ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜೆಪಿ ಬೆಂಬಲಿತ ಹಾವೇರಣ್ಣನವರ ಅಧ್ಯಕ್ಷ

Last Updated 21 ಸೆಪ್ಟೆಂಬರ್ 2013, 7:47 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಪಂಚಾಯಿತಿ ಎರಡನೇ ಅವಧಿಯ ಉಳಿದ ಅವಧಿಗೆ ನೂತನ ಅಧ್ಯಕ್ಷರಾಗಿ ಕೆಜೆಪಿ ಬೆಂಬಲಿತ ಬಿಜೆಪಿ ಅಭ್ಯರ್ಥಿ ರಾಜೇಂದ್ರ ಬಿ. ಹಾವೇರಣ್ಣನವರ ಅವಿರೋಧ ಆಯ್ಕೆಯಾದರು.

ಜಿ.ಪಂ. ಸಭಾಭವನದಲ್ಲಿ ಶುಕ್ರವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಯಲ್ಲಿ ಕಬ್ಬೂರ ಜಿ.ಪಂ.ಕ್ಷೇತ್ರದ ಸದಸ್ಯ ರಾಜೇಂದ್ರ ಹಾವೇರಣ್ಣನವರ ಒಬ್ಬರೇ  ನಾಮಪತ್ರ ಸಲ್ಲಿಸಿದ್ದರಿಂದ ಅವರು ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತ ಗಂಗಾರಾಮ ಬಡೇರಿಯಾ ತಿಳಿಸಿದರು.

32 ಸದಸ್ಯ ಬಲದ ಜಿ.ಪಂ.ನಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಪಕ್ಷೇತರ ಸದಸ್ಯ ಸೇರಿದಂತೆ 30 ಜನರು ಹಾಜರಿದ್ದರು. ಅಧ್ಯಕ್ಷ ಆಕಾಂಕ್ಷಿಯಾಗಿದ್ದ ಯಲವಿಗಿ ಕ್ಷೇತ್ರದ ಜಿ.ಪಂ.ಸದಸ್ಯ ಕೃಷ್ಣಪ್ಪ ಸುಣ ಗಾರ ಹಾಗೂ ಇನ್ನೊಬ್ಬ ಸದಸ್ಯ ಮಹಾದೇವಪ್ಪ ಬಾಗಸರ ಚುನಾವಣಾ ಪ್ರಕ್ರಿಯೆಯಲ್ಲಿ ಗೈರಾಗಿದ್ದರು.

ರಾಜೇಂದ್ರ ಹಾವೇರಣ್ಣನವರ ಅವಿರೋಧವಾಗಿ ಆಯ್ಕೆ ಯಾಗುತ್ತಿದ್ದಂತೆ ಮಾಜಿ ಸಚಿವ ಸಿ.ಎಂ. ಉದಾಸಿ, ಹಂಗಾಮಿ ಅಧ್ಯಕ್ಷೆ ಗೀತಾ ಅಂಕಸಖಾನಿ, ಮಾಜಿ ಅಧ್ಯಕ್ಷ ಶಂಕ್ರಣ್ಣ ಮಾತನವರ ಅವರ ಅಭಿಮಾನಿಗಳು ಅಭಿ ನಂದಿಸಿದರು. ಅವರ ಬೆಂಬಲಿಗರು ಜಿ.ಪಂ.ಸಭಾಭವನದ ಹೊರಗಡೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಮನವೊಲಿಯಕೆಯಲ್ಲಿ ಯಶಸ್ವಿ:  ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಮಧ್ಯೆಯೂ ಕೆಜೆಪಿ ಮುಖಂಡರನ್ನು ಹಾಗೂ ಜಿ.ಪಂ. ಸದಸ್ಯರ ಮನವೊಲಿಸುವಲ್ಲಿ ರಾಜೇಂದ್ರ ಹಾವೇರಣ್ಣನವರ ಯಶಸ್ವಿಯಾಗ ಿದ್ದಾರೆ. ಬಹುತೇಕ ಜಿ.ಪಂ. ಸದಸ್ಯರಲ್ಲಿಯೇ ಹಾವೇರಣ್ಣನವರ ಅಧ್ಯಕ್ಷರಾಗುವುದಕ್ಕೆ ವಿರೋಧವಿತ್ತು. ಇದನ್ನು ಗಮನಿಸಿದ ಅವರು, ಮಾಜಿ ವಿಧಾನ ಪರಿಷತ್‌ ಸದಸ್ಯ ಶಿವರಾಜ ಸಜ್ಜನರಗೆ ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಪಟ್ಟು ಹಿಡಿದು ಅವರ ಮೂಲಕ ಸದಸ್ಯರ ಬೆಂಬಲ ಪಡೆ ಯುವಲ್ಲಿ ಯಶಸ್ವಿಯಾಗಿದ್ದಾರೆ.

ಮುಖಂಡರ ಮನ್ನಣೆ: ಜಿ.ಪಂ.ಅಧ್ಯಕ್ಷ ಸ್ಥಾನಕ್ಕೆ ರಾಜೇಂದ್ರ ಹಾವೇರಣ್ಣನವರ ಹಾಗೂ ಕೃಷ್ಣಪ್ಪ ಸುಣಗಾರ ತೀವ್ರ ಪೈಪೋಟಿ ನಡೆಸಿದ್ದರು. ಹಾವೇರಣ್ಣ ನವರ ಹಾಗೂ ಸುಣಗಾರ ಕೆಜೆಪಿ, ಬಿಜೆಪಿ ಮುಖಂಡರ ಕೋರಿದ್ದರು. ಅವರು ಸಹ ಕೊನೆಗಳಿಗೆವರೆಗೆ ಇಬ್ಬ ರಿಗೂ ಭರವಸೆ ನೀಡುತ್ತಲೇ ಬಂದಿ ದ್ದರು. ಅಷ್ಟೇ ಅಲ್ಲದೇ, ಇಬ್ಬರದೂ ನಾಮಪತ್ರ ಸಲ್ಲಿಸುವುದಾಗಿ ಹೇಳಿ, ಇಬ್ಬರು ಆಕಾಂಕ್ಷಿ ಅಭ್ಯರ್ಥಿಗಳಿಂದಲೂ ಸಹಿ ಮಾಡಿದ ನಾಮಪತ್ರ ಪಡೆದು ಕೊಂಡಿದ್ದರು.

ಆದರೆ, ನಾಮಪತ್ರ ಸಲ್ಲಿಕೆಗೆ ಕೇವಲ 5–10 ನಿಮಿಷ ಬಾಕಿ ಇದ್ದಾಗ ಕೆಜೆಪಿ ಮುಖಂಡರಾದ ಮಾಜಿ ಸಚಿವ ಸಿ.ಎಂ. ಉದಾಸಿ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ರಾಜೇಂದ್ರ ಹಾವೇರಣ್ಣನವರಿಗೆ ಮನ್ನಣೆ ನೀಡಿ ಅವರೊಬ್ಬರೇ ನಾಮಪತ್ರ ಸಲ್ಲಿಸುವಂತೆ ಕಾರ್ಯತಂತ್ರ ರೂಪಿಸಿದರು. ಹೀಗಾಗಿ ಹಾವೇರಣ್ಣನವರ ಅವಿರೋಧ ಆಯ್ಕೆ ಸಾಧ್ಯವಾಯಿತು.

ದೂರ ಉಳಿದ ಬಿಜೆಪಿ: ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಾಗಿಯೇ ಮಾಜಿ ಸಚಿವ ಹಾಗೂ ಶಾಸಕ ಬಸವರಾಜ ಬೊಮ್ಮಾಯಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಸೋಮಣ್ಣಬೇವಿನಮರದ ಒಂದೆರಡು ಸಭೆಗಳನ್ನು ನಡೆಸಿದ್ದರು. ಆದರೆ, ಜಿ.ಪಂ.ನ 32 ಸದಸ್ಯರಲ್ಲಿ 27 ಸದಸ್ಯರು ಬಿಜೆಪಿಯವರಿದ್ದಾಗಲೂ ಅಧ್ಯಕ್ಷ ಸ್ಥಾನಕ್ಕೆ ತನ್ನ ಅಭ್ಯರ್ಥಿ ಹಾಕಲು ಹಿಂದೇಟು ಹಾಕಿದರು.

ಮೂವರು ಅಭ್ಯರ್ಥಿಗಳಲ್ಲಿ ಹಾವೇರಣ್ಣನವರ ಸಂಪೂರ್ಣ ಕೆಜೆಪಿ ಮುಖಂಡರನ್ನು ಅವಲಂಬಿಸಿದ್ದರೆ, ಇನ್ನಿಬ್ಬರು ಅಭ್ಯರ್ಥಿಗಳಾದ ಕೃಷ್ಣಾ ಸುಣಗಾರ ಹಾಗೂ ಸರೋಜಾ ಆಡಿನ ಬಿಜೆಪಿ ಹಾಗೂ ಕೆಜೆಪಿ ಮುಖಂಡರಿ ಬ್ಬರನ್ನು ಅವಲಂಬಿಸಿದ್ದರು. ಬಿಜೆಪಿ ಮುಖಂಡರು ಮಾತ್ರ ತಮ್ಮನ್ನು ಅವಲಂಬಿಸಿದ ಅಭ್ಯರ್ಥಿಗಳಿಗೆ ಬೆಂಬಲ ನೀಡದೇ ಚುನಾವಣೆಯಿಂದ ದೂರ ಉಳಿದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿಯ 27 ಸದಸ್ಯ ರಲ್ಲಿ ಕೆಜೆಪಿ ಬೆಂಬಲಿತ ಸದಸ್ಯರುಗಳೇ ಹೆಚ್ಚಾಗಿದ್ದರೂ, ತಾಂತ್ರಿಕವಾಗಿ ಬಿಜೆಪಿ ಯಲ್ಲಿದ್ದರು. ಬಿಜೆಪಿ ಮುಖಂಡರು ತಮ್ಮ ಬಳಿ ಬಂದ ಇಬ್ಬರಲ್ಲಿ ಒಬ್ಬರನ್ನು ಅಭ್ಯರ್ಥಿ ಮಾಡಿ, ಎಲ್ಲ ಬಿಜೆಪಿ ಸದಸ್ಯರಿಗೆ ಪಕ್ಷದಿಂದ ವಿಪ್‌ ಜಾರಿ ಮಾಡಿದ್ದರೇ ಗೆಲವು ಸಾಧಿಸುವುದರಲ್ಲಿ ಕಷ್ಟವೇನಿರಲಿಲ್ಲ. ಜಿಲ್ಲೆಯ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದ್ದುದರಿಂದಲೇ ಸುಲಭ ಅವಕಾಶಗಳನ್ನು ಬಳಸಿ ಕೊಳ್ಳಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತದೆ.

ಸುಣಗಾರ ವಿರೋಧ: ಕೆಜೆಪಿ ಮುಖಂಡ ರಾದ ಸಿ.ಎಂ.ಉದಾಸಿ ಹಾಗೂ ಶಿವ ರಾಜ ಸಜ್ಜನರ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಶುಕ್ರವಾರ ಬೆಳಗಿನವರೆಗೆ ನನಗೆ ಅವಕಾಶ ಮಾಡಿ ಕೊಡುವ ಭರವಸೆ ನೀಡಿ ನನ್ನನ್ನು ಮೋಸಗೊಳಿಸಿದ್ದಾರೆ ಎಂದು ಆರೋಪಿಸಿದ ಅಧ್ಯಕ್ಷ ಆಕಾಂಕ್ಷಿ ಸದಸ್ಯ ಕೃಷ್ಣಪ್ಪ ಸುಣಗಾರ, ಪ್ರವಾಸಿ ಮಂದಿ ರದಲ್ಲಿ ನಡೆದ ಕೆಜೆಪಿ ಮುಖಂಡರ ಹಾಗೂ ಸದಸ್ಯರ ಸಭೆಯನ್ನು ಬಹಿಷ್ಕರಿಸಿ ಮುಖಂಡರ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT