ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಕಣಿ ಸಾಹಿತ್ಯಕ್ಕೆ ಸಾಮುದಾಯಿಕ ಪ್ರಜ್ಞೆಯ ತಳಹದಿ: ಗೀತಾ ಶೆಣೈ

Last Updated 1 ಅಕ್ಟೋಬರ್ 2012, 19:05 IST
ಅಕ್ಷರ ಗಾತ್ರ

ಮಂಗಳೂರು: `ಇತ್ತೀಚಿನ ಕೊಂಕಣಿ ಮಹಿಳಾ ಸಾಹಿತ್ಯವು ಮಾತೃಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಸಮಾಜದ ಧುರೀಣರ ಕುರಿತು ವಿವರಗಳನ್ನು ನೀಡುವ ಆಶಯದಿಂದ ಸಾಮುದಾಯಿಕ ಪ್ರಜ್ಞೆಯ ತಳಹದಿಯ ಮೇಲೆ ಕಾರ್ಯವೆಸಗುತ್ತಿದೆ~ ಎಂದು ಸಂಶೋಧಕಿ ಡಾ.ಗೀತಾ ಶೆಣೈ ಅಭಿಪ್ರಾಯಪಟ್ಟರು.

`ಕೊಂಕಣಿ ಸ್ತ್ರೀ~ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನಗರದ ಕೊಂಕಣಿ ಅಕಾಡೆಮಿ `ಮಂಟಪ~ದಲ್ಲಿ ಆಯೋಜಿಸಿದ್ದ `ಕೊಂಕಣಿ ಮಹಿಳೆಯರ ಕೊಡುಗೆ~ ವಿಚಾರಸಂಕಿರಣದಲ್ಲಿ ಕೊಂಕಣಿ ಮಹಿಳಾ ಸಾಹಿತ್ಯಕ್ಕೆ ಲೇಖಕಿಯರ ಕಾಣಿಕೆ ಕುರಿತು ಅವರು ಮಾತನಾಡಿದರು. ಭಾಷಾಂತರ, ಸಂಪಾದನೆ, ಸಂಗ್ರಹ, ಜೀವನಚರಿತ್ರೆ, ನಿಘಂಟು ರಚನೆ, ವಿಜ್ಞಾನ, ಪಾಕಶಾಸ್ತ್ರ ಇತ್ಯಾದಿ ಪ್ರಕಾರಗಳಲ್ಲಿ ಡಾ. ಸುನೀತಾಬಾಯಿ, ಡಾ. ಜ್ಯೋತ್ಸ್ನಾ ಕಾಮತ್, ಸಂಧ್ಯಾ ಪೈ, ಜಯಶ್ರಿ ಶ್ಯಾನಭಾಗ್, ಗ್ಲೇಡಿಸ್ ರೇಗೊ ಮೊದಲಾದ ಲೇಖಕಿಯರು ಸಂಶೋಧನಾತ್ಮಕ ಕೃತಿಗಳನ್ನು ಪ್ರಕಟಿಸಿ ಕೊಂಕಣಿ ಮಹಿಳಾ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡುತ್ತಿದ್ದಾರೆ ಎಂದು ಗೀತಾ ಶೆಣೈ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT