ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಎಲ್ಲ ಭಾಷೆಗಳಿಗೆ ವಚನಗಳ ಅನುವಾದ ಅಗತ್ಯ'

Last Updated 7 ಸೆಪ್ಟೆಂಬರ್ 2013, 5:43 IST
ಅಕ್ಷರ ಗಾತ್ರ

ವಿಜಾಪುರ: ಬಸವ ತತ್ವ ಪರಿಪಾಲನೆ ಯಲ್ಲಿ ಜಿಡಗಾ-ಮುಗಳಖೋಡ ಮಠ ಮುಂಚೂಣಿಯಲ್ಲಿದ್ದು, ಸಮಾಜಕ್ಕೆ ಸಾಕಷ್ಟು ಅನುಕೂಲತೆ ಕಲ್ಪಿಸಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಇಲ್ಲಿಯ ಯಲ್ಲಾಲಿಂಗೇಶ್ವರ ಪುಣ್ಯಾ ಶ್ರಮದಲ್ಲಿ `ಸಿದ್ಧಶ್ರೀ' ಕಲ್ಯಾಣ ಮಂಟಪದ ಅಡಿಗಲ್ಲು ಹಾಗೂ ಪುರಾಣ ಮಂಗಲೋತ್ಸವ ಸಮಾರಂಭದಲ್ಲಿ ಮಾತನಾಡಿದರು.

`ಶರಣರು 12ನೇ ಶತಮಾನ ದಲ್ಲಿಯೇ ಅನುಭವ ಮಂಟಪ ಸ್ಥಾಪಿ ಸುವ ಮೂಲಕ ಜಾತ್ಯತೀತ ನಿಲುವು ಪ್ರತಿಪಾದಿಸಿದ್ದಾರೆ. ಅವರ ವಚನಗಳು ಬೇರೆ ಭಾಷೆಗಳಿಗೆ ಅನುವಾದ ಗೊಂಡಿದ್ದರೆ ಬಸವ ತತ್ವ ವಿಶ್ವವ್ಯಾಪಿ ಯಾಗುತ್ತಿತ್ತು. ಆ ಕೆಲಸ ಇಂದು ತ್ವತರಿವಾಗಿ ನಡೆಯಬೇಕಿದೆ' ಎಂದರು.

`ಜಲ ಸಂಪನ್ಮೂಲ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಉತ್ತರ ಕರ್ನಾಟಕದ ಜನತೆಯ ಆಶೋತ್ತರ ಗಳಿಗೆ ತಕ್ಕಂತೆ ಕಾರ್ಯ ನಿರ್ವಸು ತ್ತಿದ್ದೇನೆ. ಅವರ ಬೇಡಿಕೆಗಳನ್ನು ಈಡೇರಿ ಸುವಲ್ಲಿ ಉಳಿದ ನನ್ನ ಸಮಯ, ಅವಧಿ ಮೀಸಲಾಗಿಡುತ್ತೇನೆ' ಎಂದು ಹೇಳಿದರು.

ಅತಿಥಿಯಾಗಿದ್ದ ಇಂಡಿ ಶಾಸಕ ಯಶ ವಂತ್ರಾಯಗೌಡ ಪಾಟೀಲ, `ಜಿಡಗಾ ಮಠದಲ್ಲಿ ಅಕ್ಷರ, ಅನ್ನ ದಾಸೋಹ ಇದೆ. ಸಾಮಾನ್ಯರ ಶ್ರೇಯೋಭಿವೃದ್ಧಿ ಗಾಗಿ ಮಾತೃ ಪ್ರೇಮದಿಂದ ನಡೆದು ಕೊಳ್ಳುತ್ತಿದೆ. ಸಿದ್ಧಶ್ರಿ     ಕಲ್ಯಾಣ ಮಂಟಪ ನಿರ್ಮಾಣಕ್ಕೆ ಭಕ್ತನಾಗಿ ರೂ. 5 ಲಕ್ಷ ದೇಣಿಗೆ ನೀಡುತ್ತೇನೆ' ಎಂದರು.

ಸಾನಿಧ್ಯ ವಹಿಸಿದ್ದ ಉಡುಪಿ ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿ, `ಮನುಷ್ಯ ಜಾತಿ ಒಂದೇ ಆಗಿದ್ದು, ವಿಶ್ವಮಾನವ ಪರಿಕಲ್ಪನೆ ಮೂಡಬೇಕಿದೆ. ಎಲ್ಲ ಮತ, ಪಂಥಗಳ ದಾರಿ ಒಂದೇ. ಬಡತನ-ಸಿರಿತನ ಶಾಶ್ವತವಲ್ಲ. ಪ್ರೀತಿ, ವಾತ್ಸಲ್ಯ ನಮ್ಮನ್ನು ಕಾಯುತ್ತವೆ' ಎಂದರು.

`ದೇಹ ಸ್ನಾನ ಕಾಣದಿದ್ದರೆ ಕೊಳೆಯಾಗುವ ಹಾಗೆ ಮನಸ್ಸು ಸಹ ಆಗಾಗ ಕೊಳೆಯಾಗುತ್ತಿರುತ್ತದೆ. ಸಂತರ ಶರಣರ ವಾಣಿಯನ್ನು ಕೇಳುವುದರಿಂದ ಮನಸಿನ ಕೊಳೆ ತೊಳೆಯುತ್ತದೆ' ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮುಗಳ ಖೋಡ-ಜಿಡಗಾ ಮಠದ ಡಾ.ಮುರು ಘರಾಜೇಂದ್ರ ಸ್ವಾಮೀಜಿ, ಎಂ.ಎಸ್. ರುದ್ರಗೌಡರ ಮಾತನಾಡಿದರು.
ಪುರಾಣ ಹೇಳಿದ ಗದುಗಿನ ಕಲ್ಲಿನಾಥ ಶರಣರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಾವ್ಯ ದೇಸಾಯಿ, ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ ಇತರರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT