ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರಿಗೆ ಗುರುತಿನ ಚೀಟಿ

Last Updated 7 ಅಕ್ಟೋಬರ್ 2011, 6:50 IST
ಅಕ್ಷರ ಗಾತ್ರ

ಶಿರಾ: ಕಟ್ಟಡ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆಯಲು ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿಸುವುದು ಅತ್ಯಗತ್ಯ ಎಂದು ಕಾರ್ಮಿಕ ವೃತ್ತ ನಿರೀಕ್ಷಕ ಪ್ರಹ್ಲಾದ್ ಹೇಳಿದರು.

ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದದಲ್ಲಿ ಈಚೆಗೆ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು. ಕಾರ್ಮಿಕರ ಗುರುತಿನ ಚೀಟಿಯು ಅಪಘಾತ, ಹೆರಿಗೆ ಭತ್ಯೆ, ಮಕ್ಕಳ ವಿದ್ಯಾಭ್ಯಾಸ, ಶಸ್ತ್ರ ಚಿಕಿತ್ಸೆಗೆ ಪರಿಹಾರ, ಪಿಂಚಣಿ ಸೇರಿದಂತೆ 12 ಸೌಲಭ್ಯ ಪಡೆಯಲು ಸಹಕಾರಿಯಾಗಿದೆ ಎಂದು ಮಾಹಿತಿ ನೀಡಿದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಸೌಲಭ್ಯ ಪಡೆಯಲು ಕಾರ್ಮಿಕರು ಸಂಘಟನೆ ಬಲಪಡಿಸಿಕೊಳ್ಳಬೇಕು. ಇತರೆ ಕಟ್ಟಡ ಕಾರ್ಮಿಕ ಸಹೋದ್ಯೊಗಿಗಳನ್ನು ಕಾರ್ಮಿಕ ಮಂಡಳಿ ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕು. ಪಿಂಚಣಿಯನ್ನು ರೂ. 2 ಸಾವಿರ, ಗೃಹ ಸಾಲ 2 ಲಕ್ಷ, ಅಪಘಾತ ಪರಿಹಾರವನ್ನು ರೂ. 3 ಲಕ್ಷಕ್ಕೆ ಏರಿಸುವಂತೆ ಆಗ್ರಹಿಸಿದರು.

ತಾಲ್ಲೂಕು ಅಂಗನವಾಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಾವತಿ, ಮುಖಂಡರಾದ ರಂಗಪ್ಪ, ಲಕ್ಷ್ಮೀಕಾಂತರಾಜು, ರತ್ನಮ್ಮ, ಟಿ.ಎಸ್.ಹನುಮಂತರಾಯಪ್ಪ, ಡಿ.ರಂಗನಾಥಪ್ಪ, ಪುಟ್ಟಮ್ಮ, ರಂಗಶಾಮಣ್ಣ, ಶ್ರೀನಿವಾಸ್, ಚಿಕ್ಕಣ್ಣ ಉಪಸ್ಥಿತರಿದ್ದರು. ಹಳ್ಳಪ್ಪ ಸ್ವಾಗತಿಸಿದರು. ಸಂಜೀವರೆಡ್ಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT