ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ ಮೊಬೈಲ್ಗೆ ಚಾಲನೆ

Last Updated 6 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಜಾರಿಗೊಳಿಸಲು  ಬ್ಯಾಂಕುಗಳು  ಹೆಚ್ಚು ಹೆಚ್ಚು ಮುಂದೆ ಬರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕಿನ  (ಆರ್‌ಬಿಐ) ಉಪ ಗವರ್ನರ್ ಶ್ಯಾಮಲಾ ಗೋಪಿನಾಥ್ ಹೇಳಿದರು.

ಸೋಮವಾರ ಇಲ್ಲಿ ರಾಷ್ಟ್ರೀಕೃತ ಕೆನರಾ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಸೇವೆ  `ಕ್ಯಾನ್‌ಮೊಬೈಲ್~ಗೆ ಚಾಲನೆ ನೀಡಿದ ಅವರು,  ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕುಗಳು ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಲು ಮುಂದೆ ಬರಬೇಕು, ಇದಕ್ಕೆ ಸಂಬಂಧಿಸಿದಂತೆ  `ಆರ್‌ಬಿಐ~ ಈಗಾಗಲೇ  ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ ಎಂದರು.

`ಕ್ಯಾನ್ ಮೊಬೈಲ್~ ಗ್ರಾಹಕ ಸ್ನೇಹಿಯಾಗಿದ್ದು, ಸುರಕ್ಷಿತ ಮತ್ತು ತ್ವರಿತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ ಎಂದು ಕೆನರಾ ಬ್ಯಾಂಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್. ರಾಮನ್ ಅಭಿಪ್ರಾಯಪಟ್ಟರು.  `ಗ್ರಾಹಕರು ಯಾವ ಸಮಯದಲ್ಲಿ, ಎಲ್ಲಿಂದ ಬೇಕಾದರೂ ಬೆರಳ ತುದಿಯಲ್ಲಿ ಬ್ಯಾಂಕಿಂಗ್ ಸೌಲಭ್ಯ ಪಡೆಯಬಹುದು. ಇದು 24*7 ನಂತೆ ಕಾರ್ಯನಿರ್ವಹಿಸುತ್ತದೆ. ಖಾತೆ ಉಳಿತಾಯ ಪರಿಶೀಲನೆ, ನಗದು ವರ್ಗಾವಣೆ  ಸೇರಿದಂತೆ ಬಹುವಿಧ ಸೌಲಭ್ಯಗಳನ್ನು ಒಳಗೊಂಡಿದೆ~ ಎಂದರು.

`ಕ್ಯಾನ್ ಮೊಬೈಲ್~ನ ನೊಂದಾಯಿತ ಗ್ರಾಹಕರು ಕೊನೆಯ ಐದು ವಹಿವಾಟಿನ ವಿವರಗಳನ್ನು ಮೊಬೈಲ್ ಮೂಲಕ ಪರಿಶೀಲಿಸಬಹುದು. ಅಂತರ ಬ್ಯಾಂಕ್ ಮೊಬೈಲ್ ಪಾವತಿ (ಐಎಂಪಿಎಸ್) ಸೌಲಭ್ಯದಡಿ `ಜಿಪಿಆರ್‌ಎಸ್~ ಮತ್ತು `ಜಾವಾ~  ಸೌಲಭ್ಯ ಇರುವ ಮೊಬೈಲ್‌ಗಳಲ್ಲಿ 50 ಸಾವಿರದವರೆಗೆ ಹಾಗೂ ಉಳಿದ ಹ್ಯಾಂಡ್‌ಸೆಟ್‌ಗಳಲ್ಲಿ ರೂ 5 ಸಾವಿರದವರೆಗೆ ನಗದು ವರ್ಗಾವಣೆ ಮಾಡಬಹುದು. ಸದ್ಯ ಬ್ಯಾಂಕ್ ಈ ಸೇವೆಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುತ್ತಿಲ್ಲ ಎಂದರು. 

 `ಆರ್‌ಬಿಐ~ ಪ್ರಾದೇಶಿಕ ನಿರ್ದೇಶಕ ಪಿ. ವಿಜಯಭಾಸ್ಕರ್ ಮತ್ತಿತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT