ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌. ಮಾರುಕಟ್ಟೆ ಸ್ವಚ್ಛತಾ ಆಂದೋಲನ ಆರಂಭ

Last Updated 16 ಸೆಪ್ಟೆಂಬರ್ 2013, 19:53 IST
ಅಕ್ಷರ ಗಾತ್ರ

ಬೆಂಗಳೂರು: ನೂತನ ಮೇಯರ್‌ ಬಿ.ಎಸ್‌. ಸತ್ಯ­ನಾರಾಯಣ ಅವರ ಬಲು ಪ್ರಿಯ­ವಾದ ಕೆ.ಆರ್‌. ಮಾರುಕಟ್ಟೆ ಸ್ವಚ್ಛತಾ ಆಂದೋಲನ ನಿಗದಿಯಂತೆ ಸೋಮವಾರ ಆರಂಭ­ವಾಯಿತು. ಆಚಾರ್ಯ ಪಾಠ­ಶಾಲೆಯ 500ಕ್ಕೂ ಅಧಿಕ ವಿದ್ಯಾರ್ಥಿ­ಗಳು ಶ್ರಮದಾನ ಮಾಡುವ ಮೂಲಕ ಮಾರುಕಟ್ಟೆ ಪ್ರದೇಶವನ್ನು ಶುಚಿಗೊಳಿಸಿದರು.

ಬೆಳಿಗ್ಗೆ ಶುರುವಾದ ಸ್ವಚ್ಛತಾ ಕಾರ್ಯ ಮಧ್ಯಾಹ್ನದವರೆಗೆ ಮುಂದು­­­ವರಿಯಿತು. ವಿದ್ಯಾರ್ಥಿಗಳ ಜತೆಗೆ ಪೌರ ಕಾರ್ಮಿಕರು, ಗ್ಯಾಂಗ್‌­ಮನ್‌ಗಳು ಸಹ ಕೈಜೋಡಿಸಿದರು. 20 ಲಾರಿಗಳು ಮತ್ತು 60 ಆಟೊ ಟಿಪ್ಪರ್‌ಗಳನ್ನು ಈ ವಿಶೇಷ ಕಾರ್ಯಾ­ಚರಣೆಗೆ ಬಳಸಿ­ಕೊಳ್ಳಲಾಯಿತು.

ಮೇಯರ್‌ ಸತ್ಯನಾರಾಯಣ, ಸಂಸದ ಎಚ್‌.ಎನ್‌. ಅನಂತ­ಕುಮಾರ್‌, ಉಪ ಮೇಯರ್‌ ಇಂದಿರಾ, ಬಿಬಿಎಂಪಿ ಕೆಲವು ಸದ­ಸ್ಯರು ಸಹ ಪೊರಕೆ ಹಿಡಿದು ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡರು. ಕಪ್ಪು ಟಿ–ಶರ್ಟ್‌ ಧರಿಸಿ ಕಸಗುಡಿಸಿದ ಅವರು, ಫೋಟೋಗ್ರಾಫರ್‌ಗಳು ಕ್ಯಾಮೆರಾ ಕ್ಲಿಕ್ಕಿಸುವುದು ಮುಗಿಯುತ್ತಿದ್ದಂತೆ ಪೊರಕೆಗಳನ್ನು ಕೆಳಗಿಟ್ಟರು.

ವಿದ್ಯಾರ್ಥಿಗಳಿಗೆ ಕೈಚೀಲ, ಪೊರಕೆ, ಸಲಿಕೆ, ಗುದ್ದಲಿಗಳನ್ನು ಒದಗಿಸ­ಲಾ­ಗಿತ್ತು. ಅರ್ಧದಷ್ಟು ವಿದ್ಯಾರ್ಥಿಗಳು ಕಸಗುಡಿಸಿದರೆ ಉಳಿದವರು ತ್ಯಾಜ್ಯ ಸಂಗ್ರ­ಹಿಸಿ, ಆಟೊ ಟಿಪ್ಪರ್‌ಗಳಿಗೆ ಸಾಗಿ­­ಸಿದರು. ಮಾರುಕಟ್ಟೆ ಒಳಾಂಗಣ, ಹೊರಾಂಗ­ಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಆರ್‌. ರಾಮಲಿಂಗಾರೆಡ್ಡಿ ಸ್ವಚ್ಛತಾ ಕಾರ್ಯಾ­ಚರಣೆಗೆ ಚಾಲನೆ ನೀಡಿ­ದರು. ಸ್ವಚ್ಛತಾ ಆಂದೋಲನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ‘ಮಾರುಕಟ್ಟೆ ಸದಾ ಶುಚಿಯಾ­ಗಿರುವಂತೆ ನೋಡಿ­ಕೊಳ್ಳಬೇಕು’ ಎಂದು  ವ್ಯಾಪಾರಿಗಳಿಗೆ ತಿಳಿಸಿದರು.

‘ಮೇಯರ್‌ ಆದ ನಂತರ ಘೋಷಣೆ ಮಾಡಿದಂತೆ ಸ್ವಚ್ಛತಾ ಆಂದೋಲನಾ ಪ್ರಾರಂಭಿಸಿದ್ದು, ನಾನು ಓದಿದ ಸಂಸ್ಥೆಯ ವಿದ್ಯಾರ್ಥಿ­ಗಳ ನೆರವಿ­ನಿಂ­ದಲೇ ಆರಂಭ ಆಗಿರುವುದು ಸಂತಸ ತಂದಿದೆ’ ಎಂದು ಸತ್ಯನಾರಾಯಣ ಹೇಳಿದರು. ಪಾಠ ಶಾಲಾ ಸಂಸ್ಥೆಯ ಅಧ್ಯಕ್ಷ ಟಿ.ವಿ. ಮಾರುತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT