ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಳ ಕ್ರಮ

Last Updated 15 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಈಗಿನ ಡಿಜಿಟಲ್‌ ಕ್ರಾಂತಿ ಯುಗದಲ್ಲಿ ಯುವ ಜನರೇ ದೊಡ್ಡ ಪಾಲುದಾರರು. ಮಾಹಿತಿ ತಂತ್ರ ಜ್ಞಾ­ನದ ರಾಜಧಾನಿ ಬೆಂಗಳೂರನ್ನು ಆಡಳಿತ ಕೇಂದ್ರ­ವನ್ನಾಗಿಸಿಕೊಂಡಿರುವ ರಾಜ್ಯ ಸರ್ಕಾರ, ಡಿಜಿಟಲ್‌ ಅಪರಾಧ ಎಸಗುವವರನ್ನು ಗೂಂಡಾ ಕಾಯ್ದೆ ವ್ಯಾಪ್ತಿಯೊಳಗೆ ತರಲು ಮುಂದಾಗಿದೆ.   

ಇಂಥ ಕರಾಳ ಕ್ರಮ ಸರಿಯಲ್ಲ. ಗಣಿಗಾರಿಕೆಯಂಥ ಚಟುವಟಿಕೆ ಮೂಲಕ ಪರಿಸರ ಹಾಳು ಮಾಡು­ವವರನ್ನು ಕೂಡ ಇದೇ ಕಾಯ್ದೆಯಡಿ ತರಲಾಗಿದೆ. ಮುಂದೊಂದು ದಿನ ಡಿಜಿಟಲ್‌ ಅಪರಾಧವನ್ನು ಈ ಕಾಯ್ದೆ ವ್ಯಾಪ್ತಿ­ಯಿಂದ ಹೊರಗಿಡ­ಲೇ­ಬೇಕಾ­ಗುತ್ತದೆ– ಅಂಥ ಒತ್ತಡವನ್ನು ಜನರೇ ತರುತ್ತಾರೆ. ಆಗ ಜನರ ಆಕಾಂಕ್ಷೆಗೆ ಪೂರಕವಾಗಿ ಸ್ಪಂದಿಸುವ ನೆವದಲ್ಲಿ ಸರ್ಕಾರ, ಪರಿಸರ ಹಾಳು ಮಾಡು­ವವರನ್ನೂ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುವ ಉದ್ದೇಶ ಹೊಂದಿರಬಹುದೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT