ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಕೆಆರ್ ಕೋಚ್ ಹುದ್ದೆ ತೊರೆದ ಅಕ್ರಮ್

ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ನಿರ್ಧಾರ
Last Updated 25 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಕೋಲ್ಕತ್ತ ನೈಟ್ ರೈಡರ್ಸ್‌ನ ಬೌಲಿಂಗ್ ತರಬೇತುದಾರರಾಗಿದ್ದ ಪಾಕಿಸ್ತಾನದ ವಾಸೀಂ ಅಕ್ರಮ್ ತಮ್ಮ ಹುದ್ದೆ  ತೊರೆದಿದ್ದಾರೆ.

ಮೂರು ವರ್ಷಗಳಿಂದ ಅಕ್ರಮ್ ಕೆಕೆಆರ್ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಅದರ ಜೊತೆಗೆ ಮುಖ್ಯ ಮಾರ್ಗದರ್ಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.

`ಅಕ್ರಮ್ ಕೋಚ್ ಹುದ್ದೆ ತೊರೆದಿರುವುದು ನಿಜ. ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಬೇಕೆನ್ನುವ ಕಾರಣದಿಂದ ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ' ಎಂದು ಕೆಕೆಆರ್ ಆಡಳಿತ ಮಂಡಳಿ ಹೇಳಿದೆ. ಅಕ್ರಮ್ ಅವರಿಗೆ ತೈಮೂರ್ ಮತ್ತು ಅಕ್ಬರ್ ಎಂಬ ಇಬ್ಬರು ಚಿಕ್ಕ ಮಕ್ಕಳಿವೆ. ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಲು ಪಾಕ್‌ನ ಮಾಜಿ ವೇಗಿ ಮಾಧ್ಯಮಗಳ ಸಂಪರ್ಕಕ್ಕೆ ಸಿಗಲಿಲ್ಲ.

`ಅಕ್ರಮ್ ಖ್ಯಾತ ಕ್ರಿಕೆಟಿಗ. ಅಷ್ಟೇ ಅಲ್ಲ, ಅವರು ಆಟಗಾರರಲ್ಲಿ ಸ್ಫೂರ್ತಿ ತುಂಬಬಲ್ಲ ಸಾಮರ್ಥ್ಯ ಉಳ್ಳವರು. ಪಾಕಿಸ್ತಾನದ ಈ ಮಾಜಿ ಆಟಗಾರನ ಜೊತೆ ಭವಿಷ್ಯದ ದಿನಗಳಲ್ಲಿ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಲಭಿಸಲಿ' ಎಂದು ಕೆಕೆಆರ್ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ವೆಂಕಿ ಮೈಸೂರು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗೌತಮ್ ಗಂಭೀರ್ ನಾಯಕತ್ವದ ಕೆಕೆಆರ್ ತಂಡ ಅಕ್ರಮ್ ಅವರ ಉತ್ತಮ ತರಬೇತಿಯ ನೆರವಿನಿಂದ ಕಳೆದ ಋತುವಿನಲ್ಲಿ ಚಾಂಪಿಯನ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT