ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿಗಳು ಸೋಲನ್ನು ಸವಾಲಾಗಿ ಸ್ವೀಕರಿಸಿ

Last Updated 20 ಅಕ್ಟೋಬರ್ 2012, 8:15 IST
ಅಕ್ಷರ ಗಾತ್ರ

ದಾವಣಗೆರೆ: ಸೋಲನ್ನು ಸವಾಲಾಗಿ ಸ್ವೀಕರಿಸಬೇಕಾದದ್ದು ಉದ್ಯಮಶೀಲರಲ್ಲಿ ಇರಬೇಕಾದ ಮುಖ್ಯ ಗುಣ ಎಂದು ಉದ್ಯಮಿ ಟಿ. ಜಯಪ್ರಕಾಶ್ ಹೆಳಿದರು.

ನಗರದ ಬಾಪೂಜಿ ಪಾಲಿಟೆಕ್ನಿಕ್‌ನಲ್ಲಿ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರದ ಆಶ್ರಯದಲ್ಲಿ ಮೂರು ದಿನಗಳ ಉದ್ಯಮಶೀಲತಾ ಜಾಗೃತಿ ಶಿಬಿರ ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು.

ಉದ್ಯಮಕ್ಕೆ ಕಾಲಿಟ್ಟ ಹೊಸದರಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆತ್ಮವಿಶ್ವಾಸ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಯಶಸ್ವಿ ಉದ್ಯಮಿಗಳಾಗಲು ಸಾಧ್ಯ. ಉದ್ಯಮರಂಗದ ಪ್ರಗತಿಯಲ್ಲಿ ಆದಿ, ಅಂತ್ಯ ಇಲ್ಲ ಎಂದು ವಿಶ್ಲೇಷಿಸಿದರು. 

ಪಾಲಿಟೆಕ್ನಿಕ್ ಸಂಸ್ಥೆಯ ಪ್ರಭಾರ ಪ್ರಾಂಶುಪಾಲ ಎ.ಬಿ. ದಯಾನಂದ ಮಾತನಾಡಿ, ದೇಶದ ಅರ್ಥವ್ಯವಸ್ಥೆಗೆ ಸಣ್ಣ ಉದ್ದಿಮೆ ಕ್ಷೇತ್ರದ ಕೊಡುಗೆ ಅಪಾರ. ಸಾಕಷ್ಟು ಯುವ ಉದ್ಯಮಿ ಗಳು ಹೊಸ ಉದ್ದಿಮೆ ಆರಂಭಿಸಿದ್ದಾರೆ.
 
ಸೇವಾ ಕ್ಷೇತ್ರದಲ್ಲಿಯೂ ಹೊಸ ಉದ್ದಿಮೆಗಳು ಆರಂಭವಾಗಿರುವುದು ಒಳ್ಳೆಯ ಬೆಳವಣಿಗೆ. ಉದ್ದಿಮೆ ಸ್ಥಾಪನೆಯಿಂದ ಹೊಸ ಉದ್ಯೋಗಾವಕಾಶ ಸೃಷ್ಟಿಸಬಹುದು. ವಿದೇಶಗಳಲ್ಲಿ ಶಾಲಾ ಪಠ್ಯಕ್ರಮದಲ್ಲಿಯೇ ಉದ್ಯಮಶೀಲತೆ ವಿಷಯ ಅಳವಡಿಸಲಾಗಿದೆ. ಮಕ್ಕಳಲ್ಲಿ ಚಿಕ್ಕವಯಸ್ಸಿನಲ್ಲಿಯೇ ಉದ್ಯಮಶೀಲತೆ ಗುಣ ಬೆಳೆಸಬೇಕು ಎಂದು ಹೇಳಿದರು.

ಯಶಸ್ವಿ ಉದ್ಯಮಿಯಾಗಲು ಕೇವಲ ಡಿಗ್ರಿ ಪಡೆದರೆ ಸಾಲದು. ಜತೆಗೆ, ಪರಿಶ್ರಮ, ಪೂರ್ವ ತಯಾರಿ ಮುಖ್ಯ. ಉದ್ಯಮ ಸಮಾಜಮುಖಿ ಆಗಿರಬೇಕು ಎಂದು ನುಡಿದರು.

ಕೈಗಾರಿಕಾ ಉತ್ತೇಜನಾಕಾರಿ ವೈ. ಮಲ್ಲಿನಾಥ್, ಅರುಣಕುಮಾರ್, ಆರ್.ಪಿ. ಪಾಟೀಲ್, ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದ ಸಂಯೋಜಕ ಕೆ.ಎನ್. ಮಹೇಶ್ವರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT