ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರು ಸಂಪನ್ನರು......

Last Updated 17 ಜೂನ್ 2012, 19:30 IST
ಅಕ್ಷರ ಗಾತ್ರ

ರಾಜಕೀಯ ಕಾರ್ಮೋಡದಲ್ಲಿ ಬೆಳ್ಳಿಚುಕ್ಕೆ
ಮಂಡ್ಯ:
ವಿಧಾನಸಭೆ ಸದಸ್ಯರಾಗಿ, ಸಚಿವರಾಗಿ, ಸಂಸದರಾಗಿ ಹಾಗೂ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿರುವ ಕೃಷ್ಣ ಅವರು, `ರಾಜಕೀಯ ಕಾರ್ಮೋಡದಲ್ಲಿ ಬೆಳ್ಳಿಚುಕ್ಕೆ~ಯಾಗಿದ್ದಾರೆ ಎನ್ನುವುದು ಸ್ವಪಕ್ಷ ಹಾಗೂ ಪ್ರತಿಪಕ್ಷದ ನಾಯಕರ ಅಭಿಪ್ರಾಯವಾಗಿದೆ.

ಸರಳ, ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದಾರೆ. ರಾಜಕೀಯ ಪ್ರವೇಶದ ಆರಂಭದ ದಿನಗಳಲ್ಲಿ ಹೇಗಿದ್ದರೋ, ಇಂದಿಗೂ ಹಾಗೆಯೇ ಇದ್ದಾರೆ. ನೇರ ಹಾಗೂ ನಿಷ್ಠೂರವಾಗಿ ಮಾತನಾಡುತ್ತಾರೆ. ಅದೇ ಕಾರಣಕ್ಕಾಗಿ ಇವರೊಂದಿಗೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಮುನಿಸಿಕೊಂಡಿದ್ದೂ ಇದೆ. 1985, 1994 ಹಾಗೂ 2004ರಲ್ಲಿ ವಿಧಾನಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 1996 ಲೋಕಸಭೆಗೂ ಆಯ್ಕೆಯಾಗಿದ್ದರು. ಸುದೀರ್ಘ ರಾಜಕೀಯ ಜೀವನದಲ್ಲಿ ಏಳು-ಬೀಳು ಕಂಡಿದ್ದಾರೆ.

ಇವರು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಕೊತ್ತಮಾರನಹಳ್ಳಿಯವರು. ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. `ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ಜನ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ನನ್ನ ಚುನಾವಣೆಯ ಬಹುತೇಕ ಖರ್ಚನ್ನು ಅವರೇ ನೋಡಿಕೊಂಡಿದ್ದಾರೆ. ಅವರ ವಿಶ್ವಾಸಕ್ಕೆ ದ್ರೋಹ ಬಗೆಯದ ರೀತಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ~ ಎನ್ನುತ್ತಾರೆ ಕೃಷ್ಣ.

`ನಾನು ರಾಜಕೀಯಕ್ಕೆ ಬಂದಾಗ ಅಷ್ಟಿಷ್ಟು ಮೌಲ್ಯಗಳು ಇದ್ದವು. ಜನರಲ್ಲಿ ಜನಪ್ರತಿನಿಧಿಗಳ ಬಗೆಗೆ ಗೌರವ ಹಾಗೂ ಕಾನೂನಿನ ಬಗೆಗೆ ಹೆದರಿಕೆ ಇತ್ತು. ಈಗ ಎಲ್ಲವೂ ಅಪಮೌಲ್ಯವಾಗಿದೆ. ಜನರಿಗೆ ವ್ಯವಸ್ಥೆಯ ಮೇಲೆ ವಿಶ್ವಾಸ ಹೊರಟು ಹೋಗುತ್ತಿದೆ~ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

`ಕೃಷ್ಣ ಅವರನ್ನು ಬಹಳ ಹತ್ತಿರದಿಂದ ಬಲ್ಲೆ. ಒಳ್ಳೆಯ ಮನುಷ್ಯ. ಎಲ್ಲಕ್ಕಿಂತ ಮಿಗಿಲಾಗಿ ಕೈ, ಬಾಯಿ ಶುದ್ಧವಾಗಿ ಇಟ್ಟುಕೊಂಡಿದ್ದಾರೆ. ಆರೋಪಗಳಿಂದ ಹೊರತಾಗಿದ್ದಾರೆ. ಸಜ್ಜನ ರಾಜಕಾರಣಿ ಎನ್ನುವುದರಲ್ಲಿ ಎರಡು ಮಾತಿಲ್ಲ~ ಎನ್ನುತ್ತಾರೆ ಮಾಜಿ ಸಂಸದ ಜಿ.ಮಾದೇಗೌಡ.

`ಮೈಸೂರಿನಿಂದ ಕೆ.ಆರ್. ಪೇಟೆಗೆ ಈಗಲೂ ಅವರು ಬಸ್ಸಿನಲ್ಲಿಯೇ ಸಂಚರಿಸುತ್ತಾರೆ. ಜನರೊಂದಿಗೆ ಬೆರೆಯುತ್ತಾರೆ. ಅವರ ಸಂಕಷ್ಟಗಳಿಗೆ ಧ್ವನಿಯಾಗುತ್ತಾರೆ. ಸರಳ ಜೀವನ ಅವರದ್ದಾಗಿದೆ. ರಾಜಕೀಯದಲ್ಲಿ ಮಂಡ್ಯ ಜಿಲ್ಲೆಯ ಗೌರವವನ್ನು ಎತ್ತಿ ಹಿಡಿದ ನಾಯಕರಲ್ಲಿ ಅವರೂ ಒಬ್ಬರಾಗಿದ್ದಾರೆ.

ಇಂದಿನ ರಾಜಕೀಯ ನಾಯಕರಿಗೆ ಮಾದರಿಯಾಗಿದ್ದಾರೆ~ ಎನ್ನುತ್ತಾರೆ ಕೆ.ಆರ್.ಪೇಟೆ ಟಿಎಪಿಎಂಎಸ್ ಮಾಜಿ ಕಾರ್ಯದರ್ಶಿ ವಿ. ದೇವೇಗೌಡ.ಹಿರಿಯರಿಂದ ಹಿಡಿದು ಕಿರಿಯರ ತನಕ ಎಲ್ಲರೂ ಇವರನ್ನು ಗೌರವಿಸುತ್ತಾರೆ. ಕೃಷ್ಣ ಅವರ ನಡವಳಿಕೆ, ಸರಳತೆ, ಸಜ್ಜನಿಕೆಯೂ ಜನರ ಮನಸ್ಸಿನಲ್ಲಿ ಅವರಿಗೆ ವಿಶೇಷ ಸ್ಥಾನ ಕಲ್ಪಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT