ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಸೌಲಭ್ಯ ಪಡೆದು ಲಾಭ ಗಳಿಸಲು ಸಲಹೆ

Last Updated 24 ಸೆಪ್ಟೆಂಬರ್ 2013, 6:45 IST
ಅಕ್ಷರ ಗಾತ್ರ

ಹುಣಸೂರು: ಕೃಷಿಕರು ಕೃಷಿ ಉತ್ಪನ್ನ­ವನು್ನ ದಲ್ಲಾಳಿಗಳ ಮೂಲಕ ಮಾರಾಟ ಮಾಡುವುದನ್ನು ತಪ್ಪಿಸಿ ಸರ್ಕಾರ ತೆರೆದಿರುವ ಕೃಷಿ ಉತ್ಪನ್ನ ಮಾರು­ಕಟ್ಟೆಯ ಮೂಲಕ ಮಾರಾಟ ಮಾಡಿ ಉತ್ತಮ ದರ ಪಡೆದುಕೊಳ್ಳಬೇಕು ಎಂದು ಕೃಷಿ ವಿಜ್ಞಾನಿ ಡಾ.ಅರಸು ಮಲ್ಲಯ್ಯ ಹೇಳಿದರು.

ತಾಲ್ಲೂಕಿನ ಕರ್ಣಕುಪೆ್ಪ ಗಾ್ರಮದಲ್ಲಿ ಮುಸುಕಿನ ಜೋಳ ಬೇಸಾಯ ಮತು್ತ ಮಾರಾಟ ಕುರಿತು ಎಪಿಎಂಸಿ ಹಮಿ್ಮಕೊಂಡಿದ್ದ ಕಾರ್ಯಗಾರದಲಿ್ಲ ಮಾತನಾಡಿ, ರೈತರು ಅತುರವಾಗಿ ಬೆಳೆದ ಫಸಲನು್ನ ಕಡಿಮೆ ದರಕೆ್ಕ ಮಾರಾಟ ಮಾಡಿ ಕೈ ಸುಟ್ಟುಕೊಳ್ಳ­ಬಾರದು. ಖಾಸಗಿ ಮಾರಾಟಗಾರರು ತೋರಿಸುವ ಪುಡಿಗಾಸಿನಾಸೆಗೆ ಬಲಿ ಆಗಬಾರದು. ರೈತರು ಬೆಳೆದ ಕೃಷಿ ಉತ್ಪನ್ನವನು್ನ ಎಪಿಎಂಸಿಯಲ್ಲಿ ಮಾರಾಟ ಮಾಡುವ ಮೂಲಕ ಸೂಕ್ತ ಧಾರಣೆ ಪಡೆಯಬೇಕೆಂದರು.

ರೈತರಿಗೆ ಅನುಕೂಲವಾಗುವ ರೀತಿ ಕೃಷಿ ಮಾರುಕಟೆ್ಟ ವಾಹಿನಿ ಎಂಬ ವೆಬ್‌ ಸೈಟ್‌ ತರೆದು ಕೃಷಿಕರಿಗೆ ಮಾರುಕಟೆ್ಟ ಕುರಿತು ಹಲವಾರು ಮಾಹಿತಿ ನೀಡಲಾಗುತಿ್ತದೆ. ಇತ್ತೀಚೆಗೆ ಓದು ಬರಹ ತಿಳಿದ ವಿದಾ್ಯವಂತರೂ ಕೃಷಿ ಕ್ಷೇತ್ರದಲಿ್ಲ ತೊಡಗಿಸಿಕೊಂಡಿರುವುದ­ರಿಂದ ಅಕ್ಷರ ಜ್ಞಾನ ಇಲ್ಲದವರು ವಿದಾ್ಯವಂತ ಕೃಷಿಕರಿನಿಂದ ಮಾಹಿತಿ ಪಡೆದು ವ್ಯವಹರಿಸಬಹುದು ಎಂದರು.

ಗೋದಾಮು: ಕೃಷಿ ಉತ್ಪನ್ನ ಮಾರುಕಟೆ್ಟ­ಯಲ್ಲಿ ರೈತ ಬೆಳೆದ ಕೃಷಿ ಉತ್ಪನ್ನಗಳನು್ನ ಸುರಕಿ್ಷತವಾಗಿ ವೈಜ್ಞಾನಿಕವಾಗಿ ಸಂರಕಿ್ಷಿಸಿ ಇಡುವ ವ್ಯವಸೆ್ಥ ಹೊಂದಿದೆ. ರೈತ ತಾನು ಬೆಳೆದ ಪದಾರ್ಥವನು್ನ ಸೂಕ್ತ ದರ ಬಂದಾಗ  ಮಾರುಕಟೆ್ಟಯಲ್ಲಿ ಮಾರಾಟ ಮಾಡಬಹುದಾಗಿದೆ.

ಸಾಲ: ಗೋದಾಮಿನಲ್ಲಿ ಇಟ್ಟ ಪದಾ­ರ್ಥಕೆ್ಕ ಅಧಿಕೃತ ರಶೀತಿ ಪಡೆದು 6 ತಿಂಗಳ ಕಾಲಾವಧಿವರಗೆ ಅಡವಿಟು್ಟ ಬಡಿ್ಡ ರಹಿತ ಸಾಲ ಪಡೆಯುವ ವ್ಯವಸೆ್ಥ ಕಲ್ಪಸಲಾಗಿದೆ ಎಂದರು.

ಡಾ.ಡಿ.ಆರ್‌. ಬೋಸೆ್ಲ, ಮುಸುಕಿನ ಜೋಳ ಬೆಳೆಯುವ ಹಂತದಲ್ಲಿ ರೈತರು ತೆಗೆದುಕೊಳ್ಳಬೇಕಾದ ಕ್ರಮ ಹಾಗೂ ನೀಡಬೇಕಾದ ರಸಗೊಬ್ಬರಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಈರಣ್ಣ, ತಾ.ಪಂ. ಸದಸ್ಯ ಗಣಪತಿ ಸೇರಿದಂತೆ ಗಾ್ರಮದ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT