ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿನ ಖರೀದಿ ದರ ಏರಿಕೆ ಸಾಧ್ಯತೆ

Last Updated 30 ಜನವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ನೀಡುವ  ಖರೀದಿ ಬೆಲೆ (ಎಫ್‌ಆರ್‌ಪಿ) ಕ್ವಿಂಟಲ್‌ಗೆ ರೂ. 40 ಹೆಚ್ಚುವ ಸಾಧ್ಯತೆ ಇದೆ.

ಕೇಂದ್ರ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ  (ಸಿಸಿಇಎ) ಇದಕ್ಕೆ ಸಂಬಂಧಿಸಿದಂತೆ ಗುರುವಾರ ಸಭೆ ಸೇರಲಿದ್ದು, `ಎಫ್‌ಆರ್‌ಪಿ' ನಿಗದಿ ಮಾಡಲಿದೆ.

ಕೃಷಿ ವೆಚ್ಚ ಮತ್ತು ದರ ಸಮಿತಿ (ಸಿಎಸಿಪಿ) ನೀಡಿದ ಶಿಫಾರಸು ಆಧರಿಸಿ, ಆಹಾರ ಸಚಿವಾಲಯ 2013-14ನೇ ಸಾಲಿನ  ಕಬ್ಬಿನ ಇಳುವರಿ ವರ್ಷದಿಂದ (ಅಕ್ಟೋಬರ್-ಸೆಪ್ಟೆಂಬರ್) `ಎಫ್‌ಆರ್‌ಪಿ'  ಶೇ 23.5ರಷ್ಟು (ರೂ.40) ಹೆಚ್ಚಿಸಬೇಕು ಎಂದು ಮನವಿ ಮಾಡಿತ್ತು.  2012-13ನೇ ಸಾಲಿನಲ್ಲಿ ಪ್ರತಿ ಕ್ವಿಂಟಲ್ ಕಬ್ಬಿಗೆ ರೂ.170 ದರ  ನಿಗದಿ ಮಾಡಲಾಗಿತ್ತು.

`ಸಿಎಸಿಪಿ' ಶಾಸನಬದ್ಧ ಸಂಸ್ಥೆಯಾಗಿದ್ದು, ಪ್ರಮುಖ ಕೃಷಿ ಉತ್ಪನ್ನಗಳ ದರ ನಿಗದಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆ ನೀಡುತ್ತದೆ. `ಸಿಎಸಿಪಿ' ನೀಡಿದ ವರದಿಯನ್ನು ಆಹಾರ ಸಚಿವಾಲಯ ಒಪ್ಪಿದೆ.

ಆರ್ಥಿಕ ವ್ಯವಹಾರಗಳ ಸಮಿತಿ ಇದನ್ನು ಅಂತಿಮವಾಗಿ ಅನುಮೋದಿಸಬೇಕಿದೆ. ಪ್ರಪಂಚದಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆಯುವ ಎರಡನೆಯ ದೇಶ ಭಾರತ. 2012-13ನೇ ಸಾಲಿನಲ್ಲಿ 24 ದಶಲಕ್ಷ ಟನ್ ಕಬ್ಬು ಇಳುವರಿ ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT