ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿ ವಾಣಿ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ದಕ್ಷಿಣ ಭಾರತದ ನಟಿ ಅರ್ಚನಾ ಕವಿ ಈಗಷ್ಟೇ ಮೊದಲ ತೆಲುಗು ಚಿತ್ರ `123~ ಮುಗಿಸಿದ್ದಾರೆ. ಈ ಚೆಂದುಳ್ಳಿಗೆ ಸಿನಿಮಾ ಪ್ರಾಜೆಕ್ಟ್ ಮುಗಿದ ನಂತರ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದೆಂದರೆ ಅಲರ್ಜಿಯಂತೆ. ಒಂದು ಚಿತ್ರದ ಚಿತ್ರೀಕರಣ ಮುಗಿಸಿದ ನಂತರ ಆ ಸಿನಿಮಾದ ಬಗ್ಗೆ ಹೆಚ್ಚು ಚಿಂತಿಸಬಾರದು ಎಂಬುದು ಈ ಅರಳು ಮಲ್ಲಿಗೆಯ ಹೊಸ ಸಿದ್ಧಾಂತ.

“ನಾನು ನಟಿಸಿದ ಚಿತ್ರ ಚಿತ್ರೀಕರಣ ಪೂರೈಸಿದ ನಂತರ ಅದರ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ. ಅದಕ್ಕೆ ಕಾರಣ ಕೂಡ ಇದೆ. ನಾನು ಒಂದು ಚಿತ್ರದಲ್ಲಿ ನಟಿಸುವ ಮುನ್ನ ಚಿತ್ರಕಥೆ ಮತ್ತು ಪಾತ್ರದ ಬಗ್ಗೆ ಕೂಲಂಕಷವಾಗಿ ತಿಳಿದುಕೊಂಡಿರುತ್ತೇನೆ.
 
ನನ್ನ ನಟನಾ ಸಾಮರ್ಥ್ಯವನ್ನು ಹೆಕ್ಕಿತೆಗೆವ ತಾಕತ್ತು ಆ ಪಾತ್ರಕ್ಕೆ ಇದ್ದರೆ ಮಾತ್ರ ನಾನು ನಟಿಸಲು ಒಪ್ಪಿಕೊಳ್ಳುವುದು. ಪಾತ್ರ ಬೇಡುವಷ್ಟು ನ್ಯಾಯವನ್ನು ನಾನು ಪ್ರಾಮಾಣಿಕವಾಗಿ ಪೂರೈಸುವುದರಿಂದ ಚಿತ್ರೀಕರಣ ಮುಗಿದ ಮೇಲೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.
ನಟನೆಗೆ ಭಾಷೆ ಎಂದೂ ತೊಡಕಾಗುವುದಿಲ್ಲ.

ಪ್ರತಿ ಭಾಷೆ ಕೂಡ ತನ್ನದೇ ಆದ ಸೊಗಡು ಹೊಂದಿರುತ್ತದೆ. ಅದನ್ನು ನಾವು ಅರ್ಥ ಮಾಡಿಕೊಂಡು ನಟಿಸಬೇಕಷ್ಟೆ. ಆಗಷ್ಟೆ ಸಿನಿಮಾ ಪರಿಣಾಮಕಾರಿಯಾಗಿ ಮೂಡಿಬರುವುದು. ನಾನು ಅಷ್ಟೇ, ಪರಭಾಷಾ ಸಿನಿಮಾಗಳಲ್ಲಿ ನಟಿಸುವಾಗ ಆ ಭಾಷೆಯ ಚಿತ್ರಗಳನ್ನು ನೋಡುತ್ತೇನೆ. ಅದರಿಂದ ಕೆಲವು ಅಂಶಗಳನ್ನು ತಿಳಿದು ನನ್ನ ನಟನೆಯಲ್ಲಿ ಅಳವಡಿಸಿಕೊಳ್ಳುತ್ತೇನೆ” ಎಂಬುದು ಕವಿ ವಾಣಿ.

ಅಂದಹಾಗೆ, `123~ (1-ಲೈಫ್, 2-ಲವ್ಸ್, 3-ಹಾರ್ಟ್ಸ್) ಸಮಕಾಲೀನ ಪ್ರೇಮಕಥೆ. ಈ ಚಿತ್ರದಲ್ಲಿ ಅರ್ಚನಾ ಅವರದ್ದು ಬಬ್ಲಿ ಹುಡುಗಿಯ ಪಾತ್ರವಂತೆ. ಈ ಪಾತ್ರ ಎಲ್ಲ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬುದು ಅವರು ನೀಡುವ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT