ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪೊಲೀಸರಿಗೆ ಸಲಹೆ

Last Updated 17 ಡಿಸೆಂಬರ್ 2013, 6:03 IST
ಅಕ್ಷರ ಗಾತ್ರ

ಗದಗ: ಪೊಲೀಸ್ ಇಲಾಖೆಗೆ ಆರೋಗ್ಯವಂತ ಸಿಬ್ಬಂದಿ ಅವಶ್ಯಕತೆ ಇರುವುದರಿಂದ  ಪ್ರತಿ ದಿನ ಒಂದು ಗಂಟೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು  ಜಿಲ್ಲಾಧಿಕಾರಿ ಎನ್. ಎಸ್. ಪ್ರಸನ್ನ ಕುಮಾರ ಸಲಹೆ ನೀಡಿದರು.

ಬೆಟಗೇರಿಯ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಮೈದಾನದಲ್ಲಿ  ಸೋಮವಾರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು  ಪಾರಿವಾಳ ಹಾರಿಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಸಾರ್ವಜನಿಕರ ಪ್ರಾಣ, ಆಸ್ತಿ–ಪಾಸ್ತಿ ರಕ್ಷಣೆ ಯಲ್ಲಿ  ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು  ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಪ್ರತಿಭೆ ಪ್ರದರ್ಶನ ಹಾಗೂ ಸ್ಪರ್ಧಾ ಭಾವನೆ ಬೆಳೆಸಿಕೊಳ್ಳಲು ಸಹಾಕಾರಿಯಾಗಲಿದೆ. ಜಿಲ್ಲೆಯ ಕ್ರೀಡಾ ಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟ ದಲ್ಲಿ ಯಶಸ್ಸುಗಳಿಸಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ವೀರಣ್ಣ ಜಿ. ತುರುಮರಿ ಮಾತನಾಡಿ, ಶಿಸ್ತು ಸಂಯಮಕ್ಕೆ ಹೆಸರಾದ ಪೊಲೀಸ್ ಇಲಾಖೆಯ ಸಿಬ್ಬಂದಿ ತಮ್ಮ ದಿನನಿತ್ಯದ ಬಿಡುವಿಲ್ಲದ ಕೆಲಸಗಳ ನಡುವೆಯೂ ಕ್ರೀಡಾಭ್ಯಾಸ ಮಾಡಬೇಕು.  ಕ್ರೀಡಾ ಕೂಟಗಳು ಪ್ರೀತಿ ಮತ್ತು ವಿಶ್ವಾಸ ಹೆಚ್ಚಿಸುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ.ಎಸ್.ಡಿ. ಶರಣಪ್ಪ  ಮಾತನಾಡಿ, ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮತ್ತು ಅಪರಾಧಿಗಳಿಗೆ ತಕ್ಕ ಪಾಠ ಕಲಿಸುವ ಏಕೈಕ ಅಸ್ತ್ರ ಪೊಲೀಸ್ ಇಲಾಖೆ ಯಾಗಿದೆ. ಕರ್ತವ್ಯದ ಒತ್ತಡ ಬದಿಗಿಟ್ಟು ಸಿಬ್ಬಂದಿ ಯಲ್ಲಿ ಉತ್ತೇಜನ ನೀಡುವ ನಿಟ್ಟಿನಲ್ಲಿ 1951 ರಿಂದ ಪೋಲೀಸ್ ಇಲಾಖೆ ರಾಷ್ಟ್ರ, ರಾಜ್ಯ ಹಗೂ ಜಿಲ್ಲಾ ಮಟ್ಟದಲ್ಲಿ ಕ್ರೀಡಾಕೂಟಗಳನ್ನು ಆಯೋಜಿ ಸುತ್ತ ಬಂದಿದೆ. ಕ್ರೀಡಾಪಟುಗಳು ಉತ್ತಮ ಪ್ರತಿಭೆ ತೋರಿ ರಾಷ್ಟ್ರ ಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ ತರಲಿ ಎಂದು ಹಾರೈಸಿದರು.

ಕ್ರೀಡಾ ಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಎಸ್. ಡಿ. ನಾಯಕ ಕ್ರೀಡಾ ಜೋತಿ ಸ್ವೀಕರಿಸಿದರು. ಎಸ್ಐ ಕೆ. ಎ. ಗಾಂಜಿ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು.  ಎಂ. ಟಿ. ಭಟ್  ನಿರೂಪಿಸಿದರು. ಡಿಎಸ್ಪಿ ವಿಜಯ ಡಂಬಳ ವಂದಿಸಿದರು.

  ಸಿಪಿಐಗಳಾದ ನಾಗರಾಜ ಅಂಬಲಿ, ವಿ. ಎನ್. ಪಾಟೀಲ, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳಾದ ಕೃಷ್ಣವೇಣಿ ಗುರ್ಲ ಹೊಸೂರ, ಜಯಶ್ರೀ ಮಾನೆ, ಶಹರ ಬಿಜೆಪಿ ಅಧ್ಯಕ್ಷ ಈಶಣ್ಣ ಮುನವಳ್ಳಿ,  ಮಾಧವ ಗಣಾ ಚಾರಿ, ನಗರ ಸಭಾ ಸದಸ್ಯರಾದ ಮಂಜುನಾಥ ಹೇಮಣ್ಣ ಮುಳಗುಂದ, ರಾಘವೇಂದ್ರ ಯಳವತ್ತಿ, ಶ್ರೀನಿವಾಸ ಕರಿ, ಮೇಘಾ ಮುದಗಲ್ಲ, ಪನ್ನುಬಾಯಿ ಬಾಗಡೆ, ಜಿ. ಬಿ. ಬಾಗಡೆ , ನಿವೃತ್ತ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT