ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್ ಅಂತ್ಯಕ್ಕೆ ಕ್ರಿಕೆಟ್ ಮೈದಾನ ಸಿದ್ಧ

Last Updated 20 ಮಾರ್ಚ್ 2011, 9:20 IST
ಅಕ್ಷರ ಗಾತ್ರ

ಯಾದಗಿರಿ: ಬರುವ ಏಪ್ರಿಲ್ ಅಂತ್ಯಕ್ಕೆ ಯಾದಗಿರಿ ನಗರದಲ್ಲಿ ಸುಸಜ್ಜಿತವಾದ ಕ್ರಿಕೆಟ್ ಮೈದಾನ ಸಿದ್ಧವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ತಿಳಿಸಿದರು.
ಶನಿವಾರ ನಗರದ ಜಿಲ್ಲಾ ಕ್ರೀಡಾಂಗ ಣಕ್ಕೆ ಭೇಟಿ ನೀಡಿ, ಕಾಮಗಾರಿ ಪರಿ ಶೀಲಿಸಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಈಗಾಗಲೇ ಜಿಲ್ಲಾ ಕ್ರೀಡಾಂಗಣದಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಲಾ ಗಿದೆ. ತಗ್ಗು ಪ್ರದೇಶದಲ್ಲಿ ಕೆರೆಯ ಹೂಳೆತ್ತಿದ ಮಣ್ಣನ್ನು ಹಾಕಲಾಗು ತ್ತಿದೆ. ಈಗಿರುವ ಆಡಳಿತ ಭವನ ಹಾಗೂ ಗ್ಯಾಲರಿಯ ಮುಂಭಾಗದಲ್ಲಿ ಸುಸಜ್ಜಿತವಾದ ಕ್ರೀಡಾಂಗಣವನ್ನು ಇನ್ನೊಂದು ತಿಂಗಳಲ್ಲಿ ಸಿದ್ಧಪಡಿಸಲಾಗುವುದು ಎಂದರು.

ರಣಜಿ ಪಂದ್ಯಗಳನ್ನು ಆಡಬಹುದಾದ ಕ್ರಿಕೆಟ್ ಮೈದಾನ ಇದಾಗಲಿದ್ದು, ಮೇ ತಿಂಗಳಿಂದ ಕ್ರಿಕೆಟ್ ಆಡಲು ಕ್ರೀಡಾಂಗಣ ಲಭ್ಯವಾಗಲಿದೆ. ಅದರ ಜೊತೆಗೆ ಜಿಲ್ಲಾ ಕ್ರೀಡಾಂಗಣಕ್ಕೆ ವಿದ್ಯುತ್, ನೀರು, ಸಂಪರ್ಕ ರಸ್ತೆ, ಕಂಪೌಂಡ್ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ರೂ.4 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ ಎಂದು ಹೇಳಿದರು.

ಕ್ರೀಡಾಂಗಣದ ಅಭಿವೃದ್ಧಿಗೆ ಈಗಾಗಲೇ ರೂ.2 ಕೋಟಿ ಅನುದಾನ ಲಭ್ಯವಿದ್ದು, ಇನ್ನೂ ರೂ. 2 ಕೋಟಿ ಅನುದಾನಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈಗಾಗಲೇ ಜಿಲ್ಲಾ ಕ್ರೀಡಾಂಗ ಣದ ಅಭಿವೃದ್ಧಿಗಾಗಿ ರೂ.13 ಕೋಟಿಯ ಪ್ರಸ್ತಾವನೆಯನ್ನು ಯುವ ಜನ ಸೇವೆ ಮತ್ತು ಕ್ರೀಡಾ ಇಲಾ ಖೆಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಅತ್ಯಾಧುನಿಕ ಕ್ರೀಡಾಂಗಣ ನಿರ್ಮಾಣ ಮಾಡಲು ಯೋಜಿಸಲಾ ಗಿದ್ದು, ಈಗಾಗಲೇ ಕರ್ನಾಟಕ ಹೌಸಿಂಗ್ ಬೋರ್ಡ್‌ಗೆ ಪತ್ರ ಬರೆಯ ಲಾಗಿದೆ. ಫೆನ್ಸಿಂಗ್, ಕಂಪೌಂಡ್ ಗೋಡೆ, ಅಥ್ಲೆಟಿಕ್ ಟ್ರ್ಯಾಕ್, ಆಡಳಿತ ವಿಭಾಗವನ್ನು ನಿರ್ಮಾಣ ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚಿ ಸಲಾಗಿದೆ ಎಂದರು. ಜಿಲ್ಲಾ ಕ್ರೀಡಾಂಗ ಣದಲ್ಲಿ ಕ್ರಿಕೆಟ್ ಮತ್ತು ಅಥ್ಲೆಟಿಕ್ಸ್‌ಗಾಗಿ ಪ್ರತ್ಯೇಕ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡ ಲಾಗುತ್ತಿದೆ. ಈಗಿರುವ ಆಡಳಿತ ಕಚೇರಿ ಹಾಗೂ ಗ್ಯಾಲರಿಯನ್ನು ಒಳ ಗೊಂಡ ಕಟ್ಟಡವು ಕ್ರಿಕೆಟ್ ಮೈದಾನದ ಗ್ಯಾಲರಿ ಆಗಿ ಪರಿವರ್ತನೆ ಆಗಲಿದೆ ಎಂದು ವಿವರಿಸಿದರು.

ವಾಲಿಬಾಲ್ ಕೋರ್ಟ್, ಈಜು ಗೋಳ, ಒಳಾಂಗಣ ಕ್ರೀಡಾಂಗಣ ಸೇರಿ ದಂತೆ ಹಂತ ಹಂತವಾಗಿ ಎಲ್ಲ ಸೌಲಭ್ಯ ಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಪಂ ಎಂಜಿನಿಯರಿಂಗ್ ವಿಭಾಗದ ಕಾರ್ಯ ಪಾಲಕ ಎಂಜಿನಿಯರ್ ಬಿ. ಎಸ್. ಮಾಲಿಬಿರಾದಾರ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸೂಗಪ್ಪ ಪಾಟೀಲ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT