ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡ್ಲೆಗುದ್ದು: ದುಷ್ಕೃತ್ಯಕ್ಕೆ ಅಡಿಕೆ ತೋಟ ನಾಶ

Last Updated 19 ಡಿಸೆಂಬರ್ 2013, 9:47 IST
ಅಕ್ಷರ ಗಾತ್ರ

ಭರಮಸಾಗರ: ಎರಡು ಎಕರೆ ಪ್ರದೇಶದಲ್ಲಿ ಬೆಳೆಸಿದ್ದ ಸುಮಾರು 1200 ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ನಷ್ಟ  ಸಂಭವಿಸಿದ ಘಟನೆ ಹೋಬಳಿಯ ಕಡ್ಲೆಗುದ್ದು ಗ್ರಾಮದಲ್ಲಿ ಮಂಗಳವಾರ ರಾತ್ರಿ ಜರುಗಿದೆ.

ಗ್ರಾಮದ ಆಂಜನೇಯ ದೇವಸ್ಥಾನದ ಪೂಜಾರಿ ವೈಷ್ಣವ ಜನಾಂಗದ ಆರ್‌.ಹನುಮಂತಯ್ಯ ತಮ್ಮ 4 ಎಕರೆ 17 ಗುಂಟೆ ಪ್ರದೇಶದಲ್ಲಿ
ಅಡಿಕೆ ಗಿಡಗಳನ್ನು ಬೆಳೆಸಿದ್ದಾರೆ. ಅದರಲ್ಲಿ ಸಣ್ಣಗಿಡಗಳನ್ನು ಬಿಟ್ಟು ಎರಡು ಎಕರೆ ಪ್ರದೇಶದಲ್ಲಿದ್ದ ನಾಲ್ಕು ವರ್ಷದ 1200 ಅಡಿಕೆ
ಗಿಡಗಳನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ಕಡಿದು ಹಾಕಿದ್ದು, ಸುಮಾರು ರೂ 4 ಲಕ್ಷದಷ್ಟು ನಷ್ಟ ಸಂಭವಿಸಿದೆ.

ಇನ್ನೆರಡು ವರ್ಷ ಕಳೆದಿದ್ದರೆ ಅಡಿಕೆ ಫಸಲು ಆರಂಭವಾಗಲಿದ್ದು ಉತ್ತಮ ಆದಾಯದ ನಿರೀಕ್ಷೆ ಇರಿಸಿಕೊಂಡಿದ್ದ ಕುಟುಂಬ ಘಟನೆಯಿಂದ ನೊಂದಿದೆ.

ಹನುಮಂತಯ್ಯ ಭರಮಸಾಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT