ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಅಕ್ಕ-ತಂಗಿಯರ ಗುಡ್ಡ

Last Updated 10 ಮಾರ್ಚ್ 2011, 11:25 IST
ಅಕ್ಷರ ಗಾತ್ರ

ಹೊಸಪೇಟೆ: ಇತಿಹಾಸ ಪ್ರಸಿದ್ಧ ಹಂಪಿಯ ಅಕ್ಕ-ತಂಗಿಯರ ಗುಡ್ಡದ ಒಂದು ಭಾಗ ಕುಸಿದು ಬಿದ್ದಿರುವ ಪರಿಣಾಮ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಕಮಲಾಪುರದಿಂದ ಹಂಪಿಗೆ ಸಾಗುವ ಮಾರ್ಗ ಕಡ್ಡಿರಾಮಪುರ ತಿರುವಿನ ಬಳಿ ಇರುವ ಪ್ರಸಿದ್ಧ ಅಕ್ಕ-ತಂಗಿಯರ ಗುಡ್ಡದ ಒಂದು ಭಾಗ ಮಧ್ಯಾಹ್ನ 1-30ರ ಸುಮಾರಿಗೆ ಕುಸಿದು ಬಿದ್ದಿದೆ.  ಕೆಲ ವರ್ಷಗಳಿಂದ ಅಕ್ಕನ ಗುಡಿನಲ್ಲಿ ಬಿರುಕು ಕಾಣಿಸಿಕೊಂಡಿದ್ದು ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದ ಪರಿಣಾಮ ಬುಧವಾರ ಮಧ್ಯಾಹ್ನ ನೆಲಕುರುಳಿದೆ. ಯಾವುದೇ ಹಾನಿ ಸಂಭವಿಸಿಲ್ಲ.

ಹಿನ್ನೆಲೆ: ವಿಜಯನಗರ ಪತನದ ನಂತರ ಅಕ್ಕ ತಂಗಿಯರಿಬ್ಬರು ವಿಜಯನಗರ ಸಾಮ್ರಾಜ್ಯ ವೀಕ್ಷಣೆಗೆ ಬಂದು ಆ ಸ್ಥಳದಲ್ಲಿ ವಿಶ್ರಾಂತಿ ಪಡೆಯುವಾಗ ಅಸುನೀಗಿದ್ದು ಕಲ್ಲಾಗಿ ಕಂಗೊಳಿಸಿದರು ಎಂದು ಜನಪದ ಕತೆಗಳಲ್ಲಿ ಉಲ್ಲೇಖವಿದೆ. ಮಾರ್ಗ ಬದಲಾವಣೆ: ಕಮಲಾಪುರದಿಂದ ಹಂಪಿಗೆ ಮಾರ್ಗದ ದಂಡೆಯಲ್ಲಿರುವ ಅಕ್ಕ-ತಂಗಿಯರ ಗುಡ್ಡದ ಒಂದು ಭಾಗ ಕುಸಿದು ಬಿದ್ದಿರುವ ಪರಿಣಾಮ ರಸ್ತೆ ಸಂಚಾರವೂ ಅಡ್ಡಿಯಾಗಿದ್ದು ಪುನಃ ಕಡ್ಡಿರಾಮಪುರ ಮಾರ್ಗವಾಗಿ ಹಂಪಿಗೆ ಬರುವ ಪ್ರವಾಸಿಗರ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದ್ದು ಗುಡ್ಡದಲ್ಲಿ ಉಳಿದಿರುವ ಮತ್ತೊಂದು ಭಾಗವೂ ಬೀಳುವ ಹಂತದಲ್ಲಿದ್ದು ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗ ಬದಲಾವಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT