ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಜಾಗದ ಸದುಪಯೋಗ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಮನೆ ಎಂದರೆ ಲಿವಿಂಗ್ ರೂಂ, ಅಡುಗೆ ಕೋಣೆ, ಮಲಗುವ ಕೋಣೆ ಮಾತ್ರವಲ್ಲ, ಅದರ ಮೂಲೆಮೂಲೆಯ ಬಗ್ಗೆಯೂ ಶ್ರದ್ಧೆ ಅಗತ್ಯ. ಹಾಗೆ ನೋಡುವಾಗ ಮನೆಯ ಮೆಟ್ಟಿಲು (ಸ್ಟೇರ್‌ಕೇಸ್)ಗಳತ್ತಲೂ ಗಮನ ಹರಿಸಬೇಕಾದ್ದು ಅಗತ್ಯ. ಮಹಡಿ ಮನೆಯಾದರೆ ಹತ್ತಲು ಸ್ಟೇರ್‌ಕೇಸ್ ಬೇಕೇ ಬೇಕು. ಕೆಲವು ಮನೆಗಳಲ್ಲಿ ಹೊರಭಾಗದಲ್ಲಿ ಸ್ಟೇರ್‌ಕೇಸ್‌ಗಳಿದ್ದರೆ, ಇನ್ನು ಕೆಲವೆಡೆ ಮನೆಯೊಳಗೆಯೇ ಸ್ಟೇರ್‌ಕೇಸ್‌ಗಳಿರುತ್ತವೆ. ಸಾಮಾನ್ಯವಾಗಿ ಮನೆಯನ್ನು ಬಾಡಿಗೆಗೆ ಕೊಡಲು ಇಚ್ಛಿಸುವವರು ಸ್ಟೇರ್‌ಕೇಸ್‌ಗಳನ್ನು ಮನೆ ಹೊರಗಡೆ ಇಡುತ್ತಾರೆ.

ಆದರೆ, ಹೊರಭಾಗದ ಸ್ಟೇರ್‌ಕೇಸ್‌ಗಳಿಗಿಂತ ಮನೆಯೊಳಗೆ ಸ್ಟೇರ್‌ಕೇಸ್‌ಗಳೇ ಚೆನ್ನ. ಮನೆಯೊಳಗೆ ಅವಿದ್ದಲ್ಲಿ ಹೆಚ್ಚಿನ ಜಾಗ ಆಕ್ರಮಿಸಿಕೊಂಡು ಬಿಡುತ್ತವೆ ಎನ್ನುವುದು ಸಹಜ. ಮಾತ್ರವಲ್ಲ, ಅವುಗಳ ಕೆಳಗಿನ ಜಾಗವೂ ವ್ಯರ್ಥ ಎನ್ನುವ ಅಳಲೂ ಇರುತ್ತದೆ. ಆದರೆ, ಈಗ ಅಂತಹ ಅಳಲು ಬೇಡ ಎನ್ನುತ್ತಾರೆ ಒಳಾಂಗಣ ವಿನ್ಯಾಸಗಾರರು. ಸ್ಟೇರ್‌ಕೇಸ್ ಕೆಳಗಿನ ಜಾಗವನ್ನೂ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬಹುದು ಎನ್ನುವ ಅವರು ಅದಕ್ಕೆ ಹಲವು ಉಪಾಯಗಳನ್ನು ಸೂಚಿಸುತ್ತಾರೆ. 

ಈಗಂತೂ ಮನೆ ಕಟ್ಟುವವರು ಬಹಳ ಜಾಣರು. ಮನೆಯೊಳಗಿನ ಒಂದಿಂಚೂ ಜಾಗ ವ್ಯರ್ಥವಾಗದಂತೆ ಅವರು ನೋಡಿಕೊಳ್ಳುತ್ತಾರೆ. ಹಾಗಾಗಿ ಸ್ಟೇರ್‌ಕೇಸ್‌ಗಳ ಕೆಳಗಿನ ಜಾಗದ ಸದುಪಯೋಗ ಅವರಿಗೆ ಚೆನ್ನಾಗಿ ಗೊತ್ತು.

ಸ್ಟೇರ್‌ಕೇಸ್‌ಗಳ ಕೆಳಗಿನ ಜಾಗವನ್ನು ಸಾಕಷ್ಟು ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬಹುದು. ಸಾಮಾನ್ಯವಾಗಿ ಈ ಜಾಗವನ್ನು ಎಲ್ಲರೂ ಸ್ಟೋರೇಜ್‌ಗೆಂದೇ ಬಳಸಿಕೊಳ್ಳುತ್ತಾರೆ. ದಿನನಿತ್ಯದ ಬಳಕೆಗೆ ಹೆಚ್ಚು ಬಾರದ ವಸ್ತುಗಳನ್ನು ಅಲ್ಲಿಡುವುದೇ ಸೂಕ್ತ ಎನ್ನುವುದು ಹಲವರ ಅಭಿಪ್ರಾಯ. ಸ್ಟೋರೇಜ್‌ಗಿಂತ ಅದನ್ನು ಬೇರೆ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳುವುದೇ ಉತ್ತಮ ಎಂದಾದಲ್ಲಿ ಹಲವು ಮಾರ್ಗಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.

ನೀವು ಪುಸ್ತಕಪ್ರಿಯರಾಗಿದ್ದರೆ ಅದೇ ಜಾಗದಲ್ಲಿ ರ‌್ಯಾಕ್‌ಗಳನ್ನು ಮಾಡಿಸುವ ಮೂಲಕ ಅಥವಾ ರ‌್ಯಾಕ್‌ಗಳನ್ನು ತಂದು ನಿಲ್ಲಿಸುವ ಮೂಲಕ ಸಣ್ಣ ಗ್ರಂಥಾಲಯವನ್ನೇ ಅಲ್ಲಿ ಸೃಷ್ಟಿಸಬಹುದು. ಒಂದು ಕುರ್ಚಿ ಮತ್ತು ಮೇಜು ಅದರ ಮೇಲೊಂದು ಟೇಬಲ್ ಲ್ಯಾಂಪ್ ಇಟ್ಟಲ್ಲಿ ಓದಲು ಅದಕ್ಕಿಂತ ಸೂಕ್ತ ಜಾಗ ಬೇರೊಂದಿಲ್ಲ. ಸ್ಟೇರ್‌ಕೇಸ್‌ನ ಅತ್ಯಂತ ಕೆಳಭಾಗವನ್ನು ಪುಸ್ತಕಗಳನ್ನಿಡಲು ಬಳಸಬಹುದಾಗಿದೆ.

ಸ್ಟೇರ್‌ಕೇಸ್ ಕೆಳಗೆ ಕುಳಿತು ಓದಲು ಮನಸ್ಸು ಬಾರದು ಎಂದಾದರೆ ಆ ಜಾಗವನ್ನು ಮನೆಯ ಆಫೀಸ್ ಕೋಣೆಯನ್ನಾಗಿಯೂ ಪರಿವರ್ತಿಸಬಹುದಾಗಿದೆ. ಸ್ಟೇರ್‌ಕೇಸ್‌ನ ಕೆಳಭಾಗದಲ್ಲಿ ರ‌್ಯಾಕ್‌ಗಳನ್ನು ಮಾಡಿಕೊಂಡು ಅ್ಲ್ಲಲಿ ಪುಸ್ತಕಗಳ ಬದಲು ಫೈಲ್ಸ್‌ಗಳನ್ನು ಇಡಬಹುದಾಗಿದೆ. ಅದೂ ಬೇಡ ಎಂದಲ್ಲಿ ಇಸ್ತ್ರಿ ಮಾಡುವ ಟೇಬಲ್ ಅಲ್ಲಿಡಬಹುದು.
ಅಥವಾ ಮಕ್ಕಳು ದಿನನಿತ್ಯ ಬಳಸುವ ಶಾಲಾ ಪುಸ್ತಕಗಳನ್ನು ಇಡಬಹುದು. ಇನ್ನೂ ಜಾಗ ಇದೆ ಎಂದರೆ ಅ್ಲ್ಲಲೇ ಒಂದು ಸಣ್ಣ ಮಂಚವನ್ನೂ ಹಾಕಬಹುದು.

ಇದ್ಯಾವುದೂ ಬೇಡವೆಂದಲ್ಲಿ ಸ್ಟೇರ್‌ಕೇಸ್ ಕೆಳಗೆ ರ‌್ಯಾಕ್‌ಗಳನ್ನು ಮಾಡಿ ಹಳೆ ಪೇಪರ್‌ಗಳನ್ನಿಡಬಹುದು. ನೋಡಿ, ಮನೆಯ ಮೂಲೆ ಮೂಲೆಯನ್ನೂ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಆದರೆ ಸ್ಟೇರ್‌ಕೇಸ್ ಮನೆಯೊಳಗಿದ್ದರೆ ಮಾತ್ರ ಇವೆಲ್ಲಾ ಸಾಧ್ಯ.

ಮಕ್ಕಳು ಬಯಸಿದಲ್ಲಿ ಈ ಜಾಗವನ್ನು ಸಣ್ಣ ಕೋಣೆಯಾಗಿ ಪರಿವರ್ತಿಸುವ ಮೂಲಕ ಅದನ್ನು ಮಕ್ಕಳ ಕೋಣೆಯಾಗಿಯೂ ಮಾಡಬಹುದಾಗಿದೆ.

ಇಷ್ಟೇ ಅಲ್ಲದೆ ಇದನ್ನು ಟಿವಿ ಮತ್ತು ಮ್ಯೂಸಿಕ್ ಸಿಸ್ಟಮ್‌ಗಳನ್ನಿಡುವ ಮೂಲಕ ಇದನ್ನು ಮನರಂಜನೆಯ ತಾಣವನ್ನಾಗಿಯೂ ಪರಿವರ್ತಿಸಬಹುದಾಗಿದೆ. ಆಗಾಗ ಔತಣಕೂಟ ಏರ್ಪಡಿಸುವವರ ಮನೆಯಲ್ಲಿ ಅಲಂಕಾರದ ಡೈನಿಂಗ್ ಸೆಟ್‌ಗಳ ದೊಡ್ಡ ಸಂಗ್ರಹವೇ ಇರುತ್ತದೆ. ಮಾತ್ರವಲ್ಲ ಇವುಗಳ ಬಗ್ಗೆ ಆಸಕ್ತಿ ಇರುವವರು ಶಾಪಿಂಗ್‌ಗೆ ಹೋದಾಗಲೆಲ್ಲಾ ಹೊಸ ಹೊಸ ಡೈನಿಂಗ್ ಸೆಟ್‌ಗಳನ್ನು ಖರೀದಿಸುತ್ತಲೇ ಇರುತ್ತಾರೆ. ಅವುಗಳನ್ನೆಲ್ಲ ಇಡಲು ಜಾಗ ಸಾಲದು ಎಂದಾದಲ್ಲಿ ಈ ಸ್ಟೇರ್‌ಕೇಸ್‌ಗಳ ಕೆಳಗಿನ ಜಾಗವನ್ನು ಬಳಸಿಕೊಳ್ಳಬಹುದಾಗಿದೆ.

ಇನ್ನೂ ಹೆಚ್ಚಿನ ಆಸಕ್ತಿಯ ವಿಷಯ ಎಂದರೆ ಈ ಜಾಗವನ್ನು ವೈನ್‌ಗಳನ್ನು ಸಂಗ್ರಹಿಸುವ ಜಾಗವಾಗಿಯೂ ಪರಿವರ್ತಿಸಬಹುದಾಗಿದೆ. ಇವೆಲ್ಲಾ ಏನೂ ಬೇಡ, ಅದು ಹಾಗೆಯೇ ತೆರೆದಿರಲಿ ಎಂದಾದಲ್ಲಿ ಅಲ್ಲೊಂದು ಅಂದದ ಅಕ್ವೇರಿಯಂ ಇಟ್ಟರೆ ಸಾಕು. ಮನೆಗೊಂದು ಅಂದದ ಕಳೆಯೂ ಬರುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT