ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್ ಹೊಸ ಸಂವಿಧಾನಕ್ಕೆ ಅಸ್ತು

Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕೈರೊ (ಪಿಟಿಐ): ಸರ್ವಾಧಿಕಾರಿ ಹೊಸ್ನಿ ಮುಬಾರಕ್‌ನನ್ನು ಕಿತ್ತೊಗೆದ ಒಂದು ವರ್ಷದ ಬಳಿಕ ಬುಧವಾರ ಈಜಿಪ್ಟ್ ಹೊಸ ಸಂವಿಧಾನವನ್ನು ಅಂಗೀಕರಿಸಿದೆ.

ಜನಮತಗಣನೆಯಲ್ಲಿ 2/3 `ಒಪ್ಪಿಗೆ' ಮತಗಳ ನಂತರ ಈ ಸಂವಿಧಾನ ಅಂಗೀಕಾರವಾಗಿದೆ. ಆದರೆ ಇದರ ವಿರುದ್ಧ ವಿರೋಧಪಕ್ಷಗಳು ಪ್ರತಿಭಟನೆ ನಡೆಸಿದ್ದು ಹೊಸ ಸಂವಿಧಾನವು ರಾಷ್ಟ್ರದ ಜಾತ್ಯತೀತ ಧೋರಣೆಯೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ದೂರಿದ್ದಾರೆ.

ಡಿಸೆಂಬರ್ 15 ಮತ್ತು 22ರಂದು ಎರಡು ಹಂತದಲ್ಲಿ ನಡೆದ ಜನಮತಗಣನೆಯಲ್ಲಿ  ಸಂವಿಧಾನಕ್ಕೆ 2/3 ಬಹುಮತ ಲಭಿಸಿದೆ ಎಂದು ಚುನಾವಣಾ ಅಧಿಕಾರಿಗಳು ಮಂಗಳವಾರ ರಾತ್ರಿ ಘೋಷಿಸಿದ ಬಳಿಕ ಈಜಿಪ್ಟ್ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಸಂವಿಧಾನಕ್ಕೆ ಇದಕ್ಕೆ ಸಹಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT