ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಲಂಕಾಕ್ಕೆ ಇನಿಂಗ್ಸ್ ಮುನ್ನಡೆ

Last Updated 10 ಜುಲೈ 2012, 19:30 IST
ಅಕ್ಷರ ಗಾತ್ರ

ಪಲ್ಲೆಕೆಲೆ (ಪಿಟಿಐ): ತಿಸ್ಸಾರ ಪೆರೇರಾ (86 ಎಸೆತಗಳಲ್ಲಿ 75) ಅವರ ಬಿರುಸಿನಆಟದ ನೆರವಿನಿಂದ ಶ್ರೀಲಂಕಾ ತಂಡದವರು ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಿದ್ದಾರೆ.

ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮಂಗಳವಾರ ಲಂಕಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 100.2 ಓವರ್‌ಗಳಲ್ಲಿ 337 ರನ್ ಗಳಿಸಿತು. ಈ ಮೂಲಕ 111 ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ಪಾಕ್ ಮೂರನೇ ದಿನದಾಟದ ಅಂತ್ಯಕ್ಕೆ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದೆ.

ಮಳೆಯ ಕಾರಣ ಎರಡನೇ ದಿನದ ಆಟ ನಡೆದಿರಲಿಲ್ಲ. ಆದರೆ ಮೂರನೇ ದಿನ ಲಂಕಾದ ನೆರವಿಗೆ ಬಂದಿದ್ದು ತರಂಗ ಪರಣವಿತನಾ ( 75), ತಿಲಾನ ಸಮರವೀರ (73) ಹಾಗೂ ಪೆರೇರಾ. ಕೇವಲ 44 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಆತಿಥೇಯರ ಪಾಲಿಗೆ ಆಪತ್ಬಾಂಧವರಾಗಿದ್ದು ಪರಣವಿತನಾ ಹಾಗೂ ಸಮರವೀರ. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 143 ರನ್ ಸೇರಿಸಿದರು.

ಬಳಿಕ ಪೆರೇರಾ ಹಾಗೂ ಕುಲಶೇಖರ ತಂಡದ ಮೊತ್ತ ಹೆಚ್ಚಿಸಿದರು. ಪೆರೇರಾ 4 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದರು.

ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: ಮೊದಲ ಇನಿಂಗ್ಸ್ 72.5 ಓವರ್‌ಗಳಲ್ಲಿ 226 ಹಾಗೂ 6 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 27 (ನುವಾನ್ ಕುಲಶೇಖರ 9ಕ್ಕೆ1); ಶ್ರೀಲಂಕಾ: ಮೊದಲ ಇನಿಂಗ್ಸ್ 100.2 ಓವರ್‌ಗಳಲ್ಲಿ 337 (ತರಂಗ ಪರಣವಿತನಾ 75, ತಿಲಾನ ಸಮರವೀರ 73, ತಿಸ್ಸಾರ ಪೆರೇರಾ 75, ನುವಾನ್ ಕುಲಶೇಖರ 33; ಜುನೈದ್ ಖಾನ್ 70ಕ್ಕೆ5, ಸಯೀದ್ ಅಜ್ಮಲ್ 66ಕ್ಕೆ3).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT