ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಪಿ. ಪ್ರಕಾಶ ನಿಧನಕ್ಕೆ ಸಂತಾಪ

Last Updated 10 ಫೆಬ್ರುವರಿ 2011, 10:05 IST
ಅಕ್ಷರ ಗಾತ್ರ

ವಿಜಾಪುರ: ಮಾಜಿ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ, ರಂಗಭೂಮಿ ಕಲಾವಿದ ಎನ್. ಬಸವರಾಜ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಯವರು, ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.ಸಚಿವರಾದ ಮುರುಗೇಶ ನಿರಾಣಿ, ಗೋವಿಂದ ಕಾರಜೋಳ, ಶಾಸಕ ಎಂ.ಬಿ. ಪಾಟೀಲ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ, ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಶಿವಾನಂದ ಪಾಟೀಲ, ಜಿ.ಪಂ. ಮಾಜಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ, ಜೆಡಿಎಸ್ ಮುಖಂಡ ಎಸ್.ಎಸ್. ಪಾಟೀಲ ಗೂಗಿಹಾಳ, ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ, ಮಹಿಳಾ ವಿವಿ ಸಿಂಡಿಕೇಟ್ ಸದಸ್ಯ ರಫೀ ಭಂಡಾರಿ, ಬಿಜೆಪಿ ಮುಖಂಡರಾದ ಶಿವಾನಂದ ಕಲ್ಲೂರ, ಸಂಗರಾಜ ದೇಸಾಯಿ ಇತರರು ಎಂ.ಪಿ. ಪ್ರಕಾಶ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಮಾಜಿ ಶಾಸಕ ಆರ್.ಕೆ. ರಾಠೋಡ, ಶಾಂತಪ್ಪ ಜತ್ತಿ, ಎ.ಬಿ. ಬಿರಾದಾರ, ಎಂ.ಸಿ. ಮುಲ್ಲಾ, ಎಸ್.ವಿ. ಪಾಟೀಲ, ಚಂದ್ರಕಾಂತ ಹಿರೇಮಠ, ರಾಜಪಾಲ ಚವ್ಹಾಣ, ರೇಷ್ಮಾ ಪಡೇಕನೂರ, ಅಪ್ಪುಗೌಡ ಪಾಟೀಲ ಇತರರು ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದರು.ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಎಂ.ಪಿ. ಪ್ರಕಾಶ, ರಂಗಭೂಮಿ ಕಲಾವಿದ ಎನ್. ಬಸವರಾಜ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೈಜನಾಥ ಕರ್ಪೂರಮಠ, ಡಿ.ಎಚ್. ಕಲಾಲ, ಬಿ.ಎಸ್. ಬ್ಯಾಳಿ, ಚಾಂದಸಾಬ ಗಡಗಲಾವ, ಎನ್.ಆರ್. ಪಂಚಾಳ, ಈರಪ್ಪ ಜಕ್ಕಣ್ಣವರ, ವಸಂತ ಹೊನಮೋಡೆ ಇತರರು ಪಾಲ್ಗೊಂಡಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಸಾಹಿತ್ಯ ಭವನದಲ್ಲಿ ನಡೆದ ಸಂತಾಪ ಸಭೆಯಲ್ಲಿ ಎಸ್.ಡಿ. ಕರ್ಪೂರಮಠ, ಮಲ್ಲಿಕಾರ್ಜುನ ಯಂಡಿಗೇರಿ, ಸಿ.ಎಂ. ನುಚ್ಚಿ, ಬಿ.ಎಚ್. ಮಹಾಬರಿ, ಧನಸಿಂಗ್ ತೊನಶ್ಯಾಳ, ಎಂ.ಸಿ. ಮುಲ್ಲಾ, ಸುಮಂಗಲಾ ಪೂಜಾರಿ, ಶಿವಪುತ್ರಪ್ಪ ತಳಭಂಡಾರಿ ಇತರರು ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದರು.ಎಂ.ಪಿ. ಪ್ರಕಾಶ ನಿಧನಕ್ಕೆ ರಾಜ್ಯ ಮಾನವ ಹಕ್ಕುಗಳ ಮಂಡಳಿಯ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಪದಾಧಿಕಾರಿಗಳಾದ ವಿಜಯಕುಮಾರ ಘಾಟಗೆ, ಗುರುಸಿಂಗ್ ತೊನಶ್ಯಾಳ, ಸುಭಾಷ ಚವ್ಹಾಣ, ಅಭಿಷೇಕ ಚಕ್ರವರ್ತಿ, ಬಸವರಾಜ ಬಿರಾದಾರ, ಸುರೇಶ ಗೊಣಸಗಿ ಇತರರು ಸಂತಾಪ ಸೂಚಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಶ್ರೀಶೈಲ ಜೂಗೂರ, ಜೆಡಿಎಸ್ ಮುಖಂಡೆ ಲಕ್ಷ್ಮಿ ದೇಸಾಯಿ, ಬಿಜೆಪಿಯ ರವಿ ಖಾನಾಪುರ, ದಯೆ ಸ್ವಯಂ ಸೇವಾ ಸಂಸ್ಥೆಯ ರೇಷ್ಮಾ ಪಡೇಕನೂರ, ಪವಿತ್ರ ಕೃಷ್ಣಮೂರ್ತಿ, ಸಲೀಮಾ ಜಹಗಿರದಾರ, ಅನಸೂಯಾ ಸಾರವಾಡ ಇತರರು, ಪುರಂದರ ವೇದಿಕೆಯ ವೆಂಕಟೇಶ ಕುಲಕರ್ಣಿ, ಬಾಬುರಾವ ಕುಲಕರ್ಣಿ, ಆರ್.ಎಸ್. ಕಲ್ಮಠ, ವಿ.ಕೆ. ಹೊರ್ತಿ, ಕಲ್ಯಾಣರಾವ ದೇಶಪಾಂಡೆ ಸಂತಾಪ ಸೂಚಿಸಿದ್ದಾರೆ.

ಜ್ಞಾನಜ್ಯೋತಿ ವಸತಿ ಶಾಲೆಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಲೋಣಿ, ಮುಖ್ಯಗುರು ಜಿ.ಎಂ. ರೋಜಾರಿಯೋ ಇತರರು ಪಾಲ್ಗೊಂಡಿದ್ದರು.ಬಿಎಲ್‌ಡಿಇ ಸಂಸ್ಥೆಯ ಫ.ಗು. ಹಳಕಟ್ಟಿ ಸಂಶೋಧನಾ ಸಂಸ್ಥೆಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಎಸ್.ಎಸ್. ತಂಬಾಕೆ, ಡಾ.ಎಂ.ಎಸ್. ಮದಭಾವಿ, ಚಿಂತನ ಬಳಗದ ಕಾರ್ಯದರ್ಶಿ ಡಾ.ಮಹಾಂತೇಶ ಬಿರಾದಾರ, ಸಂಸ್ಥೆಯ ನಿರ್ದೇಶಕ ಆನಂದ ಪಾಟೀಲ, ಆಡಳಿತಾಧಿಕಾರಿ ಎ.ಎಸ್. ಬಿರಾದಾರ, ಪ್ರವೇಶಾಧಿಕಾರಿ ಎಂ.ಎಸ್. ಇಜೇರಿ, ಡಾ.ಎಂ.ಎಸ್. ಧೋತ್ರದ, ಪ್ರಾಚಾರ್ಯರಾದ ಕಲ್ಯಾಣಿ, ಎಸ್.ಜೆ. ಗೌಡರ, ಪಿ.ಎಸ್. ಕಡೇಮನಿ, ಎಸ್.ಸಿ. ನಂದಿ, ಯು.ಎಸ್. ಪೂಜಾರಿ ಇತರರು ಪಾಲ್ಗೊಂಡು ಸಂತಾಪ ಸೂಚಿಸಿದರು.

ಚಿಂತಾಮಣಿ: ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ, ಹಿರಿಯ ಕಲಾವಿದ ಗುಡುಗೇರಿ ಬಸವರಾಜ, ಸ್ವಾತಂತ್ರ್ಯಯೋಧ, ಸಾಹಿತಿ ಎಚ್.ವಿ. ತುಂಗಳ ಅವರ ನಿಧನಕ್ಕೆ ಇಲ್ಲಿಯ ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಸಂತಾಪ ಸೂಚಿಸಿದ್ದಾರೆ.ಕರ್ನಾಟಕ ರಾಜ್ಯ ವಕೀಲರ ಸಾಹಿತ್ಯ ಪರಿಷತ್‌ನವರು ಸಭೆ ಸೇರಿ ಎಂ.ಪಿ. ಪ್ರಕಾಶ ನಿಧನಕ್ಕೆ ಸಂತಾಪ ಸೂಚಿಸಿದರು. ಪ್ರಕಾಶ ಛಪ್ರೆ, ಮಲ್ಲಿಕಾರ್ಜುನ ಭೃಂಗಿಮಠ, ತುಳಸೀರಾಮ ಸೂರ್ಯವಂಶಿ, ಅರವಿಂದ ಹಿರೊಳ್ಳಿ, ವಿ.ಆರ್. ಪಾಟೀಲ, ಶಿವುಕುಮಾರ ಪೂಜಾರ, ಆರ್.ಎಲ್. ಇಂಗಳೇಶ್ವರ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT