ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎನ್‌ಪಿ ವಂಚನೆ; ಟ್ರಾಯ್ ಸೂಚನೆ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮೊಬೈಲ್ ನಂಬರ್ ಪೋರ್ಟಬಿಲಿಟಿ (ಎಂಎನ್‌ಪಿ) ಸೌಲಭ್ಯ ಬಳಸಿ `ಲೂಪ್ ಟೆಲಿಕಾಂ ನೆಟ್‌ವರ್ಕ್~ನಿಂದ ಏರ್‌ಟೆಲ್, ವೊಡಾಫೋನ್,  ಐಡಿಯಾ, ರಿಲಯನ್ಸ್ , ಏರ್‌ಸೆಲ್, ಟಿಟಿಎಸ್‌ಎಲ್ ಸಂಸ್ಥೆಗಳಿಗೆ ಸೇವೆ ಬದಲಿಸಿಕೊಂಡಿರುವ ಗ್ರಾಹಕರ ಮೊಬೈಲ್ ಸಂಖ್ಯೆಗಳನ್ನು ಮುಂದಿನ 48 ಗಂಟೆಗಳೊಳಗೆ ಸ್ಥಗಿತಗೊಳಿಸುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸೇವಾ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ತನ್ನ ಸೇವಾ ಜಾಲದಿಂದ 5,923 ಗ್ರಾಹಕರು ಅಕ್ರಮವಾಗಿ `ಎಂಎನ್‌ಪಿ~ ಮೂಲಕ ಬೇರೆ ಸೇವಾ ಸಂಸ್ಥೆಗಳಿಗೆ ಸೇವೆ ಬದಲಿಸಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬರುತ್ತಿದೆ. ಈ ಕುರಿತು ತನಿಖೆ ನಡೆಸುವಂತೆ ಲೂಪ್ ಟೆಲಿಕಾಂ ನೆಟ್‌ವರ್ಕ್, ದೂರಸಂಪರ್ಕ ಪ್ರಾಧಿಕಾರಕ್ಕೆ ದೂರು ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ `ಟ್ರಾಯ್~ ಈ ಕ್ರಮ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT