ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ: ಸಂಭ್ರಮದ ವಿಶ್ವರೂಪ ದರ್ಶನ

Last Updated 31 ಅಕ್ಟೋಬರ್ 2011, 8:15 IST
ಅಕ್ಷರ ಗಾತ್ರ

ಕಾರ್ಕಳ: ಇಲ್ಲಿನ ಪಡುತಿರುಪತಿ ಖ್ಯಾತಿಯ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ನಸುಕಿನ ವೇಳೆ `ವಿಶ್ವರೂಪ ದರ್ಶನ~ ಸಂಭ್ರಮದಿಂದ ನಡೆಯಿತು. ಸಹಸ್ರಾರು ಮಂದಿ  ಹಣತೆ ಬೆಳಕಿನಲ್ಲಿ ಕಂಗೊಳಿಸಿದ ದೇವಳದ ಸೊಬಗನ್ನು ಕಣ್ತುಂಬಿಕೊಂಡರು.

ನಸುಕಿನಲ್ಲಿ 3 ಗಂಟೆಗೆ ಸ್ಥಳೀಯ ಮಣ್ಣಗೋಪುರದಿಂದ ಹೊರಟ ನಗರ ಭಜನೆ ದೇವಾಲಯ ತಲುಪುತ್ತಿದ್ದಂತೆ ದೇವಾಲಯದಲ್ಲಿ ಬೆಳಗ್ಗಿನ ಸುಪ್ರಭಾತ ಮೊಳಗಿತು. ಪಶ್ಚಿಮಜಾಗರದ ಮಂಗಳಾರತಿ ಬೆಳಗಿತು. ದೇವಾಲಯ ಭಜನಾ ಮಂಡಳಿಯವರ ಭಕ್ತಿಸಂಕೀರ್ತನೆಯ ಹಿನ್ನೆಲೆಯಲ್ಲಿ, ಭಕ್ತರು ದೇವಳದ ತುಂಬ ಹಣತೆ ಹಚ್ಚಿದರು. ಲಕ್ಷಾಂತರ ಹಣತೆಗಳ ಮಂದ ಬೆಳಕಿನಿಂದ ದೇವಾಲಯ ಅಲಂಕೃತಗೊಂಡಿತು.

ದೇವಾಲಯದ ಒಳಗಡೆ ಸುಶ್ರಾವ್ಯ ಭಜನೆ, ದೇವಾಲಯದ ಹೊರಪ್ರಾಂಗಣದಲ್ಲಿ ವಿವಿಧ ಬಗೆಯ ರಂಗವಲ್ಲಿಗಳು, ಹೂವಿನ, ಎಲೆಯ ಪಕಳೆಗಳ ದೇವರ ಪ್ರತಿಮೆಗಳ ಪ್ರತೀಕಗಳು, ಅವುಗಳಲ್ಲೂ ವಿಶೇಷವಾಗಿ ಮಕ್ಕಳು ರಚಿಸಿದ ಮಂತ್ರಾಲಯ ರಾಘವೇಂದ್ರ ಸ್ವಾಮಿ ವೃಂದಾವನ ಹಾಗೂ ರಾಘವೇಂದ್ರ ಸ್ವಾಮಿಯಾಗಿ ಕಂಗೊಳಿಸಿದ ಬಗೆ ನೆರೆದವರನ್ನು ಆಕರ್ಷಿಸಿತು. 

ವೈವಿಧ್ಯಮಯ ಬಣ್ಣದ ಹುಡಿಗಳಿಂದ ಶೇಷಾಲಂಕೃತ ಮಹಾವಿಷ್ಣು, ಆಲದೆಲೆಯಲ್ಲಿ ಮಲಗಿದ ಶಿಶು ಬಾಲಕೃಷ್ಣ, ಕೊಳಲು ಕೃಷ್ಣ, ಗೋಪಾಲಕೃಷ್ಣ, ನಟರಾಜ ಶಿವ, ಪುಷ್ಪಾಲಂಕೃತ ರಂಗೋಲಿ, ಶಿವಲಿಂಗ, ಹಣತೆಗಳಿಂದಲೇ ರಚಿತ ಗೂಡುದೀಪ, ರಥ ಹಾಗೂ ಓಂಕಾರಗಳ ರಚನೆಗಳು, ದೇವಸ್ಥಾನದ ಸುತ್ತಿನಲ್ಲಿ ಹಾಗೂ ಹೊರಭಾಗದಲ್ಲಿ ವೆಂಕಟರಮಣ, ಗೋಕರ್ಣ, ವಿಠೋಬನ ಶಿಲಾ ಪ್ರತೀಕಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT