ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಬತ್ತು ಸಾವಿರ ರನ್ ಗಡಿ ದಾಟಿದ ಜೋಡಿ!

Last Updated 19 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಐಎಎನ್‌ಎಸ್): ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ನ್ಯೂಜಿಲೆಂಡ್ ವಿರುದ್ಧ ಭಾರೀ ಅಂತರದ ಜಯ ಸಾಧಿಸಿದ ಶ್ರೀಲಂಕಾ ತಂಡದ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಒಂಬತ್ತು ಸಾವಿರ ರನ್ನುಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳಾದರು.

288 ಏಕದಿನ ಪಂದ್ಯಗಳನ್ನಾಡಿರುವ ಸಂಗಕ್ಕಾರ 37.91ರ ಸರಾಸರಿಯಲ್ಲಿ  9.062 ರನ್ನುಗಳನ್ನು ಗಳಿಸಿದ್ದಾರೆ.  ಜಯವರ್ಧನೆ 332 ಪಂದ್ಯಗಳಿಂದ 32.32ರ ಸರಾಸರಿಯಲ್ಲಿ 9,050 ರನ್ನುಗಳನ್ನು ಗಳಿಸಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ಕಿವೀಸ್ ವಿರುದ್ಧ ಶತಕ ಬಾರಿಸಿದ ಸಂಗಕ್ಕಾರ ಇನ್ನೊಂದು ದಾಖಲೆಯನ್ನೂ ಬರೆದರು.

ಈ ವಿಶ್ವಕಪ್ ಟೂರ್ನಿಯಲ್ಲಿ ಶತಕ ಗಳಿಸಿದ ಪ್ರಥಮ ವಿಕೆಟ್‌ಕೀಪರ್ ಮತ್ತು ನಾಯಕ  ಅವರು. ಫೆಬ್ರುವರಿ 20ರಣದು ಹಂಬನಟೋಟಾದಲ್ಲಿ ಕೆನಡಾ ವಿರುದ್ಧ ಅವರು 92 ರನ್ ಬಾರಿಸಿದ್ದರೂ, ಶತಕ ವಂಚಿತರಾಗಿದ್ದರು. ತಮ್ಮ ಏಕದಿನ ಕ್ರಿಕೆಟ್ ಜೀವನದಲ್ಲಿ 18ನೇ ಬಾರಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇದಕ್ಕೂ ಮುನ್ನ ಅವರಾಡಿದ 62 ಪಂದ್ಯಗಳಲ್ಲಿ ಅವರು ಶತಕ ದಾಖಲಿಸಿರಲಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ  ಹತ್ತು ಸ್ಪಂಪಿಂಗ್ ಮಾಡಿದ ವಿಕೆಟ್‌ಕೀಪರ್ ಆಗಿದ್ದಾರೆ.

ಜಯವರ್ಧನೆ ಮತ್ತು ಸಂಗಕ್ಕಾರ ಅವರು ಮೂರನೇ ವಿಕೆಟ್‌ಗೆ 145 ರನ್ನುಗಳ ಪಾಲುದಾರಿಕೆ ನಿರ್ವಹಿಸಿದ್ದು ಶ್ರೀಲಂಕಾ ತಂಡದ ಪರವಾಗಿ ಅತ್ಯುತ್ತಮ ಜೊತೆಯಾಟ.  2007ರ ವಿಶ್ವಕಪ್‌ನಲ್ಲಿ 81 ರನ್ನುಗಳ ಅಂತರದಿಂದ ಜಯ ಗಳಿಸಿದ್ದು ಇದುವರೆಗಿನ ಶ್ರೀಲಂಕಾದ ಉತ್ತಮ ಗೆಲುವಿನ ಅಂತರವಾಗಿತ್ತು. ಶುಕ್ರವಾರ 112 ರನ್ನುಗಳಿಂದ ಕಿವೀಸ್ ತಂಡವನ್ನು ಸೋಲಿಸಿ ಹೊಸ ದಾಖಲೆ ಬರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT