ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಕೆಲಸಕ್ಕಾಗಿ ದುಡಿದ ಸಂಶೋಧಕ

Last Updated 1 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸಂಶೋಧನಾ ಕಾರ್ಯ ಕೈಗೊಳ್ಳುವುದು ಮಾತ್ರವಲ್ಲ, ಇತರರು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ, ಪ್ರೋತ್ಸಾಹಿಸಿದ್ದು ಚಿದಾನಂದಮೂರ್ತಿ ಅವರ ಹೆಗ್ಗಳಿಕೆ~ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಚಿದಾನಂದಮೂರ್ತಿ ಅವರಿಗೆ 80ನೇ ಹುಟ್ಟುಹಬ್ಬದ ಪ್ರಯುಕ್ತ ನಗರದ ಪುರಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಸತ್ಯ ಶೋಧನೆಯನ್ನೇ ಮುಖ್ಯ ಕಾಯಕವನ್ನಾಗಿ ಮಾಡಿಕೊಂಡ ಚಿದಾನಂದಮೂರ್ತಿ ಅವರು ಹೋರಾಟ ನಡೆಸುತ್ತಲೇ ಬೆಳೆದವರು. ಬೋಧನೆಗೆ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡಿದ್ದ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುಗಳು~ ಎಂದು ಸ್ಮರಿಸಿದರು.

ಸಾಹಿತಿ ಡಾ.ಸಾ.ಶಿ. ಮರುಳಯ್ಯ ಮಾತನಾಡಿ, `ಚಿದಾನಂದಮೂರ್ತಿ, ಡಾ.ಎಂ.ಎಂ. ಕಲಬುರ್ಗಿ ಹಾಗೂ ವೆಂಕಟಾಚಲಶಾಸ್ತ್ರಿ ಅವರು 21ನೇ ಶತಮಾನದ ಶ್ರೇಷ್ಠ ಸಂಶೋಧನಾ ರತ್ನತ್ರಯರು. ಹಾಗೆಯೇ ಕನ್ನಡದ ಕೆಲಸಕ್ಕಾಗಿ ದುಡಿದ ಏಕೈಕ ಸಂಶೋಧಕ ಚಿದಾನಂದಮೂರ್ತಿ. ಕನ್ನಡಕ್ಕೆ ಯಾವುದೇ ಚ್ಯುತಿ ಉಂಟಾದರೂ ಅದರ ವಿರುದ್ಧ ಹೋರಾಟ ನಡೆಸುತ್ತಿದ್ದರು~ ಎಂದು ಹೇಳಿದರು.

ಸಚಿವ ಮುರುಗೇಶ್ ನಿರಾಣಿ, `ನಾಡು ಕಂಡ ಮೇರು ವ್ಯಕ್ತಿತ್ವ ಚಿದಾನಂದಮೂರ್ತಿ. ಅವರು ಕನ್ನಡ ನಾಡಿನ ಅಮೂಲ್ಯ ಆಸ್ತಿ. ನಾಡಿನ ಪ್ರಗತಿಗೆ ಅವರ ಮಾರ್ಗದರ್ಶನ ಅಗತ್ಯವಾಗಿದೆ. ಅವರ ಸಂಶೋಧನಾ ಕೃತಿಗಳು ಹಾಗೂ ಇತರೆ ಮಾಹಿತಿ ವೆಬ್‌ಸೈಟ್‌ನಲ್ಲಿ ದೊರೆಯುವಂತಾಗಬೇಕು~ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿದ ಚಿದಾನಂದಮೂರ್ತಿ ಮಾತನಾಡಿ, `ಸತ್ಯವನ್ನು ಹೇಳಬೇಕು ಹಾಗೂ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂಬ ಹಿರಿಯರ ಮಾತನ್ನು ಜೀವನದಲ್ಲಿ ಪಾಲಿಸಿಕೊಂಡು ಬಂದಿದ್ದೇನೆ~ ಎಂದು ಭಾವುಕರಾಗಿ ನುಡಿದರು.

ಸಮಾರಂಭದಲ್ಲಿ ಚಿದಾನಂದಮೂರ್ತಿ ಅವರ ಪತ್ನಿ ವಿಶಾಲಾಕ್ಷಮ್ಮ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ `ಚಿದಾನಂದ ಸಿರಿ~ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು.

ಕ್ಷತ್ರಿಯ ಮಹಾಸಂಸ್ಥಾನದ ಸುರೇಶ್ವರಾನಂದ ಭಾರತಿ ಸ್ವಾಮೀಜಿ, ತುಮಕೂರು ಜಿಲ್ಲಾಧಿಕಾರಿ ಡಾ.ಸಿ. ಸೋಮಶೇಖರ್, ಸಮಾಜ ಸೇವಕ ಜೆ.ರಾಮ್‌ಸಿಂಗ್, ಸ್ವಾಗತ ಸಮಿತಿ ಅಧ್ಯಕ್ಷ ಆರ್.ದತ್ತೂರಾವ್, ಸಾಹಿತಿ ಹೀ.ಚಿ. ಶಾಂತವೀರಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT