ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಾಮಗಾರಿ ಗುಣಮಟ್ಟ ಖಾತರಿ ಗ್ರಾ.ಪಂ ಹೊಣೆ'

Last Updated 20 ಡಿಸೆಂಬರ್ 2012, 10:30 IST
ಅಕ್ಷರ ಗಾತ್ರ

ಮರವಂತೆ (ಬೈಂದೂರು): `ಗ್ರಾಮೀಣ ಅಭಿವೃದ್ಧಿಗೆ ಅನುದಾನದ ಕೊರತೆ ಇಲ್ಲ. ಯೋಜನೆಗಳ ಗುಣ ಮಟ್ಟದ ಮೇಲ್ತನಿಖೆ ಸರಿಯಾಗಿ ಆಗದಿದ್ದರೆ ಅವು ಉದ್ದೇಶಿತ ಫಲ ನೀಡುವುದಿಲ್ಲ. ಆದ್ದರಿಂದ ಈ ಹೊಣೆಯನ್ನು ಗ್ರಾಮ ಪಂಚಾಯಿತಿ ಸಮರ್ಪಕವಾಗಿ ನಿರ್ವಹಿಸಬೇಕು' ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಬಾಬು ಶೆಟ್ಟಿ  ಹೇಳಿದರು.

ಮರವಂತೆ ಗ್ರಾಮ ಪಂಚಾಯಿತಿಗೆ ಮಂಜೂರಾದ ರೂ. 1.25 ಕೋಟಿ ವೆಚ್ಚದ ಸುವರ್ಣ ಗ್ರಾಮೋದಯ ಯೋಜನೆಗೆ ಬುಧವಾರ ನಾಮಫಲಕ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಜನಾರ್ದನ ಅಧ್ಯಕ್ಷತೆ ವಹಿಸಿದ್ದರು.  ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಎಸ್. ಶೆಟ್ಟಿ, ಸದಸ್ಯೆ ಲಕ್ಷ್ಮೀ ಮೆಂಡನ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಸಲಿಂಗನ ಗೌಡ, ಉಪಾಧ್ಯಕ್ಷೆ ಶ್ರೀಮತಿ ಆಚಾರ್ಯ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಗ್ರೇಷನ್ ಕ್ರಾಸ್ತಾ ವಂದಿಸಿದರು. ಪಿಡಿಒ ಹರೀಶ ಕುಮಾರ ಶೆಟ್ಟಿ ನಿರೂಪಿಸಿದರು.

ಗ್ರಾಮದ ಗಾಂಧಿನಗರ ಕುಡಿಯುವ ನೀರು ಪೂರೈಕೆ ಯೋಜನೆ ಒವರ್‌ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೂ ಬಾಬು ಅವರು ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT