ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳತನ ನೂರುತರಹ, ಶಿಕ್ಷೆ ಮಾತ್ರ

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

`ಅನಧಿಕೃತ ನೀರು ಬಳಕೆದಾರರಿಗೆ ಚಾಟಿ' ಇದು ದಿ. 1.4.13ರ ಪತ್ರಿಕೆಯಲ್ಲಿ ಪ್ರಕಟವಾದ ವರದಿ. ಆದರೆ  ನೀರು ಸರಬರಾಜು ಮಂಡಳಿಯ ಅಧಿಕಾರಿಗಳು ಪ್ರಕಟಿಸಿದ ಕಳ್ಳ ಬಳಕೆದಾರರ ಸಂಖ್ಯೆ ಸುಮಾರು ಐವತ್ತು ಸಾವಿರವಾದರೆ, ಬಳಸುವ ನೀರಿಗೆ ಕಡಿಮೆ ಲೆಕ್ಕ ತೋರಿಸಿ ಅದರಲ್ಲಿ ಲಂಚಪಡೆಯುವವರು ಇನ್ನೆಷ್ಟೋ! ಇತ್ತೀಚೆಗೆ ಈ ಅಧಿಕಾರಿಗಳಿಗೆ ಇದೊಂದು ವಸೂಲಿಯ ದಂಧೆಯಾಗಿದೆ.

ಇಂತಹ ಕಳ್ಳ ಸಂಪರ್ಕವಿರುವ ಮನೆಗಳಿಗೆ ತೆರಳಿ  ಹತ್ತರಿಂದ, ಹದಿನೈದು ಸಾವಿರ ದಂಡ ವಿಧಿಸುವುದರೊಂದಿಗೆ ನೀರಿನ ಸಂಪರ್ಕ ನಿಲ್ಲಿಸುವಂತೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಹೆದರಿಸಿ, ಇಷ್ಟು ದಿನದೊಳಗೆ ನೀವು ನೀರಿಗೆ ಮೀಟರ್ ಹಾಕಿಸಿ ಇಲ್ಲವಾದರೆ ಮುಂದಿನ ಪರಿಣಾಮಕ್ಕೆ ನೀವೇ ಹೊಣೆಯಾಗಬೇಕಾಗುತ್ತದೆ ಎಂದು ಹೇಳಿ ಐನೂರರಿಂದ ಸಾವಿರದವರೆಗೆ ದಕ್ಷಿಣೆ ಪಡೆಯುವುದು ಈಗ ಮಾಮೂಲಿಯಾಗಿದೆ.

ಇದಲ್ಲದೆ ಸರಿಯಾದ ದಾಖಲೆಗಳಿಲ್ಲದಿದ್ದರೂ ಹತ್ತರಿಂದ ಹದಿನೈದು ಸಾವಿರ ಲಂಚ ಪಡೆದು ಕಳ್ಳದಾಖಲೆಗಳನ್ನು ಸೃಷ್ಟಿಸಿ ಮೀಟರ್‌ಗಳನ್ನು ಅಳವಡಿಸುವ ಗುತ್ತಿಗೆದಾರರು ಹನುಮಂತನಗರದಲ್ಲಿದ್ದಾರೆ. ಈ ಗುತ್ತಿಗೆದಾರರು ಗವಿಪುರ ಬಡಾವಣೆ, ಕೆಂಪೇಗೌಡ ಬಡಾವಣೆಗಳ ಗಲ್ಲಿಗಳಲ್ಲಿ ನೇರವಾಗಿ ವ್ಯವಹಾರಕ್ಕಿಳಿದಿದ್ದಾರೆ.

ಮನೆಮುಂದೆ ಅಕ್ರಮ ಸಂಪರ್ಕದ ಗುರುತಾದ `ಎ' ಗುರುತನ್ನು ಮಾಡಿ ಗುತ್ತಿಗೆದಾರರನ್ನು ಕಳುಹಿಸುವ ವ್ಯವಸ್ಥೆ ಇದೆ. ಹೀಗಿರುವಾಗ ಎಲ್ಲೋ ಒಬ್ಬರಿಗೆ ದಂಡ ವಿಧಿಸಿದರೆ ಏನೂ ಪ್ರಯೋಜನವಿಲ್ಲ. ಇನ್ನು ಯಾವ ಯಾವ ರೀತಿ ಕಳ್ಳತನ ನಡೆಯುತ್ತಿದೆಯೋ? ಪ್ರಾಮಾಣಿಕವಾಗಿ ಶುಲ್ಕ ಕಟ್ಟುವವರಿಗೆ ನೀರಿನ ಖರ್ಚಿನ ಹೊರೆ ಬೀಳುತ್ತದೆ ಅಷ್ಟೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT