ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿಯಲ್ಲಿ ದಕ್ಷಿಣ ಕನ್ನಡ ತಂಡದ ಮೇಲುಗೈ

ಪೈಕಾ ಕೂಟ: ಕೊಕ್ಕೊದಲ್ಲಿ ಮೈಸೂರಿಗೆ ಪ್ರಶಸ್ತಿ
Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಶಿರಸಿ (ಉತ್ತರಕನ್ನಡ ಜಿಲ್ಲೆ): ಬೆಳಗಾವಿ ಹಾಗೂ ಮೈಸೂರು ಜಿಲ್ಲೆಯ ತಂಡಗಳು ಇಲ್ಲಿನ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ  ರಾಜ್ಯ ಮಟ್ಟದ ಪೈಕಾ ಕ್ರೀಡಾಕೂಟದಲ್ಲಿ ಕ್ರಮವಾಗಿ 16 ವರ್ಷದ ಒಳಗಿನ ಬಾಲಕ–ಬಾಲಕಿಯರ ವಿಭಾಗದ ಕೊಕ್ಕೊ ಹಣಾಹಣಿಯಲ್ಲಿ ಚಾಂಪಿಯನ್‌ ಆದವು.

ಕಬಡ್ಡಿ ವಿಭಾಗದಲ್ಲಿ ಮಂಗಳೂರಿನ ಬಾಲಕ–ಬಾಲಕಿಯರ ತಂಡಗಳು ಪ್ರಶಸ್ತಿ ಜಯಿಸಿದವು. ಕೊಕ್ಕೊ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯ ಚಂದರಗಿ ಕ್ರೀಡಾಶಾಲೆಯ ಪ್ರವೀಣ ಅಪ್ಪಿನಬೈಲ್‌ ನಾಯಕತ್ವದ ತಂಡವು 21–20 ಅಂಕಗಳಿಂದ ಶಿವಮೊಗ್ಗ ಜಿಲ್ಲೆ ತಂಡವನ್ನು ಮಣಿಸಿತು.   ದಾವಣಗೆರೆ ಜಿಲ್ಲೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಬಾಲಕಿಯರ ವಿಭಾಗದಲ್ಲಿ ಎಲ್ಲರ ಗಮನ ಸೆಳೆದಿದ್ದ ನಮೃತಾ ಕೆ.ಎಮ್‌. ನಾಯಕತ್ವದ ಮೈಸೂರು ಜಿಲ್ಲಾ ಕೊಕ್ಕೊ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಬೆಳಗಾವಿ ಜಿಲ್ಲಾ ತಂಡವನ್ನು 10–9 ಅಂಕಗಳಿಂದ ಮಣಿಸಿತು. ಶಿವಮೊಗ್ಗ ಜಿಲ್ಲೆ ಮೂರನೇ ಸ್ಥಾನ ಪಡೆಯಿತು.

ಕಬಡ್ಡಿ ವಿಭಾಗದಲ್ಲಿ ಮಂಗಳೂರಿನ ಬಾಲಕರು 39–21 ಅಂಕಗಳಿಂದ ದಾವಣಗೆರೆ ಬಾಲಕರನ್ನು ಮಣಿಸಿದರೆ, ಬಾಲಕಿಯರು 55–15 ಅಂಕಗಳ ಭರ್ಜರಿ ಅಂತರದಿಂದ ಚಿಕ್ಕಮಗಳೂರು  ತಂಡವನ್ನು ಸೋಲಿಸಿದರು. ಕೋಲಾರದ ಬಾಲಕರ ತಂಡ ಹಾಗೂ ಚಿಕ್ಕಬಳ್ಳಾಪುರ ಬಾಲಕಿಯರ ತಂಡ ತೃತೀಯ ಸ್ಥಾನ ಗಳಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT