ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೋಟಾ ನೋಟು ಪತ್ತೆಗೆ ಸಿಒಡಿ ತನಿಖೆ

Last Updated 16 ಜನವರಿ 2012, 7:55 IST
ಅಕ್ಷರ ಗಾತ್ರ

ಯಲ್ಲಾಪುರ:  ಖೋಟಾ ನೋಟು ಚಲಾವಣೆಯನ್ನೇ ಕಾಯಕವನ್ನಾಗಿಸಿ ಕೊಂಡ ವ್ಯಕ್ತಿಯೋರ್ವನನ್ನು ಯಲ್ಲಾ ಪುರ ಪೊಲಿಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದು, ಆತನ ಸಹಚರರ ಶೋಧನೆಗೆ ಜಾಲವನ್ನು ಬೀಸಲಾಗಿದೆ. ಇದು ವ್ಯಾಪಕ ಜಾಲವಾಗಿದ್ದು ಪ್ರಕರಣ ವನ್ನು ಸಿಓಡಿಗೆ ಒಪ್ಪಿಸಿದಾಗ ಮಾತ್ರ ಹೆಚ್ಚಿನ ಮಾಹಿತಿ ಲಭ್ಯವಾಗಬಹು ದಾಗಿದೆ ಎಂದು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ  ಕೆ.ಟಿ.ಬಾಲ ಕೃಷ್ಣ ಹೇಳಿದರು.

ಶನಿವಾರ ಖೊಟಾನೋಟು ಚಲಾ ವಣೆ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿ ಯೋರ್ವನನ್ನು ಬಂಧಿಸಿ ತನಿಖೆ ನಡೆಸಿದ ನಂತರ ಭಾನುವಾರ ಪೊಲೀಸ್ ಠಾಣೆಯಲ್ಲಿ ಮಾಧ್ಯಮದ ವರಿಗೆ ಮಾಹಿತಿ ನೀಡಿದರು.

ಭಟ್ಕಳದ  ಅಬ್ತಾಬ್ ಇಬ್ರಾಹಿಂ ಖಾನ್(35) ಎಂಬಾತ ಪಟ್ಟಣದ ಶನಿವಾರ ಮಧ್ಯಾಹ್ನ ಪಟ್ಟಣದ ಮದ್ಯದಂಗಡಿಯೊಂದರಲ್ಲಿ ಸಾವಿರ ರೂಪಾಯಿಯ ನೋಟನ್ನು ಚಲಾವಣೆ ಮಾಡಲು ಯತ್ನಿಸಿದಾಗ ಸಂಶಯ ಗೊಂಡು ವಿಚಾರಿಸಿದಾಗ ಓಡಿ ಹೋಗಿದ್ದಾನೆ.
 
ಆಗ ಸಂಶಯ ಬಲ ಗೊಂಡು ಆತನನ್ನು ಹಿಂಬಾಲಿಸಿದಾಗ ತಟಗಾರ್ ಕ್ರಾಸಿನ ಮನೆಯೊಂದರೊ ಳಗೆ ಹೋಗಿದ್ದಾನೆ. ಆಗ ಆತನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆತನಿಂದ ಸಾವಿರ ರೂಪಾಯಿಯ ಮೌಲ್ಯದ 75 ನೋಟುಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಎಂದು ಘಟನೆಯ ವಿವರ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಪ್ರಕರಣದಲ್ಲಿ ಭಾಗಿಯಾಗಿರುವ ಆತನ ಸಹಚರ ನೇಹದ್ ಅಹಮದ್ ಮುಲ್ಲಾ ಭಟ್ಕಳ್ (38) ಎಂಬುವನ ಬಂಧನಕ್ಕಾಗಿ ಪೊಲೀಸ್ ತಂಡ ರಚಿಸಲಾಗಿದೆ ಎಂದರು.

 ನಿವೃತ್ತ ಶಿಕ್ಷಕರ ಮಗನಾದ ಅಬ್ತಾಪ್ ಹೇಳುವಂತೆ 20 ಸಾವಿರ ರೂ.ನ ಅಸಲಿ ನೋಟುಗಳನ್ನು ನೀಡಿ ಒಂದು ಸಾವಿರ ರೂಪಾಯಿ ಮುಖ ಬೆಲೆಯ 75 ನಕಲಿ ನೋಟುಗಳನ್ನು ಬೆಂಗಳೂರಿನ ಕುಮಾರ್ ಎಂಬವರಿಂದ ಪಡೆದಿದ್ದೇನೆ. ಎಂದು ತಿಳಿಸಿದ್ದಾನೆ. ದ್ವಿತೀಯ ಪಿಯುಸಿ ಓದಿದ ಈತನನ್ನು 2002 ರಲ್ಲಿ ಹಿರೆಕೆರೂರಿನಲ್ಲಿ ಖೊಟಾ ನೋಟು ವ್ಯವಹಾರಕ್ಕೆ ಸಂಭಂದಿಸಿದಂತೆ ರಾಣೆಬೆನ್ನೂರಿನ ಮಂಜುನಾಥ, ಉಮೇಶ  ಹಾಗೂ ಕುಂದಾಪುರದ ಬಾಬು ಎಂಬವರೊಂದಿಗೆ ಬಂಧಿಸಿ 25 ತಿಂಗಳ ಕಾಲ ಜೈಲಿಗೆ ಕಳುಹಿಸಲಾಗಿತ್ತು ಪುನಹ ಅದೇ ಕಾಯಕವನ್ನು ಮುಂದು ವರೆಸಿದ್ದಾನೆ ಎಂದು ತಿಳಿಸಿದರು.

 ಇನ್ನೋರ್ವ ಆರೋಪಿಯನ್ನು ಶೀಘ್ರ ಬಂಧಿಸುವ ವಿಶ್ವಾಸವನ್ನು ವ್ಯಕ್ತ ಪಡಿಸಿದ ಎಸ್‌ಪಿ. ಬಾಲಕೃಷ್ಣ ವ್ಯವ ಹಾರದಲ್ಲಿ ಯಾರ‌್ಯಾರು ಭಾಗಿ ಯಾಗಿದ್ದಾರೆ. ನೋಟುಗಳು ಎಲ್ಲಿ ಮುದ್ರಣವಾಗಿವೆ, ಅಥವಾ ಪಾಕಿಸ್ತಾನದಿಂದ ಈ ನೋಟುಗಳು ಬಂದಿವೆಯೇ? ಎಂಬುದರ ಬಗ್ಗೆ ಮಾಹಿತಿಯನ್ನು ಸಿಓಡಿ ಮೂಲಕ ಕಲೆ ಹಾಕುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.

ಡಿವೈಎಸ್‌ಪಿ  ಎನ್.ಡಿ.ಬಿರ್ಜೇ ಮಾರ್ಗದರ್ಶನದಲ್ಲಿ ಮುಂಡಗೋಡು ಸಿಪಿಐ ಗಿರೀಶ ನೇತ್ರತ್ವದಲ್ಲಿ ಯಲ್ಲಾಪುರ ಪಿಎಸ್‌ಐ ಡಿ.ವೈ.ಹರ್ಲಾಪುರ, ಎಎಸ್‌ಐ ಗಣೇಶ ಜೋಗಳೇಕರ್, ಹವಾ ಲ್ದಾರ್ ಸುಬ್ರಾಯ ನಾಯ್ಕ, ಸಿಬ್ಬಂದಿ  ಜಯರಾಮ, ವಿನಾಯಕ, ವಿಠ್ಠಲ ಗೌಡ ಕಾಯಾಚರಣೆಯಲ್ಲಿ ಪಾಲ್ಗೊಂ ಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT