ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಆಸೀಸ್ ಉತ್ತಮ ಮೊತ್ತ

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಪಳ್ಳೆಕೆಲೆ, ಶ್ರೀಲಂಕಾ (ಎಎಫ್‌ಪಿ): ಶಾನ್ ಮಾರ್ಷ್ (141) ಹಾಗೂ ಮೈಕ್ ಹಸ್ಸಿ (142) ಅವರ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ       ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ದಾಖಲಿಸಿದ್ದಾರೆ.

ಮಳೆಯ ಅಡ್ಡಿಯ ನಡುವೆಯೂ ಮೂರನೇ ದಿನವಾದ ಶನಿವಾರದ ಅಂತ್ಯಕ್ಕೆ ಪ್ರವಾಸಿ ಆಸೀಸ್ ತಂಡ 132 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 411ರನ್ ಗಳಿಸಿದೆ. 18 ಬೌಂಡರಿ ಸೇರಿದಂತೆ ಮಾರ್ಷ್ ಆಕರ್ಷಕ ಆಟವಾಡಿದರು. ಹಸ್ಸಿ ಆಟದಲ್ಲಿ 16 ಬೌಂಡರಿಗಳು ಸೇರಿವೆ. ಈ ಇಬ್ಬರೂ ಆಟಗಾರರು ನಾಲ್ಕನೇ ವಿಕೆಟ್‌ಗೆ 258 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಆಸೀಸ್ ಈಗ 237 ರನ್‌ಗಳ ಮುನ್ನಡೆ ಸಾಧಿಸಿದೆ.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ ಮೊದಲ ಇನಿಂಗ್ಸ್ 64.1 ಓವರ್‌ಗಳಲ್ಲಿ 174. ಆಸ್ಟ್ರೇಲಿಯಾ 132 ಓವರ್‌ಗಳಲ್ಲಿ 7 ವಿಕೆಟ್‌ಗೆ 411 ( ಶಾನ್ ಮಾರ್ಷ್ 141, ಮೈಕ್ ಹಸ್ಸಿ 142; ಸುರಂಗ ಲಕ್ಮಲ್ 102ಕ್ಕೆ2, ಸೂರಜ್ ರಂದೀವ್ 103ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT