಿದ ವಿಶ್ವವಿಖ್ಯಾತ ವಜ್ರದ ಕಂಪೆನಿ ‘ಡಿ ಬೀರ್ಸ್‌’ ಸಮೂಹದ ಬ್ರಾಂಡೆಡ್ ವಜ್ರ ‘ಫಾರ್‌ಎವರ್ ಮಾರ್ಕ್’ ಈಗ ಬೆಂಗಳೂರಿಗೆ ಕಾಲಿಟ್ಟಿದೆ.

ನಗರದಲ್ಲಿ ಅದು ‘ಸಿ. ಕೃಷ್ಣಯ್ಯ ಚೆಟ್ಟಿ ಆ್ಯಂಡ್ ಸನ್ಸ್’ (ಸಿಕೆಸಿ), ಆಭರಣ್ ಜತೆ ಕೈಜೋಡಿಸಿದೆ. ‘ಫಾರ್‌ಎವರ್ ಮಾರ್ಕ್’ ಗುಣಮಟ್ಟದ ವಜ್ರಗಳನ್ನು ಇಲ್ಲಿ ಆಭರಣ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ.

2008ರಲ್ಲಿ ಆರಂಭವಾದ ‘ಫಾರ್‌ಎವರ್ ಮಾರ್ಕ್’ ಜಪಾನ್, ಹಾಂಕಾಂಗ್, ಚೀನಾ ಮಾರುಕಟ್ಟೆಯಲ್ಲಿ ಈಗಾಗಲೇ ಛಾಪು ಮೂಡಿಸಿದೆ.ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ, ದೆಹಲಿ, ಕೋಲ್ಕತ್ತಗಳಲ್ಲಿ ‘ಫಾರ್‌ಎವರ್ ಮಾರ್ಕ್’ ವಜ್ರಗಳು ಈಗ ಲಭ್ಯ.ಬೆಂಗಳೂರಿನಂತೆ ಈ ಎಲ್ಲ ನಗರಗಳಲ್ಲೂ ಅತಿ ವಿಶ್ವಾಸಾರ್ಹ ಆಭರಣ ಕಂಪೆನಿಗಳ ಜತೆ ಕೈಜೋಡಿಸಲಾಗಿದೆ. 

‘ಫಾರ್‌ಎವರ್’ನ ಪ್ರತಿ ವಜ್ರಕ್ಕೂ ಒಂದೊಂದು ಗುರುತು ಸಂಖ್ಯೆ ನೀಡಲಾಗುತ್ತದೆ. ಸೂಕ್ಷ್ಮದರ್ಶಕದ ಮೂಲಕ ಮಾತ್ರ ಈ ಸಂಖ್ಯೆ ಕಾಣಬಹುದು. ಯಾವುದೇ ವ್ಯಕ್ತಿ ಆ ವಜ್ರ ಖರೀದಿಸಿದ ತಕ್ಷಣ ಇಂಥ ಸಂಖ್ಯೆಯ ವಜ್ರ ಈ ವ್ಯಕ್ತಿಯ ಬಳಿ ಇದೆ ಎಂದು ವೆಬ್‌ಸೈಟ್‌ನಲ್ಲಿ ದಾಖಲಿಸಲಾಗುವುದು. ಆ ವಜ್ರವನ್ನು ತಾಯಿ ತನ್ನ ಮಗಳಿಗೆ ಅಥವಾ ಸೊಸೆಗೆ ಉಡುಗೊರೆಯಾಗಿ ನೀಡಿದಲ್ಲಿ ಕೂಡ ಅದನ್ನು ತಕ್ಷಣ ವೆಬ್‌ಸೈಟ್‌ನಲ್ಲಿ ದಾಖಲಿಸಲಾಗುವುದು.

ಒಮ್ಮೆ ‘ಫಾರ್‌ಎವರ್’ ಗುರುತು ಬಿದ್ದ ಮೇಲೆ ಆ ವಜ್ರ ಪ್ರಪಂಚದ ಯಾವುದೇ ಮೂಲೆಯಲ್ಲಿರಲಿ ಪತ್ತೆ ಹಚ್ಚಬಹುದು ಎಂದು ಹೇಳುತ್ತಾರೆ ಫಾರ್‌ಎವರ್‌ನ ಭಾರತ ವ್ಯವಹಾರಗಳ ವ್ಯವಸ್ಥಾಪಕ ನಿರ್ದೇಶಕಿ ಬಿನಿತಾ ಕೂಪರ್.

‘ಫಾರ್‌ಎವರ್ ಮಾರ್ಕ್’ ಗುಣಮಟ್ಟಕ್ಕೆ ಆದ್ಯತೆ ನೀಡುತ್ತದೆ. ವಿಶ್ವದಾದ್ಯಂತ ಗಣಿಗಳಿಂದ ತೆಗೆದ ವಜ್ರಗಳಲ್ಲಿ ಶೇ 1ರಷ್ಟು ವಜ್ರಗಳನ್ನು ಮಾತ್ರ ‘ಫಾರ್‌ಎವರ್’ ಆಯ್ಕೆ ಮಾಡಿಕೊಳ್ಳುತ್ತದೆ. ವಜ್ರದ ಗಣಿಗಳಲ್ಲಿ ಕೆಲಸ ಮಾಡುವವರು, ವಜ್ರವನ್ನು ಕತ್ತರಿಸಿ ಹೊಳಪು ನೀಡುವವರು, ಸಾಣೆ ಹಿಡಿಯುವವರು... ಹೀಗೆ ಎಲ್ಲ ಹಂತಗಳಲ್ಲೂ ‘ಫಾರ್‌ಎವರ್ ಮಾರ್ಕ್’ ಸಮುದಾಯ ಅಭಿವೃದ್ಧಿಯ ಮೂಲಮಂತ್ರ ಅನುಸರಿಸುತ್ತದೆ ಎಂದು ಅವರು ಕಂಪೆನಿಯ ಬದ್ಧತೆ ವಿವರಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT