ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ಇಲಾಖೆ ಹೆಸರಲ್ಲಿ ವಂಚನೆ

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇ-ಮೇಲ್ ಮೂಲಕ ಆಮಿಷವೊಡ್ಡಿ ಸಾರ್ವಜನಿಕರನ್ನು ದಾರಿತಪ್ಪಿಸಿ ಹಣ ಕಬಳಿಸುವಂತಹ ಮೋಸದ ಜಾಲವೊಂದು ಈಗ ಸರ್ಕಾರಿ ಇಲಾಖೆಗಳನ್ನೂ  ಕಾಡಲು ಆರಂಭಿಸಿದೆ.
ವರಮಾನ ತೆರಿಗೆ ಇಲಾಖೆಯ ಇ-ಮೇಲ್, ಡೊಮೈನ್‌ಗಳನ್ನು ನಕಲು ಮಾಡಿಕೊಂಡು ತೆರಿಗೆದಾರರನ್ನು ವಂಚಿಸುವ ಜಾಲವೊಂದು ದೇಶದಲ್ಲಿ `ಕಾರ್ಯೋನ್ಮುಖ~ವಾಗಿದ್ದು, ಅಂತರ್ಜಾಲ ಬಳಕೆದಾರರು ಈ ಬಗ್ಗೆ ಎಚ್ಚರವಹಿಸಬೇಕೆಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.

ಮೋಸ ನಡೆಯುವುದು ಹೀಗೆ: ` "ref.init@incometaxindia.gov.in" ಮೇಲ್ ಐಡಿಯಿಂದ ನಿಮ್ಮ ಇ-ಮೇಲ್ ಅಕೌಂಟ್‌ಗೆ `ನೀವು ತೆರಿಗೆ ಇಲಾಖೆಗೆ ಪಾವತಿಸಿರುವ ಹೆಚ್ಚುವರಿ ಹಣ ಬಾಕಿ ಇದ್ದು, ಈ ಕೆಳಗಿನ ಲಿಂಕ್ ಒತ್ತಿ ನಿಮ್ಮ ಹಣಕಾಸಿನ ವಿವರ, ವೈಯಕ್ತಿಕ ಮಾಹಿತಿಗಳನ್ನು ದಾಖಲಿಸಿದರೆ, ಆ ಹಣವನ್ನು ತಮಗೆ ತಲುಪಿಸುತ್ತೇವೆ~ ಎಂಬ ಮಾಹಿತಿ ರವಾನೆಯಾಗುತ್ತದೆ. ನಿಮ್ಮನ್ನು ನಂಬಿಸುವುದಕ್ಕಾಗಿ ಈ ಮೇಲ್ ಜೊತೆ ವರಮಾನ ತೆರಿಗೆ ಇಲಾಖೆಯ  (w-ww.inco-m-e-t-ax-in-d-ia.gov.in)   ವೆಬ್‌ಸೈಟ್ ವಿಳಾಸ ಕೂಡ ಇರುತ್ತದೆ. ಈ ಲಿಂಕ್ ಕ್ಲಿಕ್ಕಿಸಿದರೆ `ಮೋಸಜಾಲ~ದ ಇ ಮೇಲ್‌ಗೆ ಮಾಹಿತಿ ರವಾನೆಯಾಗುವಂತೆ ತಂತ್ರಜ್ಞಾನ ವಿನ್ಯಾಸ ಮಾಡಲಾಗಿರುತ್ತದೆ.

ಇಂಥ `ಮೋಸದಾಟ~ವನ್ನು ಲಖನೌ ಮೂಲದ ಅರುಣ್ ಎಂಬುವವರು ಪತ್ತೆ ಹಚ್ಚಿದ್ದಾರೆ. ಇತ್ತೀಚೆಗೆ ಅವರ ಇ-ಮೇಲ್ ಐಡಿಗೆ ತೆರಿಗೆ ಇಲಾಖೆಯಿಂದ ಎಂದು  ಹೇಳಿಕೊಂಡು  ಮಾಹಿತಿಯೊಂದು ರವಾನೆಯಾಗಿದೆ. ಅದರಲ್ಲಿ `ಕಳೆದ ವರ್ಷದ ನಿಮ್ಮ ತೆರಿಗೆಯನ್ನು ಪರಾಮರ್ಶಿಸಲಾಗಿದ್ದು, ನೀವು ಹೆಚ್ಚುವರಿಯಾಗಿ 34,120.05 ರೂ. ಹಣವನ್ನು ಪಾವತಿಸಿದ್ದೀರಿ. ಆದ್ದರಿಂದ ಆ ಹಣವನ್ನು ನಿಮಗೆ ಹಿಂದಿರುಗಿಸಬೇಕು.

ಅದಕ್ಕಾಗಿ ನಿಮ್ಮ ವೈಯಕ್ತಿಕ ವಿವರಗಳೊಂದಿಗೆ `ತೆರಿಗೆ ಮರುಪಾವತಿ ಮನವಿ~ಯನ್ನು ಸಲ್ಲಿಸಬೇಕೆಂಬ ಮಾಹಿತಿ ಇತ್ತು. ಇಲಾಖೆಯಿಂದ ಬಂದ ಮಾಹಿತಿ ನೋಡಿ, ಅಚ್ಚರಿ ವ್ಯಕ್ತಪಡಿಸಿದ ಅರುಣ್, `ನಾನೊಬ್ಬ ವಿದ್ಯಾರ್ಥಿಯಾಗಿದ್ದು, ತೆರಿಗೆ ಪಾವತಿಸಲು ಹೇಗೆ ಸಾಧ್ಯ? ಇದೊಂದು ಮೋಸದ ಮೇಲ್~ ಎಂದು ಅವರು ತೀರ್ಮಾನಿಸಿದ್ದಾರೆ.

ಇಂಥ ಕೆಲವು ಘಟನೆಗಳನ್ನು ವಿಶ್ಲೇಷಿಸಿ ನೋಡಿದರೆ  ಸರ್ಕಾರದ ಸರ್ವರ್‌ಗಳಿಗೆ ಸೂಕ್ತ ರಕ್ಷಣೆ ಇಲ್ಲದಿರುವುದು ಗೊತ್ತಾಗುತ್ತದೆ ಎಂದು  ಖಾಸಗಿ ಸೈಬರ್ ರಕ್ಷಣಾ ಸಂಸ್ಥೆ ಅಭಿಪ್ರಾಯಪಡುತ್ತದೆ. ಖಾಸಗಿ ಕಂಪೆನಿಯೊಂದರ ಅಧ್ಯಕ್ಷ ಮುಖೇಶ್ ಸೈನಿ, `ಯಾವುದೇ ಸರ್ಕಾರಿ ಇಲಾಖೆಯ ಡೊಮೈನ್‌ಗಳನ್ನು ನಕಲು ಮಾಡಬಹುದಾಗಿದ್ದು, ವರಮಾನ ತೆರಿಗೆ ಇಲಾಖೆಯ ಹೆಸರಲ್ಲಿ ಯಾರು ಬೇಕಾದರೂ ಮೇಲ್‌ಗಳನ್ನು ಕಳುಹಿಸಬಹುದಾಗಿದೆ~ ಎಂದು ಹೇಳಿದ್ದಾರೆ.

ಇಲಾಖೆ ಸ್ಪಷ್ಟನೆ : ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಈ ಕುರಿತು ಸ್ಪಷ್ಟನೆ ನೀಡಿದ್ದು, `ಇಲಾಖೆ ಯಾವುದೇ ಸಂದರ್ಭದಲ್ಲಿ ವ್ಯಕ್ತಿಯ ಹಣಕಾಸಿನ ವಿಚಾರ ಅಥವಾ ವೈಯಕ್ತಿಕ ವಿವರಗಳನ್ನು ಇ-ಮೇಲ್ ಮೂಲಕ ಕೇಳಿ ಪಡೆಯುವುದಿಲ್ಲ. ಮಾತ್ರವಲ್ಲ, ಪಿನ್ ಸಂಖ್ಯೆ, ಪಾಸ್‌ವರ್ಡ್ ಅಥವಾ ಬ್ಯಾಂಕ್ ಅಥವಾ ಹಣಕಾಸಿನ ವ್ಯವಹಾರಗಳನ್ನು ರಕ್ಷಿಸುವ ಯಾವುದೇ ಮಾಹಿತಿಗಳನ್ನು ಇ-ಮೇಲ್ ಮೂಲಕ ಕಳುಹಿಸುವಂತೆ ವಿನಂತಿಸುವುದಿಲ್ಲ~.

ಒಂದು ಪಕ್ಷ ವರಮಾನ ತೆರಿಗೆ ಇಲಾಖೆಯ ಹೆಸರಿನಲ್ಲಿ ಇಂಥ ಇ-ಮೇಲ್ ಅಥವಾ ವೆಬ್‌ಸೈಟ್ ಅನ್ನು ಸಾರ್ವಜನಿಕರ ಗಮನಿಸಿದರೆ ಅವುಗಳನ್ನು ತೆರಿಗೆ ಇಲಾಖೆಯ ಇಮೇಲ್ : phishin­g@incometax india.gov.in ಕಳುಹಿಸಿ. ಜೊತೆಗೆ ಒಂದು ಪ್ರತಿಯನ್ನು incident @certin .org.in ಗೆ ಸಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ.

ಇಂಥ ಪ್ರಕರಣಗಳ ಬಗ್ಗೆ ಇಉ್ಕಜ್ಞಿ,  ಗೆ ಮಾಹಿತಿ ನೀಡಲಾಗಿದೆ. ಇಉ್ಕಜ್ಞಿ,  ಇದೊಂದು ಕೇಂದ್ರ ಮೇಲ್ವಿಚಾರಕ ಸಂಸ್ಥೆ, ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆ ಕಂಪ್ಯೂಟರ್ ಸಂಬಂಧಿ ಸಮಸ್ಯೆಯ ಮೂಲ ಪತ್ತೆ ಹಚ್ಚಲು ನೆರವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT