ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭ

Last Updated 10 ಅಕ್ಟೋಬರ್ 2011, 9:45 IST
ಅಕ್ಷರ ಗಾತ್ರ

ಚೆನೈ(ಐಎಎನ್‌ಎಸ್): ಭಾರತದ ಹವಾಮಾನ ಹಾಗೂ ವಾತಾವರಣದಲ್ಲಾಗುವ ಬದಲಾವಣೆಯ ಕುರಿತ ಅಧ್ಯಯನಕ್ಕೆ ಅನೂಕೂಲವಾಗಲೆಂದು ಸಿದ್ಧಪಡಿಸಿರುವ ಉಪಗ್ರಹವು, ಬುಧವಾರ ಉಡಾವಣೆಗೆ ಸಜ್ಜಾಗಿದ್ದು ಅದರ  ಕ್ಷಣಗಣನೆ ಆರಂಭವಾಗಿದೆ.

ಉಡಾವಣೆಯ ಕ್ಷಣಗಣನೆ ಸೋಮವಾರ ಬೆಳಿಗ್ಗೆ 9 ಗಂಟೆಗೆ ಶುರುವಾಗಿದ್ದು, ಉಪಗ್ರಹದ ತಾಂತ್ರಿಕ ಅಂಶಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಇಸ್ರೊ ಅಧಿಕಾರಿ ತಿಳಿಸಿದ್ದಾರೆ.

ಈ ಉಪಗ್ರಹವು ಬುಧವಾರ ಬೆಳಿಗ್ಗೆ 11ಗಂಟೆಗೆ ಇಲ್ಲಿಂದ 80 ಕಿ.ಮಿ. ದೂರದಲ್ಲಿರುವ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ.

ಭಾರತ ಮತ್ತು ಫ್ರಾನ್ಸ್ ಸಹಭಾಗಿತ್ವದಲ್ಲಿ ರೂಪಿಸಲಾಗಿರುವ ಈ ಉಪಗ್ರಹವು ವಾತಾವರಣದಲ್ಲಾಗುವ ಬದಲಾವಣೆಗಳ ಕುರಿತು ಅಧ್ಯಯನ ನಡೆಸಲು ನೆರವಾಗುತ್ತದೆ ಮತ್ತು ಅಂಥ ಉಪಗ್ರಹವನ್ನು ಉಡಾವಣೆ ಮಾಡುವಲ್ಲಿ ಪ್ರಪಂಚದಲ್ಲೇ ಭಾರತ ಎರಡನೇ ರಾಷ್ಟ್ರವಾಗಿದೆ.

ಈ ಉಪಗ್ರಹದ ಉಡಾವಣೆಗೆ ಇಸ್ರೊ ಸಂಸ್ಥೆಯು 90 ಕೋಟಿ ರೂಪಾಯಿ ಭರಿಸಲಿದ್ದರೆ, ಫ್ರಾನ್ಸ್ ದೇಶದ ಸ್ಪೇಸ್ ಏಜೆನ್ಸಿಯು ಸಿಎನ್ಇಎಸ್ 300 ಕೋಟಿ ರೂಗಳನ್ನು ಭರಿಸಲಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT