ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಕಿ.ಮೀ. ಉದ್ದದ ಸಾಲು!

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಐಎಎನ್‌ಎಸ್): ಅರ್ಜೆಂಟೀನಾ ಹಾಗೂ ವೆನಿಜುವೆಲಾ ನಡುವಿನ ಸೌಹಾರ್ದ ಫುಟ್‌ಬಾಲ್ ಪಂದ್ಯ ವೀಕ್ಷಿಸಲು ಕ್ರೀಡಾಂಗಣದೊಳಗೆ ತೆರಳಲು ಪ್ರೇಕ್ಷಕರು ಎರಡು ಕಿ.ಮೀ. ಉದ್ದದ ಸಾಲಿನಲ್ಲಿ ನಿಂತಿದ್ದು ಕಂಡುಬಂತು.

ಬಾರಿ ಭದ್ರತೆ ಇದ್ದ ಕಾರಣ ಪ್ರೇಕ್ಷಕರು ಅರ್ಧ ಗಂಟೆ ಕಾಲ ನಿಂತಲ್ಲೇ ನಿಲ್ಲಬೇಕಾಯಿತು. ಪ್ರತಿಯೊಬ್ಬರನ್ನು ಪೂರ್ಣವಾಗಿ ತಪಾಸಣೆಗೆ ಒಳಪಡಿಸಿ ಕ್ರೀಡಾಂಗಣದೊಳಗೆ ಬಿಡಲಾಗುತಿತ್ತು. ಈ ಪಂದ್ಯ ವೀಕ್ಷಿಸಲು ದೇಶದ ಮೂಲೆಮೂಲೆ ಹಾಗೂ ವಿದೇಶದಿಂದಲೂ ಅಭಿಮಾನಿಗಳು ಆಗಮಿಸಿದ್ದರು. 

ಎಲ್ಲಿ ನೋಡಿದರಲ್ಲಿ ಟ್ರಾಫಿಕ್ ಸಮಸ್ಯೆ. ಹಾಗಾಗಿ ಪಂದ್ಯ ರಾತ್ರಿ 7.10ಕ್ಕೆ ಆರಂಭವಾದರೂ ಕೆಲ ಪ್ರೇಕ್ಷಕರು ಕ್ರೀಡಾಂಗಣದೊಳಗೆ ಬರುವುದರೊಳಗೆ ಅರ್ಧ ಪಂದ್ಯ ಮುಗಿದಿತ್ತು. ಸಂಜೆ ಸುರಿದ ಮಳೆ ಟ್ರಾಫಿಕ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿತು.

ಕ್ರೀಡಾಂಗಣದ ಸುತ್ತ ಮುತ್ತ ಸುಮಾರು ಐದು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮೂರು ಹಂತದ ಭದ್ರತೆಯನ್ನು ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT