ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ತಾತ್ಸಾರ

Last Updated 16 ಜುಲೈ 2012, 19:30 IST
ಅಕ್ಷರ ಗಾತ್ರ

ಕನ್ನಡದ ಅಗ್ರಮಾನ್ಯ ಸಾಹಿತಿ, ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಹೊತ್ತ, ಶಿವಮೊಗ್ಗದ `ಕುವೆಂಪು ವಿಶ್ವವಿದ್ಯಾಲಯ~ವು ನಕಲಿ ಅಂಕಪಟ್ಟಿಗಳ ಹಗರಣದಿಂದಾಗಿ ಬಹಳ ಪ್ರಚಾರದಲ್ಲಿದೆ.
 
ಆಡಳಿತ ವೈಫಲ್ಯದಿಂದ ಸಂಭವಿಸಿರಬಹುದಾದ ಇಂತಹ ದುಷ್ಕೃತ್ಯದ, ಮುಂದಿನ ದಿನಗಳಲ್ಲಿ ಇವುಗಳನ್ನು ನಿವಾರಿಸುವ ಕುರಿತು ಇತ್ತೀಚೆಗೆ `ಕುವೆಂಪು ವಿ.ವಿ.~ಯು ದಿನಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡಿದೆ.

ಈ ಜಾಹೀರಾತಿನಲ್ಲಿನ ವಾಕ್ಯರಚನೆ, ಕಾಗುಣಿತಗಳನ್ನು ಗಮನಿಸಿದವರಿಗೆ ಒಂದು ವಿಶ್ವವಿದ್ಯಾಲಯ, ಅದರಲ್ಲೂ ಕನ್ನಡ ಕಂಪನ್ನು ಪಸರಿಸಿದ `ಕುವೆಂಪು~ ಸ್ಮರಣೆಯಲ್ಲಿ ಸ್ಥಾಪಿತ ವಿಶ್ವವಿದ್ಯಾಲಯ ಎಷ್ಟು ಜವಾಬ್ದಾರಿ - ಕರ್ತವ್ಯನಿಷ್ಠೆ ಮೆರೆದಿದೆ ಎಂದು ಸೋಜಿಗವಾಗುತ್ತದೆ.
 

ಕನಿಷ್ಠ ಪಕ್ಷ ವ್ಯಾಕರಣ, ಕಾಗುಣಿತ, ಮುದ್ರಣದೋಷ ಅಲ್ಪ - ಪೂರ್ಣವಿರಾಮಗಳಂಥ ಸಂಗತಿಗಳನ್ನೇ ಸರಿಪಡಿಸಲಾಗದ ಆಡಳಿತಗಾರರು, ಸಿಬ್ಬಂದಿ ಇನ್ನು ಆ ವಿಶ್ವವಿದ್ಯಾಲಯವನ್ನು ಎಷ್ಟರ ಮಟ್ಟಿಗೆ ಸುಧಾರಿಸಿಯಾರು?

ಕೇವಲ 9 ಕಂಡಿಕೆಗಳ ಜಾಹೀರಾತಿನಲ್ಲಿ 10 ದೋಷಗಳು ಎದ್ದು ಕಾಣುತ್ತಿವೆಯೆಂದರೆ, ವಿಶ್ವವಿದ್ಯಾಲಯಗಳೇ ನಾಡನುಡಿಯ ಬಗ್ಗೆ ತಾತ್ಸಾರಭಾವದಿಂದ ಬರಹಗಳನ್ನು ಪ್ರಕಟಣೆಗೆ ಕಳುಹಿಸುವಂತಾದಲ್ಲಿ ಯಾರನ್ನು ದೂಷಿಸಬೇಕು? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT