ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಜಿ. ರೋಡ್ ಬಜಾರ್ಗೆ ಚಾಲನೆ

Last Updated 2 ಏಪ್ರಿಲ್ 2011, 19:25 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ವಿವಿಧ ಭಾಗಗಳಲ್ಲಿ ನೂತನ ಮಾರಾಟ ಮಳಿಗೆಗಳು ಆರಂಭವಾಗಿದ್ದರೂ ಎಂ.ಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳ ಮಳಿಗೆಗಳಲ್ಲಿ  ಶಾಪಿಂಗ್ ಕಳೆಯೇ ಬೇರೆ. ಆದ್ದರಿಂದ ಈ ಭಾಗದಲ್ಲಿ ಗ್ರಾಹಕರು ಶಾಪಿಂಗ್‌ಗಾಗಿ ಮುಗಿ ಬೀಳುತ್ತಾರೆ’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ ಬಿದರಿ ಅಭಿಪ್ರಾಯಪಟ್ಟರು.

ಬೆಂಗಳೂರು ಟ್ರೇಡರ್ಸ್‌ ಅಸೋಸಿಯೇಷನ್ ವತಿಯಿಂದ ಇದೇ 11ರವರೆಗೆ ನಗರದ ಎಂ.ಜಿ. ರಸ್ತೆಯಲ್ಲಿ ಆಯೋಜಿಸಿರುವ ‘ಎಂ.ಜಿ.ರೋಡ್ ಬಜಾರ್’ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಸೋಸಿಯೇಷನ್ ಕಾರ್ಯದರ್ಶಿ ಶ್ರೀಶ ಬಾಬು, ‘ಮೆಟ್ರೊ ಕಾಮಗಾರಿಯಿಂದ ಎಂ.ಜಿ.ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಎದುರಾದ ಸವಾಲುಗಳ ಹಿನ್ನಲೆಯಲ್ಲಿ ಈ ಬಜಾರ್ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲದೇ ವಾಹನಗಳ ನಿಲುಗಡೆಗೆ ಮೆಟ್ರೊ ಮೇಲುಸೇತುವೆ ಕೆಳಭಾಗದಲ್ಲಿ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂದು ಅಸೋಸಿಯೇಷನ್ ಸಂಚಾರಿ ಪೊಲೀಸ್ ವಿಭಾಗಕ್ಕೆ ಮನವಿ ಮಾಡಲಿದೆ’ ಎಂದು ತಿಳಿಸಿದರು. ಬಜಾರ್‌ನಲ್ಲಿ ಒಟ್ಟು 125 ಮಳಿಗೆಗಳನ್ನು ತೆರೆಯಲಾಗಿದೆ, ನಗರದ ಟ್ರಿನಿಟಿ ವೃತ್ತದಿಂದ ಆರಂಭಗೊಂಡು ಕುಂಬ್ಳೆ ವೃತ್ತದವರೆಗೆ ಮುಕ್ತಾಯಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT