ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಬಳಕೆ ಹೆಚ್ಚಳ

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಾಗತಿಕ ಕಾಫಿ ಬಳಕೆ ಪ್ರಮಾಣವು 2011ರಲ್ಲಿ ಶೇ 2ರಷ್ಟು ಹೆಚ್ಚಿದ್ದು, 136 ದಶಲಕ್ಷ ಚೀಲಗಳಷ್ಟಾಗಿದೆ ಎಂದು ಅಂತರರಾಷ್ಟ್ರೀಯ ಕಾಫಿ ಒಕ್ಕೂಟ (ಐಸಿಒ) ಹೇಳಿದೆ.

2010ರಲ್ಲಿ ಒಟ್ಟು 135 ದಶಲಕ್ಷ ಚೀಲಗಳಷ್ಟು ಕಾಫಿ ಬಳಕೆಯಾಗಿತ್ತು.  (ಪ್ರತಿ ಚೀಲ 60 ಕೆ.ಜಿ ತೂಕ ಹೊಂದಿರುತ್ತದೆ) ದೇಶೀಯ ಬೇಡಿಕೆಯ ಜತೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲೂ ಕಾಫಿ ಬಳಕೆ ಹೆಚ್ಚಿದೆ. 2003ರಿಂದ 2008ರ ವರೆಗೆ ಒಟ್ಟು ಜಾಗತಿಕ ಕಾಫಿ ಬಳಕೆಯು ಶೇ 42ರಷ್ಟು ಏರಿಕೆ ಕಂಡಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ಭಾರತದಲ್ಲಿ ಕಾಫಿ ಬಳಕೆಯು ಶೇ 6ರಷ್ಟು ಹೆಚ್ಚಿದ್ದು, 1.8 ಲಕ್ಷ ಟನ್‌ಗಳಷ್ಟಾಗಿದೆ ಎಂದು ಕಾಫಿ ಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT