ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಸುತ್ತಿಗೆ ನಡಾಲ್

Last Updated 18 ಜನವರಿ 2011, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಡಿಪಿಎ): ವಿಶ್ವ ಅಗ್ರ ರ್ಯಾಂಕ್‌ನ ಆಟಗಾರ ಸ್ಪೇನ್‌ನ ರಫೆಲ್ ನಡಾಲ್ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಗೆಲುವಿನ ಓಟಕ್ಕೆ ಚಾಲನೆ  ನೀಡಿದ್ದಾರೆ.ರಾಡ್ ಲಾವೆರ್ ಅರೇನಾ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ನಡಾಲ್ 6-0, 5-0ರಲ್ಲಿ ಬ್ರೆಜಿಲ್‌ನ ಮಾರ್ಕೊಸ್ ಡೇನಿಯಲ್ ಅವರನ್ನು ಸೋಲಿಸಿದರು.

ಡೇನಿಯಲ್ ಎಡ ಮಂಡಿ ನೋವಿನ ಕಾರಣ ಪಂದ್ಯದ ನಡುವೆಯೇ ಹಿಂದೆ ಸರಿದರು. ಸತತ ನಾಲ್ಕನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಫೆಲ್ ಪಂದ್ಯದ ಮೇಲೆ ಸಂಪೂರ್ಣ ಹತೋಟಿ ಸಾಧಿಸಿದ್ದರು. 2010ರಲ್ಲಿ ಈ ಟೂರ್ನಿಯ ಫೈನಲ್ ತಲುಪಿದ್ದ ಇಂಗ್ಲೆಂಡ್‌ನ ಆಯಂಡಿ ಮರ್ರೆ ಕೂಡ ಎರಡನೇ ಸುತ್ತು ಪ್ರವೇಶಿಸಿದರು. ಅವರು 6-3, 6-1, 4-2ರಲ್ಲಿ ಸ್ಲೊವಾಕಿಯಾದ ಕರೋಲ್ ಬೆಕ್ ಅವರನ್ನು ಮಣಿಸಿದರು.

ಹೆವಿಟ್‌ಗೆ ಆಘಾತ: ಆಸ್ಟ್ರೇಲಿಯಾದ ಲೆಟನ್ ಹೆವಿಟ್ ಮೊದಲ ಸುತ್ತಿನಲ್ಲಿಯೇ ಸೋತು ಹೊರಬಿದ್ದರು. ಅವರು 6-3, 4-6, 6-3, 6-7, 7-9ರಲ್ಲಿ ಅರ್ಜೆಂಟೀನಾದ ಡೇವಿಡ್ ನೆಲ್ಬಂಡಿಯನ್ ಎದುರು ಪರಾಭವಗೊಂಡರು.ಪುರುಷರ ವಿಭಾಗದ ಇನ್ನುಳಿದ ಪಂದ್ಯಗಳಲ್ಲಿ ಸ್ವೀಡನ್‌ನ ರಾಬಿನ್ ಸೊಡರ್ಲಿಂಗ್ 6-4, 6-2, 6-2ರಲ್ಲಿ ಇಟಲಿಯ ಪೊಟಿಟೊ ಸ್ಟಾರೆಸ್ ಎದುರೂ, ಫ್ರಾನ್ಸ್‌ನ ಜೊ ವಿಲ್‌ಫ್ರೆಡ್ ಸೊಂಗಾ 4-6, 2-6, 6-2, 6-3, 6-4ರಲ್ಲಿ ಜರ್ಮನಿಯ ಫಿಲಿಪ್ ಪೆಟ್ಜಸ್ನೆರ್ ವಿರುದ್ಧವೂ, ಕ್ರೊಯೇಷಿಯಾದ ಮರಿನ್ ಸಿಲಿಕ್ 6-3, 6-2, 6-1ರಲ್ಲಿ ಅಮೆರಿಕದ ಡೊನಾಲ್ಡ್ ಯಂಗ್ ಮೇಲೂ, ಸೈಪ್ರಸ್‌ನ ಮಾರ್ಕೊಸ್ ಬಗ್ಡಾಟಿಸ್ 3-6, 7-5, 6-1, 4-6, 6-2ರಲ್ಲಿ ಸ್ಲೊವೇನಿಯಾದ ಗ್ರೇಕಾ ಜೆಮ್ಜಾ ಮೇಲೂ ಗೆದ್ದು ಎರಡನೇ ಸುತ್ತು ತಲುಪಿದರು.

ಇವಾನೊವಿಕ್‌ಗೆ ಸೋಲು: ಮಹಿಳೆಯರ ವಿಭಾಗದ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ಅನಾ ಇವಾನೊವಿಕ್ ಸೋಲು ಕಂಡಿದ್ದಾರೆ. ಅವರು 6-3, 4-6, 8-10ರಲ್ಲಿ ರಷ್ಯಾದ ಎಕಾಥೆರಿನಾ ಮಕರೊವಾ ಎದುರು ಆಘಾತಕ್ಕೆ ಒಳಗಾದರು.

ಇನ್ನುಳಿದ ಪಂದ್ಯಗಳಲ್ಲಿ ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ 6-0, 6-0ರಲ್ಲಿ ರಷ್ಯಾದ ದಿನಾರಾ ಸಫೀನಾ ಎದುರೂ, ಆಸ್ಟ್ರೇಲಿಯಾದ ಸಮಂತಾ ಸ್ಟಾಸರ್ 6-1, 6-1ರಲ್ಲಿ ಅಮೆರಿಕದ ಲಾರೆನ್ ಡೆವೀಸ್ ವಿರುದ್ಧವೂ, ರಷ್ಯಾದ ವೇರಾ ಜೊನಾರೇವಾ 6-2, 6-1ರಲ್ಲಿ ಆಸ್ಟ್ರಿಯದ ಸೈಬಿಲ್ಲೆ ಬಾಮರ್ ವಿರುದ್ಧವೂ, ಸರ್ಬಿಯಾದ ಎಲೆನಾ ಜಾಂಕೋವಿಕ್ 6-0, 7-6ರಲ್ಲಿ ರಷ್ಯಾದ ಅಲಾ ಕುದ್ರಿಸ್ತೆವಾ ಮೇಲೂ ಜಯ ಗಳಿಸಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT