ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಲಾಂ ವಿರುದ್ಧವಲ್ಲ

Last Updated 12 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): `ಅಮೆರಿಕದ ಹೋರಾಟ ಭಯೋತ್ಪಾದನೆಯ ವಿರುದ್ಧವೇ ಹೊರತು ಇಸ್ಲಾಂ ವಿರುದ್ಧವಲ್ಲ~ ಎಂದು ಅಧ್ಯಕ್ಷ ಬರಾಕ್ ಒಬಾಮ ಸ್ಪಷ್ಟಪಡಿಸಿದ್ದಾರೆ.

9/11ದಾಳಿ ನೆನಪಿನ ಅಂಗವಾಗಿ ನ್ಯೂಯಾರ್ಕ್‌ನ ಕೆನಡಿ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಒಬಾಮ,  ಉಗ್ರರ ದಾಳಿಗೆ ತುತ್ತಾದ ನ್ಯೂಯಾರ್ಕ್‌ನ ಅವಳಿ ಗೋಪುರಗಳ ಸ್ಥಳವನ್ನು ಸ್ಮಾರಕವಾಗಿಸಲಾಗುವುದು. ಇದು ಅಮೆರಿಕದಲ್ಲಿರುವ ಎಲ್ಲ ಜನಾಂಗ ಮತ್ತು ಧರ್ಮದವರು ಒತ್ತಾಸೆಯಾಗಿದೆ ಎಂದು ಅವರು ಹೇಳಿದ್ದಾರೆ.

ಅಪಘಾತ: 19 ಸಾವು

ಜಕಾರ್ತಾ, (ಎಪಿ): ಕೇಂದ್ರ ಇಂಡೊನೇಷ್ಯಾದ ಬಲಪನಗ್ಮೊಜೊ ಗ್ರಾಮದಲ್ಲಿ  ಸೋಮವಾರ ಮಿನಿವ್ಯಾನ್ ಹಾಗೂ ಬಸ್ ಪರಸ್ಪರ ಡಿಕ್ಕಿ  ಹೊಡೆದು 19 ಜನರು ಮೃತಪಟ್ಟಿದ್ದಾರೆ.   ಇನ್ನಿತರ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಐವರಿಗೆ ನೇಣು

ಟೆಹರಾನ್ (ಎಪಿಎಫ್): ಮಾದಕ ದ್ರವ್ಯ ಕಳ್ಳಸಾಗಣೆ ಆರೋಪದ ಮೇಲೆ ಶಹ್ರೌದ್ ನಗರದ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಐವರನ್ನು ಸೋಮವಾರ ನೇಣಿಗೆ ಹಾಕಲಾಗಿದೆ ಎಂದು ವರದಿಯಾಗಿದೆ. ಪ್ರಸಕ್ತ ವರ್ಷ ಇರಾನ್‌ನಲ್ಲಿ 192 ಮಂದಿಯನ್ನು ಮತ್ತು ಕಳೆದ ವರ್ಷ 179 ಮಂದಿಯನ್ನು ಗಲ್ಲಿಗೇರಿಸಲಾಗಿದೆ.  2010ನೇ ಸಾಲಿನಲ್ಲಿ ಗಲ್ಲಿಗೇರಿಸುವ ರಾಷ್ಟ್ರಗಳ ಪೈಕಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಇರಾನ್ ದ್ವಿತೀಯ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT