ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಮು ಮಾಂಸದ ಮೊದಲ ರೆಸ್ಟೋರಾ

Last Updated 24 ಮೇ 2012, 19:30 IST
ಅಕ್ಷರ ಗಾತ್ರ

ಎಮು ಮಾಂಸ ಪ್ರಿಯರಿಗಾಗಿ ನಗರದಲ್ಲಿ ಪ್ರಪ್ರಥಮ ಎಮು ಮಾಂಸದ ವಿಶೇಷ ಹೋಟೆಲ್ `ಸುಸಿ ಎಮು ರುಸೀ ಎಮು~ ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿ ಪ್ರಾರಂಭಗೊಂಡಿದೆ. ಇದು ನಗರದ ಪ್ರಪ್ರಥಮ ಎಮು ರೆಸ್ಟೋರಾ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ.

ಸುಸಿ ಎಮುಗಳನ್ನು ಚರ್ಮದ ಗಂಧೆಗಳನ್ನು ನಿವಾರಿಸುವ, ಒಣ ಚರ್ಮದ ಸಮಸ್ಯೆ ನೀಗುವ, ಮಕ್ಕಳ ಚರ್ಮವನ್ನು ಉತ್ತಮಗೊಳಿಸುವ, ಚರ್ಮದ ಅಲರ್ಜಿ ನಿವಾರಿಸುವ ಎಮು ಎಣ್ಣೆ ತಯಾರಿಕೆಗೆ ಮತ್ತು `ಸಿಯೋಲ್~ ಎಂಬ ಬ್ರಾಂಡ್‌ನ ಸಾಬೂನು ತಯಾರಿಕೆಗೆ ಬಳಸಲಾಗುತ್ತಿತ್ತು. ಇವುಗಳ ಮಾಂಸ ತುಂಬಾ ರುಚಿಕರ ಹಾಗೂ ಸ್ವಾದಿಷ್ಟ. ಸುಸಿ ಎಮುವಿನಿಂದ ತಯಾರಿಸಿದ ಬಗೆಬಗೆಯ ಮಾಂಸಾಹಾರ ಭಕ್ಷ್ಯಗಳು `ಸುಸಿ ಎಮು ರುಸೀ ಎಮು~ವಿನಲ್ಲಿ ಸಿಗುತ್ತವೆ.

`ಕರ್ನಾಟಕದ ಜನರು ಎಂದೆಂದಿಗೂ ಗುಣಮಟ್ಟ ಮತ್ತು ರುಚಿಕರ ಆಹಾರ ಇಷ್ಟಪಡುತ್ತಾರೆ. ಕಾಸ್ಮೊಪಾಲಿಟನ್ ಸಂಸ್ಕೃತಿಯ ನಗರದ ಜನರು ಈಗ ವಿಭಿನ್ನ ಎಮು ಮಾಂಸಾಹಾರ ವೈವಿಧ್ಯದ ಅನುಭವ ಪಡೆಯಲಿದ್ದಾರೆ~ ಎಂಬುದು ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಅಮರನಾರಾಯಣ ಅವರ ಮಾತು.

`ಇಂದಿನ ಆಹಾರ ಕ್ರಮದಿಂದ ಉಂಟಾಗಿರುವ ಆರೋಗ್ಯದ ಸಮಸ್ಯೆ ನಿವಾರಣೆಗೆ ಎಮು ಮಾಂಸ ತುಂಬಾ ಉಪಯುಕ್ತ. ಅದನ್ನು ಸೇವಿಸುವುದರಿಂದ ಅನಗತ್ಯ ಕೊಬ್ಬು, ರಕ್ತದೊತ್ತಡ, ಮಧುಮೇಹ ನಿಯಂತ್ರಿಸಬಹುದು. ಇತರೆ ಮಾಂಸಕ್ಕೆ ಹೋಲಿಸಿದರೆ ಎಮುವಿನಲ್ಲಿ ಕೊಬ್ಬಿನಂಶ ಕಡಿಮೆ~ ಎನ್ನುತ್ತಾರೆ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜು ಕೆವಿಎಎಫ್‌ಎಸ್‌ಯುನ ಡೀನ್ ಪ್ರೊ.ಎಸ್.ಯತಿರಾಜ್.

ನಗರದ ಘಟಕ ಪ್ರಾರಂಭವಾದ ನಂತರ ಗೋವಾ, ಮುಂಬೈ, ಹೈದರಾಬಾದ್‌ಗಳಲ್ಲಿ ಘಟಕ ತೆರೆಯಲೂ ಮುಂದಾಗಿರುವುದಾಗಿ ಸುಸಿ ಸಮೂಹದ ಕಂಪೆನಿಗಳ ಅಧ್ಯಕ್ಷ ಡಾ.ಎಂ.ಎಸ್.ಗುರು ಹೇಳುತ್ತಾರೆ. ಎಮು ಮಾಂಸದ ಸವಿ ಅನುಭವಿಸುವವರು ಇಂದಿರಾನಗರದ ಸಿಎಂಎಚ್ ರಸ್ತೆಯ ಕಡೆಗೆ ಹೊರಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT