ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕ್ರೀಡೆಯಿಂದ ಸರ್ವತೋಮುಖ ಬೆಳವಣಿಗೆ'

Last Updated 7 ಸೆಪ್ಟೆಂಬರ್ 2013, 6:33 IST
ಅಕ್ಷರ ಗಾತ್ರ

ಸುರಪುರ: ಮಾನಸಿಕ, ದೈಹಿಕ ಆರೋಗ್ಯದ ಬೆಳವಣಿಗೆಗೆ ಪ್ರತಿಯೊಬ್ಬರೂ ಕ್ರೀಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕ್ರೀಡಾಪಟುಗಳು ಆಟದಲ್ಲಿ ತೋರಿದ ಪ್ರತಿಭೆ ಸಂತಸ ತಂದಿದೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಉತ್ತಮ ಪ್ರತಿಭೆ ತೋರಿ ತಾಲ್ಲೂಕಿಗೆ ಹೆಸರು ತರಬೇಕು ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎನ್.ಆರ್.ಕುಲಕರ್ಣಿ ಹೇಳಿದರು.

ಇಲ್ಲಿಯ  ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಕ್ರೀಡೆ ವ್ಯಕ್ತಿಯ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಪ್ರೇರಕ. ವಿದ್ಯಾರ್ಥಿಗಳು ಬಾಲ್ಯದಿಂದಲೇ ದೈಹಿಕ ವ್ಯಾಯಾಮ, ಕಸರತ್ತುಗಳನ್ನು ರೂಢಿಸಿಕೊಳ್ಳಬೇಕು. ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಮಾಡಬೇಕಾದ ಅವಶ್ಯಕತೆ ಇದೆ ಎಂದರು.
ದೈಹಿಕ ಶಿಕ್ಷಣಾಧಿಕಾರಿ ಬಿ.ಆರ್.ಪೊಲೀಸ್ ಪಾಟೀಲ್ ಮಾತನಾಡಿ, ತೀರ್ಪುಗಾರರ ನಿರ್ಣಯ ಕ್ರೀಡಾಪಟುವಿನ ಭವಿಷ್ಯ ರೂಪಿಸುತ್ತದೆ.

ಸರಿಯಾದ  ನಿರ್ಣಯ ನೀಡಿದ ತೀರ್ಪುಗಾರರನ್ನು ಗೌರವಿಸಬೇಕು.  ಟಿವಿ ಮತ್ತು ಮೊಬೈಲ್‌ಗಳ ಲೋಕದಿಂದ ಹೊರಬಂದು ಆರೋಗ್ಯಕರ ದೇಹ ಬೆಳೆಸುವ ಆಟೋಟಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಸಂಜೀವ ದರಬಾರಿ, ಬಸವರಾಜ, .ಡಿ.ಎಸ್. ಮಠ, ಎಂ. ಆರ್. ಕುಲಕರ್ಣಿ ವೇದಿಕೆಯಲ್ಲಿದ್ದರು.

ಫಲಿತಾಂಶ-ಬಾಲಕಿಯರ ವಿಭಾಗ:  ಕಕ್ಕೇರಾ ಕಾಲೇಜ್ (ಪ್ರಥಮ), ಸುರಪುರ(ದ್ವೀತಿಯ), ಕೊಕ್ಕೋ: ಸುರಪುರ(ಪ್ರಥಮ), ಕಕ್ಕೇರಾ(ದ್ವೀತಿಯ), ವಾಲಿಬಾಲ್: ಅರುಂಧತಿ ಕಾಲೇಜ್ (ಪ್ರಥಮ), ಎಸ್‌ಬಿಆರ್ ಕಾಲೇಜು ಹಸನಾಪುರ (ದ್ವೀತಿಯ), ಥ್ರೊಬಾಲ್: ಎಸ್‌ಬಿಆರ್ ಕಾಲೇಜು (ಪ್ರಥಮ), ಬಾಲಕಿಯರ ಸಪಪೂಕಾ ಸುರಪುರ (ದ್ವಿತೀಯ). ಬಾಲ್‌ಬ್ಯಾಡ್ಮಿಂಟನ್: ಸುರಪುರ (ಪ್ರಥಮ), ಎಸ್‌ಬಿಆರ್ ಕಾಲೇಜು (ದ್ವಿತೀಯ).

ಬಾಲಕರ ವಿಭಾಗ, ಕಬಡ್ಡಿ: ಪ್ರಭು ಕಾಲೇಜು ಸುರಪುರ (ಪ್ರಥಮ), ಕಕ್ಕೇರಾ (ದ್ವಿತೀಯ), ಕೊಕ್ಕೊ : ಪ್ರಭು ಕಾಲೇಜು (ಪ್ರಥಮ), ಕಕ್ಕೇರಾ(ದ್ವಿತೀಯ), ವಾಲಿಬಾಲ್: ಪ್ರಭು ಕಾಲೇಜ್ (ಪ್ರಥಮ), ಹುಣಸಗಿ (ದ್ವಿತೀಯ), ಥ್ರೊಬಾಲ್: ಪ್ರಭು ಕಾಲೇಜು (ಪ್ರಥಮ), ಎಸ್‌ಬಿಆರ್ (ದ್ವಿತೀಯ), ಬಾಲ್ ಬ್ಯಾಡ್ಮಿಂಟನ್: ಪ್ರಭು ಕಾಲೇಜು (ಪ್ರಥಮ), ಎಸ್‌ಬಿಎಆರ್(ದ್ವಿತೀಯ), ಶೆಟಲ್: ಹುಣಸಗಿ (ಪ್ರಥಮ), ಪ್ರಭು ಕಾಲೇಜು (ದ್ವಿತೀಯ). ಪ್ರಶಸ್ತಿಗಳನ್ನು ವಾಲ್ಮೀಕಿ ವೇಣುಗೋಪಾಲ ನಾಯಕ ಕೊಡುಗೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT