ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಗಾರ ತರಬೇತಿ

Last Updated 21 ಜನವರಿ 2011, 13:30 IST
ಅಕ್ಷರ ಗಾತ್ರ

ಜಯನಗರ ಪುಸ್ತಕ ಜಾಥಾ
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಟ್ರಸ್ಟ್ ಸರ್ಕಾರಿ ಶಾಲೆಗಳಿಗೆ ಉಚಿತ ಗ್ರಂಥಾಲಯ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಹತ್ತು ಸಾವಿರ ಪುಸ್ತಕಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಭಾನುವಾರ ಜಯನಗರದಲ್ಲಿ ಜಾಥಾ ಸಂಘಟಿಸಲಾಗಿದೆ. ಟ್ರಸ್ಟ್‌ನ 200ಕ್ಕೂ ಹೆಚ್ಚು ಸದಸ್ಯರು ಈ ಜಾಥಾದಲ್ಲಿ ಪಾಲ್ಗೊಳ್ಳಲಿದ್ದು ಪುಸ್ತಕ ಸಂಗ್ರಹಿಸುವರು.
ಸ್ಥಳ: ಜಯನಗರ. ಬೆಳಿಗ್ಗೆ 9 ರಿಂದ.

ಆಟದಿಂದ ಚಿಕಿತ್ಸೆ
ಸೆಂಟರ್ ಫಾರ್ ಚೈಲ್ಡ್ ಡೆವಲಪ್‌ಮೆಂಟ್ ಆ್ಯಂಡ್ ಡಿಸೆಬಿಲಿಟಿಸ್ ಮತ್ತು ಹೂಪ್ಲಾ ಕೇರ್, ಆಟಿಸಂ ಮತ್ತು ಅಸ್ಪರಜರ್ಸ್‌ ಮಕ್ಕಳಿಗಾಗಿ ಚಿಕಿತ್ಸಾ ಕೇಂದ್ರವೊಂದನ್ನು ತೆರೆದಿದೆ.
ಇಲ್ಲಿ ವೃತ್ತಿಪರ ತರಬೇತಿ ಪಡೆದ ಶಿಕ್ಷಕರು ವೈಜ್ಞಾನಿಕ ವಿಧಾನದಲ್ಲಿ ವಿಶೇಷ ಮಕ್ಕಳಿಗೆ ಜೀವನಕೌಶಲ್ಯ ಮತ್ತು ಸಂವಹನಾ ಕೌಶಲ್ಯಗಳನ್ನು ಕಲಿಸಿಕೊಡುವರು.ಸೋಮವಾರ ಖ್ಯಾತ ಕ್ರೀಡಾಪಟು ಅಶ್ವಿನಿ ನಾಚಪ್ಪ ಚಿಕಿತ್ಸಾ ಕೇಂದ್ರ ಉದ್ಘಾಟಿಸುವರು.
ಸ್ಥಳ: ನಂ 101, ಎಂ.ಬಿ. ಸೆಂಟರ್, ಇನ್‌ಫೆಂಟ್ರಿ ರಸ್ತೆ

ವಧು- ವರರ ಸಮಾವೇಶ
ಎಂ.ಜಿ. ಎಸ್.ಕೆ. ವಧುವರಾನ್ವೇಷಣ ಕೇಂದ್ರ ಭಾನುವಾರ ತ್ರಿಮತಸ್ಥ ಬ್ರಾಹ್ಮಣ ವಧು ವರರ ಹಾಗೂ ಪಾಲಕರ ಸಮಾವೇಶ ಏರ್ಪಡಿಸಿದೆ. ಆಸಕ್ತ ಪಾಲಕರು ತಮ್ಮ ಮಕ್ಕಳೊಂದಿಗೆ ಸಮಾವೇಶದಲ್ಲಿ ಭಾಗವಹಿಸಬಹುದು.

ಸ್ಥಳ: ಸಮಾಜ ಸೇವಾ ಸಂಘ, 10ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಜಯನಗರ 2ನೇ ಹಂತ. ಸೌತ್ ಎಂಡ್ ಸರ್ಕಲ್. ಬೆಳಿಗ್ಗೆ 11 ಗಂಟೆ.

ಉಚಿತ ಬೋಧನಾ ಶಿಬಿರ
ಬಸವನಗುಡಿ ಸಂಕಲ್ಪ ಸೇವಾ ಸಂಸ್ಥೆಯ ಜ್ಞಾನವಾಹಿನಿ ಎಜುಕೇಷನಲ್ ಟ್ರಸ್ಟ್, ಬಡ ಹಾಗೂ ಮಧ್ಯಮ ವರ್ಗದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಜ. 23 ರಿಂದ ಫೆ.28ರವರೆಗೆ ಸಂಜೆ 6 ರಿಂದ 7.30ರ ವರೆಗೆ ಉಚಿತ ಬೋಧನಾ ಶಿಬಿರ ಆಯೋಜಿಸಿದೆ.
ಗಿರಿನಗರದ ಟೈನಿ ಟೈಗರ್ಸ್ ಶಾಲೆಯಲ್ಲಿ ನಡೆಯುವ ಶಿಬಿರದಲ್ಲಿ ಇಂಗ್ಲಿಷ್, ಗಣಿತ, ವಿಜ್ಞಾನ ಹಾಗೂ ಸಂಸ್ಕೃತ ವಿಷಯಗಳಲ್ಲಿ ಬೋಧನೆ ಮಾಡಲಾಗುತ್ತದೆ. ನೋಂದಾಯಿಸಿಕೊಳ್ಳಲು: 99026 23236. 

ಸೃಷ್ಟಿ ಕಲಾ ಪ್ರದರ್ಶನ
ಯಲಹಂಕದ ಸೃಷ್ಟಿ ಕಲಾ, ವಿನ್ಯಾಸ ಮತ್ತು ತಂತ್ರಜ್ಞಾನ ಶಾಲೆ  2010ನೇ ತಂಡದಲ್ಲಿ  ಉತ್ತೀರ್ಣರಾದ ಶಾಲೆಯ 76 ಯುವ ವಿನ್ಯಾಸಕಾರರು, ಕಲಾವಿದರ ಕಲಾಕೃತಿಗಳ ‘ಗ್ರಾಂಡ್ ಷೋ ಎಕ್ಸ್’ ಪ್ರದರ್ಶನ ಏರ್ಪಡಿಸಿದೆ.

ಪೀಠೋಪಕರಣ ವಿನ್ಯಾಸ, ವಸ್ತ್ರ ವಿನ್ಯಾಸ, ಅನಿಮೇಷನ್ ಕೃತಿಗಳು ಮತ್ತು ಕಲಾಕೃತಿಗಳು ಸೋಮವಾರ ತನಕ ಬೆಳಿಗ್ಗೆ 11ರಿಂದ ಸಂಜೆ 7ರ ವರೆಗೆ ಪ್ರದರ್ಶನಗೊಳ್ಳಲಿವೆ. ಸೋಮವಾರ ಸಂಜೆ ಆ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ. 

ಸ್ಥಳ: ಸ್ವಾತಂತ್ರ್ಯ ಉದ್ಯಾನವನ, ಶೇಷಾದ್ರಿ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT