ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಎಂ. ರಸ್ತೆ ವಿಸ್ತರಣೆ: ವರ್ತಕರ ವಿರೋಧ

Last Updated 15 ಆಗಸ್ಟ್ 2012, 10:45 IST
ಅಕ್ಷರ ಗಾತ್ರ

ಮೂಡಿಗೆರೆ: ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಮಂಗಳವಾರ ಕರೆದಿದ್ದ ಕೆ.ಎಂ ರಸ್ತೆ ಪಕ್ಕದ ನಿವಾಸಿಗಳ ಸಭೆಯಲ್ಲಿ ರಸ್ತೆಗೆ ಬಿಟ್ಟು ಕೊಡುವ ಭೂಮಿಗೆ ಸೂಕ್ತ ಮಾರುಕಟ್ಟೆ ಬೆಲೆಯ ಪರಿಹಾರ ನೀಡಬೇಕು ಎಂಬ ರಸ್ತೆ ಪಕ್ಕದ ವಾಸಿಗಳ ಬಿಗಿ ಪಟ್ಟಿನೊಂದಿಗೆ ಕೆ.ಎಂ ರಸ್ತೆ ವಿಸ್ತರಣೆ ಕುರಿತ ಸಭೆ ಅನಿರ್ದಿಷ್ಟ ದಿನಕ್ಕೆ ಮುಂದೂ ಡಲಾಯಿತು.

ಸಭೆ ಪ್ರಾರಂಭದಲ್ಲಿ ಮಾತನಾಡಿದ ಕೆ.ಎಂ ರಸ್ತೆ ಪಕ್ಕದ ನಿವಾಸಿಗಳ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, ರಸ್ತೆ ತೆರವಿನಿಂದ ಹಲವಾರು ಕುಟುಂಬಗಳು ಬೀದಿ ಪಾಲಾಗುತ್ತವೆ. ಅಂತಹ ಕುಟುಂ ಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಮತ್ತು ನಿವಾಸಿಗಳ  ಎಷ್ಟು ಭೂಮಿ ರಸ್ತೆಗೆ ಬೇಕಾಗುತ್ತದೋ ಅಷ್ಟೂ ಭೂಮಿಗೆ ಮಾರುಕಟ್ಟೆ ಬೆಲೆಯ ಪರಿಹಾರವನ್ನು ನೀಡಿದರೆ ಮಾತ್ರ ಈಗಿರುವ ರಸ್ತೆಯ ಮಧ್ಯ ಭಾಗದಿಂದ 30 ಅಡಿ ಭೂಮಿ ನೀಡಲು ಸಿದ್ಧ ರಿರುವುದಾಗಿ ತಿಳಿಸಿದರು.

ಸಭೆಯ ಬಗ್ಗೆ ನಿವಾಸಿಗಳ್ಯಾರಿಗೂ ಮಾಹಿತಿ ಇರಲಿಲ್ಲ ಎಂಬ ಆಕ್ಷೇಪ ಬಂದ ಕಾರಣ ಸಭೆಯನ್ನು ಬುಧವಾರಕ್ಕೆ ಮುಂದೂಡುವ ಬಗ್ಗೆ ಚಿಂತಿಸಲಾಯಿತಾದರೂ ಆಗಮಿಸಿದ್ದ ನಿವಾಸಿಗಳು ಒಪ್ಪಿದ ಕಾರಣ ಸಭೆಯನ್ನು ಮುಂದುವರೆಸಲಾಯಿತು.

ನಿವಾಸಿಗಳ ಪರವಾಗಿ ಮಾತನಾಡಿದ ರೆಬೆಲ್ಲೊ, ರಾಷ್ಟ್ರೀಯ ಹೆದ್ದಾರಿಗೆ ನೀಡುವ ಪರಿಹಾರದ ರೂಪದಲ್ಲಿಯೇ ರಾಜ್ಯ ಹೆದ್ದಾರಿಗೂ ಪರಿಹಾರ ನೀಡ ಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಶಾಸಕ ಕುಮಾರಸ್ವಾಮಿ ಮಾತನಾಡಿ,  ಮುಂದಿನ ಸಭೆಯಲ್ಲಿ ಎಲ್ಲಾ ಪಕ್ಷದ ಸ್ಥಳೀಯ ಪ್ರಮುಖ ನಾಯಕರನ್ನು ಆಹ್ವಾನಿಸಿ ಅವರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನಕ್ಕೆ ಬರುವ ನಿರ್ಣಯವನ್ನು ಪ್ರಕಟಪಡಿಸಿದರು.

 ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಕೆ.ಎಂ ರಸ್ತೆಯ ವಿಸ್ತರಣೆಗೆ ಆರು ಕೋಟಿ  ಮೀಸಲಿರಿಸಿದ್ದು, ಅದರಲ್ಲಿ ಒಂದು ಕಿ.ಮೀ ಯಷ್ಟು ರಸ್ತೆ ವಿಸ್ತರಣೆ ಮಾಡಬಹುದು. ಆದ್ದರಿಂದ ಪಟ್ಟಣ ದಲ್ಲಿ ಅತ್ಯಂತ ವಾಹನದಟ್ಟಣೆ ಇರುವ ಪ್ರವಾಸಿ ಮಂದಿರದಿಂದ ಗಂಗನ ಮಕ್ಕಿಯ ತನಕ  ಎಲ್ಲಾ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು  ರಸ್ತೆ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಲತಾಲಕ್ಷ್ಮಣ್, ತಾಲ್ಲೂಕು ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ರಂಜನ್ ಅಜಿತ್‌ಕುಮಾರ್, ತಹ ಶೀಲ್ದಾರ್ ಮಂಜುನಾಥ್, ಮುಖ್ಯಾ ಧಿಕಾರಿ ಗಣೇಶ್, ಪೊಲೀಸ್ ಠಾಣಾಧಿ ಕಾರಿ ಅನಂತ ಪದ್ಮನಾಭ, ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಕುಮಾ ರಪ್ಪ, ಶೇಷಪ್ಪಶೆಟ್ಟಿ,  ಮಂಜುನಾಥ್, ಅನೂಪ್, ವಿವೇಕ್ ಪುಣ್ಯಮೂರ್ತಿ, ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT